ಹಾಡುಹಗಲೆ ಸಿನಿಮೀಯ ಮಾದರಿಯಲ್ಲಿ ಇಬ್ಬರು ಯುವಕರ  ಅಪಹರಣ

Source: S O News service | By Staff Correspondent | Published on 21st January 2017, 12:25 AM | Coastal News | State News | Don't Miss |

ಭಟ್ಕಳ: ಹಾಡುಹಗಲೆ ಸಿನಿಮೀಯ ರೀತಿಯಲ್ಲಿ ಏಕಾಎಕಿ ಮೂರು ಕಾರುಗಳಲ್ಲಿ ಬಂದ ಅಪರಿಚಿತ ಅಪಹರಣಕಾರರು ಬೈಕನಲ್ಲಿ ಹೋಗುತ್ತಿದ್ದ ಇಬ್ಬರನ್ನು ಬೈಕಿನಿಂದ ಎಳೆದು ಕಾರಿನಲ್ಲಿ ಎತ್ತಿಹಾಕಿಕೊಂಡು ಅಪಹರಣಗೈದ ಘಟನೆ ಶುಕ್ರವಾರ ಮದ್ಯಾಹ್ನ ಒಂದು ಗಂಟೆ ಇಲ್ಲಿನ ಬಂದರ್ ರಸ್ತೆಯ ೫ನೇ ಕ್ರಾಸ್ ಬಳಿ ನಡೆದಿದ್ದು ಅಪಹರಣಕಾರರು ಯಾರು ಯಾಕಾಗಿ ಯುವಕರನ್ನು ಅಪಹರಿಸಿದ್ದಾರೆ ಎನ್ನುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಬಂದರ್ ರಸ್ತೆಯ ಅಬ್ದುಲ್ ಅಲೀಮ್ ಎನ್ನುವವರು ನೀಡಿದ ಮಾಹಿತಿಯಂತೆ ಅವರು ಅಳಿಯ ಅಫ್ಝಲ್(೩೩) ಹಾಗೂ ಆತನ ಸ್ನೇಹಿತ ಅಬ್ದುಲ್ ಮಲೀಕ್(೪೦) ಎನ್ನುವವರು ಸುಮಾರು ಒಂದು ಗಂಟೆಗೆ ಶುಕ್ರವಾರದ ನಮಾಝ್ ನಿರ್ವಹಿಸಲು ಮನೆಯಿಂದ ತೆರಳಿದ್ದು ಅವರು ನಾಪತ್ತೆಯಾಗಿದ್ದು ಅವರ ಮಾಹಿತಿ ಲಭ್ಯವಾಗುತ್ತಿಲ್ಲ. ಆಝಾದ್ ನಗರ ನಿವಾಸಿ ಅಫ್ಝಲ್ ಹಾಗೂ ಸುಲ್ತಾನ್ ಸ್ಟ್ರೀಟ್ ನಿವಾಸಿ ಅಬ್ದುಲ್ ಮಲಿಕ್ ಕಾಣೆಯಾಗಿದ್ದು ಇವರೇ ಅಪಹರಣಕ್ಕೊಳಗಾಗಿರಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ. ಇವರನ್ನು ಯಾರು ಯಾಕಾಗಿ ಅಪಹರಣ ಮಾಡಿದ್ದಾರೆ? ಇದರ ಹಿಂದೇ ಯಾರ ಕೈವಾಡವಿದೆ. ಪೊಲೀಸರೇನಾದರೂ ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎತ್ತಿಕೊಂಡು ಹೋಗಿರಬಹುದೋ ಎಂಬ ಹಲವು ಅನುಮಾನಗಳಿಗೆ ಈ ಘಟನೆ ಕಾರಣವಾಗಿದೆ.

ಫಾರೆಸ್ಟ್ ಪೊಲೀಸರ ಕೃತ್ಯ?: ಬಂದರ್ ರೋಡ್ ನ ಐದನೇ ಕ್ರಾಸ್ ಬಳಿ ನಡೆದ ಈ ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸುವಂತೆ XV500 ವಾಹನದಲ್ಲಿ ಇಬ್ಬರ ಅಪಹರಣವಾಗಿದೆ. ಇಂತಹದ್ದೇ ವಾಹನವೊಂದು ಅರಣ್ಯ ಇಲಾಖೆ ಅಧಿಕಾರಿ ಬಳಿ ಇರುವುದರಿಂದ ಸಹಜವಾಗಿ ಅರಣ್ಯ ಇಲಾಖೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರನ್ನು ಬಂದರ್ ರಸ್ತೆಯಿಂದ ಎತ್ತಿಹಾಕಿಕೊಂಡು ಹೋಗಿರಬಹುದು ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಪುಷ್ಟಿ ಎಂಬಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮಾಧ್ಯಮಗಳು ಸಂಪರ್ಕಿಸಿದಾಗ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸರಿಯಾಗಿ ಸ್ಪಂಧಿಸದೆ ಮಾಹಿತಿ ನೀಡುವುದರಿಂದ ನುಣುಚಿಕೊಳ್ಳುತ್ತಿರುವುದು ಅನುಮಾನಗಳು ಇನ್ನಷ್ಟು ಪ್ರಭಲಗೊಂಡಿವೆ.

ಘಟನೆ ವಿವರ: ಶುಕ್ರವಾರ ಪ್ರಾರ್ಥನಾ ಸಮಯದಲ್ಲಿ ಮಧ್ಯಾಹ್ನ ೧ ಗಂಟೆಗೆ  ಬಂದರ್ ರಸ್ತೆಯ ಐದನೆ ಕ್ರಾಸ್ ಬಳಿ ನಿರ್ಜನ ಪ್ರದೇಶದಲ್ಲಿ ಬೈಕ್ ಬಂದಿದ್ದು ಅಲ್ಲಿ ಕೆಲ ಮನೆಗಳ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಓರ್ವ ಪ್ರತ್ಯಕ್ಷದರ್ಶಿ ಹೇಳುವಂತೆ “ಏಕಾಎಕಿ ಮೂರು ವಾಹನಗಳಲ್ಲಿ ಬಂದ ಜನರು ಬೈಕ್ ನಲ್ಲಿ ಬಂದಿದ್ದ ಇಬ್ಬರು ಯುಕವರನ್ನು ಎಳೆದಾಡಿಕೊಂಡು ಕಾರಿನಲ್ಲಿ ಎತ್ತಿಹಾಕಿಕೊಂಡರು. ಅವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಒಬ್ಬ ವ್ಯಕ್ತಿ ಆ ಇಬ್ಬರು ಯುವಕರ ಬೈಕನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ವಿವರ ನೀಡಿದರು.

ಈ ಘಟನೆಯನ್ನು ಅವಲೋಕಿಸಿದಾಗ ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು ಅಪಹರಣಕಾರರು ಯುವಕರನ್ನು ನಿರ್ಧಿಷ್ಠ ಸ್ಥಳವೊಂದಕ್ಕೆ ಬರಲು ಹೇಳಿ ಅಲ್ಲಿಗೆ ಬಂದ ನಂತರ ಯೋಜನೆಯಂತೆ ಅವರನ್ನು ಅಪಹರಿಸಿದ್ದಾರೆ. ಈ ಅಪಹರಣ ಘಟನೆಯು ಭಟ್ಕಳದ ಜನರಲ್ಲಿ ಆತಂಕವನ್ನು ಮೂಡಿಸಿದ್ದು ಬೆಂಗಳೂರು, ದಿಲ್ಲಿ, ಮುಂಬೈಗಳಲ್ಲಿ ನಡೆಯುವ ಘಟನಾವಳಿಗಳು ಈಗ ಭಟ್ಕಳದಂತಹ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ನಡೆಯುತ್ತಿರುವುದು ಜನರನ್ನು ಭಯಭೀತರನ್ನಾಗಿ ಮಾಡುತ್ತಿದೆ.

ಯುವಕರು ಹಾಗೂ ಅಪಹರಣಕಾರರ ನಡುವೆ ಮೊದಲೇ ಯಾವುದಾದರೂ ಸಂಬಂಧವಿತ್ತೇ? ಯಾವುದಾದರೂ ವ್ಯವಹಾರಕ್ಕೆ ಸಂಭಂಧಿಸಿದಂತೆ ಅಪಹರಣವಾಗಿದಿಯೇ? ಎನ್ನುವ ಪ್ರಶ್ನೆಗಳು ಜನರಲ್ಲಿ ಹುಟ್ಟಿಕೊಳ್ಳುತ್ತಿದ್ದು ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ ತನಿಖೆಯಷ್ಟೆ ಸರಿಯಾದ ಉತ್ತರ ಹೇಳಬಲ್ಲುದು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...