ವಿಶ್ವ ರಂಗಭೂಮಿ ದಿನಾಚರಣೆ: ರೋಗಿಗಳಿಗೆ ಹಣ್ಣುಹಂಪಲ ವಿತರಣೆ

Source: S O News service | By Staff Correspondent | Published on 28th March 2017, 12:16 AM | Coastal News | Don't Miss |

ಭಟ್ಕಳ: ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಶ್ರೀ ಗುರು ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆ  ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಗುರು ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆ ಅಧ್ಯಕ್ಷ ಅಶೋಕ ಮಹಾಲೆ ಮಾತನಾಡಿ, ಪ್ರತಿವರ್ಷವೂ ವೃತ್ತಿಪರ ಹಾಗು ಹವ್ಯಾಸಿ ರಂಗಭೂಮಿ ಕಲಾವಿದರಿಂದ ಜನಪರ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸುತ್ತೇವೆ. ಈ ವರ್ಷ ತಾಲೂಕಿನ ಆಸ್ಪತ್ರೆಯ ಬಡರೋಗಿಗಳಿಗೆ ಹಣ್ಣು ಹಂಪಲು ಹಾಲು ಬಿಸ್ಕಟ್ ವಿತರಿಸಿದೆವು. ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ರಂಗಭೂಮಿ ತರಬೇತಿ ಶಿಬಿರ ಆಯೋಜನೆ ನಡೆಯಬೇಕಿದ್ದು, ಕೆಲವು ಕಾರಣಗಳಿಂದ ಈ ವರ್ಷ ನಡೆಯುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಪ್ರತಿ ವರ್ಷ ರಂಗಭುಮಿ ಆಸಕ್ತಿ ಇರುವವರಿಗೆ ತರಬೇತಿ ಶಿಬಿರ ಆಯೋಜಿಸುತ್ತೇವೆ ಎಂದರು.
ಈ ದಿನದ ವಿಶೇಷವಾಗಿ ಏಪ್ರಿಲ್ ೨೨ರಂದು ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಖಂಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ  ಸೇಡಿನ ಜ್ವಾಲೆ ಎಂಬ ಸಾಮಾಜಿಕ ಹಾಗು ಹಾಸ್ಯ ನಾಟಕ ಪ್ರದರ್ಶನ ನಡೆಯಲಿದ್ದು, ಕಲಾಸಕ್ತರು ಬಂದು ಪ್ರೋತ್ಸಾಹಿಸಬೇಕೆಂದು ಇದೇ ಸಂಧರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲಾವಿದರ ವೇದಿಕೆಯಲ್ಲಿ ಸಂಘದ  ಗೌರವಾಧ್ಯಕ್ಷ ಕೆ.ಆರ್. ನಾಯ್ಕ, ಕಾರ್ಯದರ್ಶಿ ದೇವ ನಾಯ್ಕ ಸದಸ್ಯರಾದ ಶ್ರೀಧರ ನಾಯ್ಕ,  ಸತೀಶಕುಮಾರ, ಮಂಜುನಾಥ ಮುಂಡಳ್ಳಿ, ದೇವೇಂದ್ರ ನಾಯ್ಕ ಕಂಡೆಕೊಡ್ಲು, ನಾಗರಾಜ ಪಟಗಾರ,ಮಂಜುನಾಥ ಎಲ್. ನಾಯ್ಕ ಜಾಲಿ,  ಚಂದ್ರಕಾಂತ ನಾಯ್ಕ ಶಿರಾಲಿ, ವಿನಾಯಕ ಕಂಡೆಕೊಡ್ಲು, ಹಾಗು ಮುಂತಾದ ಸದಸ್ಯರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...