ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ ರಾಷ್ಟ್ರೀಯ ಅಥ್ಲೇಟ್ ಕೆ.ಆರ್.ರಾಘವೇಂದ್ರ ಕಿವಿಮಾತು

Source: sonews | By Staff Correspondent | Published on 26th December 2018, 10:53 PM | State News | Don't Miss |

ಕೋಲಾರ: ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡರೆ ಉತ್ತಮ ಆರೋಗ್ಯದೊಂದಿಗೆ ಉನ್ನತ ಸ್ಥಾನವನ್ನು ಗಳಿಸಬಹುದು ಎಂದು ರಾಷ್ಟ್ರೀಯ  ಅಥ್ಲೇಟ್ ಪಿ.ಸಿ.ಹಳ್ಳಿಯ ಕೆ.ಆರ್.ರಾಘವೇಂದ್ರ ಅವರು ಕಿವಿಮಾತು ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೋಲಾರದ ಅಟ್ಯಾಕರ್ಸ್ ವತಿಯಿಂದ ಆಯೋಜಿಸಿರುವ  ಜಿಲ್ಲಾ  ಪ್ರೀಮಿಯರ್ ಲೀಗ್ ಟೆನ್ನೀಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ   ಟೂರ್ನಿಮೆಂಟ್‍ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾಡನಾಡುತ್ತಾ, ನಶಿಸಿಹೋಗುತ್ತಿರುವ ಕ್ರೀಡೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಕತ್ರ್ಯವ್ಯವಾಗಿದೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಉನ್ನತ ಸ್ಥಾನಕ್ಕೇರಿತ್ತು. ಈಗ ಅದು ಮಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಬೇಕುಎಂದು ಹೇಳಿದರು. ಸಮಾರಂಭದಲ್ಲಿ ಪತ್ರಕರ್ತರಾದ ದುನಿಯಾ ಮುನಿಯಪ್ಪ, ಸಿ.ನಾರಾಯಣಸ್ವಾಮಿ, ಬೆಂಗಳೂರು ಸುರೇಶ್, ಕೆ.ಜಿ.ನಾಗರಾಜ್, ಅಂತರಾಷ್ಟ್ರೀಯ ಹಿರಿಯ ಅಥ್ಲೇಟ್‍ಗಳಾದ ಹೆಚ್.ಜಗನ್ನಾಥನ್, ವೆಂಕಟೇಶ್, ಗೌಸ್‍ಖಾನ್, ರಾಜ್ಯ ಮಟ್ಟದ ಅಥ್ಲೇಟ್‍ಗಳಾದ ರಾಜೇಶ್, ಪುರುಷೋತ್ತಮ್, ನಿವೃತ್ತ ಪೇದೆ ಕಾಮಧೇನಹಳ್ಳಿ ನಾರಾಯಣಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.  ಅಟ್ಯಾಕರ್ಸ್ ತಂಡದ ನಿರಂಜನ್ ಸ್ವಾಗತಿಸಿ, ವಂದಿಸಿದರು.

Read These Next