ಭಟ್ಕಳದಲ್ಲಿ ಬಿಜೆಪಿ ಸುನಿಲ್ ನಾಯ್ಕ ಭರ್ಜರಿ ಗೆಲುವು

Source: sonews | By sub editor | Published on 16th May 2018, 12:01 AM | Coastal News | State News | Don't Miss |

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ 83,172 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮಂಕಾಳ ವೈದ್ಯರನ್ನು 5,930 ಮತಗಳ ಅಂತರದಿಂದ ಸೋಲಿಸುವುದರ ಮೂಲಕ ಪ್ರಥಮಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. 

ಕಾಂಗ್ರೇಸ್ ನಿಂದ ವಲಸೆ ಬಂದು ಬಿಜೆಪಿ ಸೇರಿದ ಸುನಿಲ್ ನಾಯ್ಕ ಆರಂಭದಲ್ಲಿ ಮೂಲ ಬಿಜೆಪಿಗರಿಂದ ಹಲವು ತೊಂದರೆಗಳನ್ನು ಎದುರಿಸಿದ್ದು ಕೊನೆಗೂ ತಮ್ಮ ರಾಜಕೀಯ ಗುರು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಕೃಪಾಕಟಾಕ್ಷದಿಂದಾಗಿ ಬಿಜೆಪಿ ಟಿಕೇಟ್ ಪಡೆಯಲು ಯಶಸ್ವಿಯಾಗಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಗಾಗಿ ಪ್ರಭಲ ಪೈಪೋಟಿಯನ್ನು ಎದುರಿಸಿದ್ದು ಒಂದು ರೀತಿಯಲ್ಲಿ ಟಿಕೇಟ್ ಪಡೆದವರಿಗೆ ಗೆಲುವು ಖಚಿತ ಎಂದೇ ಹೇಳಲಾಗುತ್ತಿತ್ತು. 

2004ರಲ್ಲಿ ಮೋಹನ್ ಪಿ.ಸಿ ಅವರು ಕಾಂಗ್ರೆಸ್‍ನ ಸತ್ಯನಾರಾಯಣ ಸ್ವಾಮಿ ಅವರ ವಿರುದ್ಧ ಗೆಲುವು ಸಾಧಿಸಿದ ಬಳಿಕ, 2008ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ ಕಾಂಗ್ರೆಸ್‍ನ ಕೈ ವಶವಾಗಿತ್ತು. ಬಳಿಕ 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕ ಮಂಕಾಳ ವೈದ್ಯ ಗೆದ್ದ ಬಳಿಕ ಈ ಬಾರಿ ಅಲ್ಲಿ ಕೇಸರಿಯ ರಂಗು ಮೂಡಿದೆ. ಅದು ಕೂಡ ಭರ್ಜರಿ ಮತಗಳ ಅಂತರದಲ್ಲಿ ಬಿಜೆಪಿಯ ಅಭ್ಯರ್ಥಿ ಸುನೀಲ್ ನಾಯ್ಕ ಗೆಲುವು ಸಾಧಿಸುವುದು ಬಿಜೆಪಿಗರಿಗೆ ಹೇಳಲಾರದ ಸಂತೋಷ ಉಂಟು ಮಾಡಿದೆ.

ವಿಧಾನಸಭೆಗೆ ಸುನೀಲ್ ನಾಯ್ಕ ಈ ಬಾರಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದರು. ತಂದೆ ಬಿಳಿಯಾ ನಾಯ್ಕ ಪಂಚಾಯ್ತಿ ಅಧ್ಯಕ್ಷರಾಗಿದ್ದವರು. ಅವರ ಬಳಿಕ ಸುನೀಲ್ ಬ್ಯಾಂಕ್‍ಗಳ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ರಾಜಕೀಯ ರಂಗ ಪ್ರವೇಶಿದ್ದರು.

ಕಳೆದ 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಪ್ರತ್ಯೇಕವಾಗಿದ್ದ ಕಾರಣ ಕಾರ್ಯಕರ್ತರು ಗೊಂದಲದಲ್ಲಿದ್ದರು. ಆದರೆ, ಈ ಬಾರಿಯೂ ಆರಂಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹತ್ತಾರು ಸಂಖ್ಯೆಯಲ್ಲಿದ್ದ ಆಕಾಂಕ್ಷಿಗಳು ನಿಧಾನಕ್ಕೆ ತೆರೆಗೆ ಸರಿದಿದ್ದರು. ಅಂತಿಮವಾಗಿ ಸುನೀಲ ನಾಯ್ಕ ಅವರಿಗೆ ಟಿಕೆಟ್ ದೊರೆಯಿತು. ಅವರೇ ಹೇಳುವ ಪ್ರಕಾರ, `ಕಳೆದ ಬಾರಿ ಗೊಂದಲದಲ್ಲಿದ್ದ ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ ಕ್ಷೇತ್ರದಲ್ಲಿ ಪಕ್ಷಕ್ಕೆ ಭದ್ರ ತಳಹದಿ ಹಾಕಲು ಶ್ರಮಿಸಿದ್ದೆ. ನನ್ನ ಪಕ್ಷನಿಷ್ಠೆ ಹಾಗೂ ಪರಿಶ್ರಮವನ್ನು ಗಮನಿಸಿದ್ದ ವರಿಷ್ಠರು ನನಗೆ ಟಿಕೆಟ್ ನೀಡಿದ್ದರು' ಎಂದಿದ್ದರು.

ಭಟ್ಕಳದಲ್ಲಿ 2,14,694 ಮಂದಿ ಮತದಾರರಿದ್ದಾರೆ. ಅದರಲ್ಲಿ 1,65,207(ಶೇ 76.95) ಮತಗಳು ಈ ಬಾರಿ ಚಲಾವಣೆಯಾಗಿದ್ದವು. 

2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ಮಂಕಾಳ ಸುಬ್ಬ ವೈದ್ಯ 37,319 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ಇನಾಯತ್ ಉಲ್ಲಾ ಶಾಬಂದ್ರಿ ವಿರುದ್ಧ (27,435) 9,884 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ 83,172 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ (77,242) ಅವರಿಗಿತಂತ 5,930 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ವರ್ಕೌಟಾದ ಜಾತಿ ಕಾರ್ಡ್: ಚುನಾವಣೆಗೂ ಪೂರ್ವ ಕ್ಷೇತ್ರದ ಅತಿಹೆಚ್ಚು ಮತದಾರರನ್ನು ಹೊಂದಿರುವ ಸಮುದಾಯದವರಾದ ಸುನಿಲ್ ನಾಯ್ಕ ಈ ಬಾರಿ ಜಾತಿಲೆಕ್ಕಚಾರ ಹಾಕು ಹಿಂದುತ್ವದ ಕಾರ್ಡ್ ಬಳಸಿ ಗೆಲುವು ಸಾಧಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಹಿಂದುತ್ವದ ಆಧಾರವಾಗಿಟ್ಟುಕೊಂಡೇ ಸುನಿಲ್ ನಾಯ್ಕರಿಗೆ ಮತನೀಡುವಂತೆ ಮನವಿಮಾಡಿಕೊಂಡಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಾಗೂ ಅಪಾರ ಜನಪರ ಕಾರ್ಯಗಳ ನಡುವೆಯೂ ಹಾಲಿ ಶಾಸಕ ಮಾಂಕಾಳು ವೈದ್ಯ ಸೋಲನ್ನು ಅನುಭವಿಸುವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 
 

Read These Next

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...