ವಾಜಪೇಯಿಯವರು ಭಟ್ಕಳಕ್ಕೆ ಬಂದ ಅನುಭವಗಳನ್ನು ಹಂಚಿಕೊಂಡ ಎ.ಎನ್. ಪೈ

Source: sonews | By sub editor | Published on 17th August 2018, 6:27 PM | Coastal News | State News | Don't Miss |

ಭಟ್ಕಳ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್‍ಜಿ ಯವರು 1987ರಲ್ಲಿ ಭಟ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭದ ತಮ್ಮ ಅನುಭವಗಳನ್ನು ಇಲ್ಲಿನ ಬಿಜಪಿ ಮಾಜಿ ಅಧ್ಯಕ್ಷ ಮುಖಂಡ ಅನಂತ್ ಪೈಯವರು ವಾರ್ತಾಭಾರತಿಯೊಂದಿಗೆ ಹಂಚಿಕೊಂಡಿದ್ದು ಅವರೊಬ್ಬ ಮಹಾನ್ ಮೇಧಾವಿಯಾಗಿದ್ದರು ಎಂದಿದ್ದಾರೆ.

ದಿನಾಂಕ 23-11-1987 ರಂದು ಉಡುಪಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಟಲ್ ಜಿಯವರು ಹೋಗುತ್ತಿದ್ದಾಗ  ಭಟ್ಕಳದಲ್ಲಿ 20 ನಿಮಿಷಗಳ ಕಾಲ ಅವರು ತಂಗಿದ್ದು  ಚನ್ನಪಟ್ಟಣ ದೇವಾಲಯದ ಆವರಣದ ವಿನಾಯಕ ರಂಗ ಮಂಟಪದಲ್ಲಿ ಏರ್ಪಾಡಾಗಿದ್ದ ಸಭೆಯಲ್ಲಿ ಬಿಜೆಪಿಯ ಬೆಳವಣಿಗೆ ಬಗ್ಗೆ ವಾಜಪೇಯಿಯವರು ಭಾಷಣ ಮಾಡಿದ್ದರು. ಆ ಕಾರ್ಯಕ್ರಮದಲ್ಲಿ ತಾವು ವಂದನಾರ್ಪಣೆ ಮಾಡಿದ್ದಾಗಿ ಅವರು ಸ್ಮರಿಸಕೊಂಡರು.

ಅಂದಿನ ಭಟ್ಕಳ ಪುರಸಭಾ ಅಧ್ಯಕ್ಷರಾದ ಡಿ. ಎಚ್ ಶಬ್ಬರ್ ಸಾಹೇಬರು ಮತ್ತು ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾಗಿದ್ದ ದಿ. ಡಾ. ಚಿತ್ತರಂಜನರವರು ಮತ್ತು ಇನ್ನೋರ್ವ ಪುರಸಭಾ ಸದಸ್ಯರು ಹಾಗೂ ಬಿಜೆಪಿ ಹಿರಿಯ ನಾಯಕರಾಗಿದ್ದ ದಿ.ಎನ್. ಜಿ. ಕೊಲ್ಲೆ ಯವರು ವಾಜಪೇಯಿಯವರನ್ನು ಭಟ್ಕಳದ  ಶಮ್ಸುದ್ದೀನ್ ವೃತ್ತದಲ್ಲಿ ಸ್ವಾಗತಿಸಿದ್ದರು. ಆಂದು ಪೊಲೀಸ್ ಅಧಿಕಾರಿ ಪೆಮ್ಮಯ್ಯ ಎಂಬುವವರ ಶಿಸ್ತಿನ ಸೆಲ್ಯೂಟ್ ಗೆ ಮಾರು ಹೋದ ವಾಜಪೇಯಿಯವರು ಪೊಲೀಸ್ ಅಧಿಕಾರಿಯ ಕೈಕುಲುಕಿ ಅವರನ್ನು ಅಭಿನಂಧಿಸಿದ್ದರು ಎಂದು ಸ್ಮರಿಸಿಕೊಂಡರು. 

ಶಿರಾಲಿಯ ಅಂದಿನ ಖ್ಯಾತ ವರ್ತಕರಾಗಿದ್ದ ದಿ.ಭಾಸ್ಕರ್ ಮಹಾಲೆಯವರು ವಾಜಪೇಯಿಯರೊಂದಿಗೆ ಮಾಡಿದ ಸಂಭಾಷನೆಯನ್ನು ಎ.ಎನ್.ಪೈ ಸ್ಮರಿಸಿಕೊಂಡಿದ್ದು ಹೀಗೆ. 
 

ಭಾಸ್ಕರ ಮಹಾಲೆ-  ಮೈ.....ಆಪ್ ಪ್ರಧಾನಮಂತ್ರಿ ಬನನಾ ದೆಖನಾ ಚಾಹತಾ ಹು.
ವಾಜಪೇಯಿಜಿ-  ಮೆರೆಕೊ ಉಮ್ಮಿದ್ ನಹಿ ಹೈ...... ಮೈಏಕ್ ಮಾಸ್ಟರ್ ಜಿ ಕಾ ಬೆಟಾ ಹು..... ದೇಶ್ ಕಾ ಸೇವಾ ಕರನೆ ಆಯಾ ಹು.
ಮಹಾಲೆ-  ಮೆರೆಕೊ ಉಮ್ಮಿದ್ ಹೈ..... ಆಪ್ ಏಕ್ ನ ಏಕ್ ದಿನ್ ಇಸ್ ದೇಶ ಕಾ ಪ್ರಧಾನಮಂತ್ರಿ ಬನೆಗಾ.

ಶಿರಾಲಿಯ ಭಾಸ್ಕರ ಮಹಾಲೆಯವರು ಅಂದು ಹೇಳಿದ್ದ ಮಾತು ಕಾಲಾನಂತರ ನಿಜವಾಗಿ ಈಗ ಇತಿಹಾಸವಾಗಿದೆ........... ವಾಜಪೇಯಿಯವರ ನೆನಪು ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿದೆ ಎನ್ನುತ್ತಾರೆ. 

Read These Next

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...