ಜೆಸಿಐ ವತಿಯಿಂದ ಸಿಂಡ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

Source: sonews | By sub editor | Published on 8th July 2018, 8:07 PM | Coastal News |

ಭಟ್ಕಳ : ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಹಾಗೂ ಜೆಸಿಐ ಭಟ್ಕಳ ಸಿಟಿ ಇವರ ಸಂಯಕ್ತ ಆಶ್ರಯದಲ್ಲಿ ಜೆಸಿಐ ಓರಿಯಂಟೇಷನ್ ತರಬೇತಿ ಕಾರ್ಯಕ್ರಮವನ್ನು ಇತ್ತಿಚಿಗೆ ಕುಮಟಾ ಸಿಂಡ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
    
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ಅರುಣಕುಮಾರ ಶಿರೂರು ಸ್ವದ್ಯೋಗ ಮಾಡಲು ಕೌಶಲ್ಯದ ಜೋತೆಗೆ ವ್ಯಕ್ತಿತ್ವ ವಿಕಸನ, ಮಾಹಿತಿ ಹಾಗೂ ಸಂವಹನದಂತಹ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಉದ್ಯೋಗಿಯಾಗಿ ಹೋರಹೊಮ್ಮಲು ಸಾಧ್ಯ ಎಂದು ತಿಳಿಸಿದರು. ಜೆಸಿಐ ತನ್ನ ಸದಸ್ಯರಿಗೆ ಇದರ ಬಗ್ಗೆ ತರಬೇತಿ ನೀಡಿ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅಭಿವೃದ್ದಿ ಸಾಧಿಸಲು ಸಹಕಾರ ನೀಡುತ್ತದೆ ಎಂದು ತಿಳಿಸಿದರು. 

ಜೆಸಿಐ ಭಟ್ಕಳ ಸಿಟಿ ಅಧ್ಯಕ್ಷರಾದ ಕೆ ಜಬ್ಬರ ಸಾಹೇಬ್ ಮಾತನಾಡಿ ಭಟ್ಕಳ ಜೆಸಿಐ ಘಟಕದಿಂದ ಅನೇಕ ತರಬೇತಿ, ತಿಳುವಳಿಕೆ ಹಾಗೂ ಆರೋಗ್ಯ ತಪಾಷಣಾ ಶಿಬಿರ ಹಮ್ಮಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಕೆಲಸ ಮಾಡಿದೆ. ಈಗ ನಮ್ಮ ಘಟಕವು ಕುಮಟಾದಲ್ಲಿ ತರಬೇತಿ ಶಿಬಿರ ಎರ್ಪಡಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ನಮಗೆ ಹರ್ಷ ತಂದಿದೆ ಎಂದು ತಿಳಿಸಿದರು.
    
ಜೆಸಿಐ ಸದಸ್ಯರಾದ ನಾಗರಾಜ ಶೇಟ್, ನವೀನಕುಮಾರ ಎಟಿ, ಸುರೇಶ ಪೂಜಾರಿ, ಚಂದ್ರಕಾಂತ ಕಿಣಿ ಹಾಗೂ ಈಶ್ವರ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...