ರಾಮಚಂದ್ರ ನಾಯ್ಕ ಸಾವಿಗೆ ಸಂತಾಪ; ಕಲ್ಲುತುರಾಟಕ್ಕೆ ಖಂಡನೆ

Source: sonews | By Staff Correspondent | Published on 20th September 2017, 8:04 PM | Coastal News | State News | Don't Miss |


ಬುಧವಾರ ನಡೆದ ಪುರಸಭಾ ಸದಸ್ಯರ ವಿಶೇಷ ಸಭೆ

ಭಟ್ಕಳ : ಸೆ.೧೪ರಂದು ನಡೆದ ಪುರಸಭೆ ಅಂಗಡಿ ಮಳಿಗೆ ತೆರವು ಕಾರ್ಯಚರಣೆ ವೇಳೆ ಅಂಗಡಿಕಾರ ರಾಮಚಂದ್ರ ನಾಯ್ಕ ಎಂಬುವವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬುಧವಾರ ನಡೆದ ಪುರಭಾ ಸದಸ್ಯರ ವಿಶೇಷ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದು ಪ್ರತಿಭಟನೆಯ ನೆಪದಲ್ಲಿ ಪುರಸಭೆ ಕಟ್ಟಡಕ್ಕೆ ಕಲ್ಲುತೂರಾಟ ನಡೆಸಿ ಅಪಾರ ಹಾನಿಗೈದ ಘಟನೆಯನ್ನು ಸರ್ವಾನುಮತದೊಂದಿಗೆ ಖಂಡಿಸಲಾಯಿತು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಮುಹಮ್ಮದ್ ಮಟ್ಟಾ ಸಾದೀಕ್, ಭಟ್ಕಳದ ಪುರಸಭೆ ಅಂಗಡಿಕಾರರ ಪರವಾಗಿದೆ. ಇಲ್ಲಿನ ನಮ್ಮಲ್ಲಿ ಯಾವುದೇ ಬೇಧಭಾವವಿಲ್ಲ. ಸದಸ್ಯರ ಗಮನಕ್ಕೆ ತರದೇ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಮುಂದಿಟ್ಟುಕೊಂಡು ಅಂಗಡಿ ಕಬ್ಜಾ ಕಾರ್ಯಾಚರಣೆಗೆ ಕೈಹಾಕಿದ್ದಾರೆ ಇದರಿಂದಾಗಿಯೆ ಸಮಸ್ಯೆಗಳು ಹುಟ್ಟಿಕೊಂಡಿದ್ದು ಅಧಿಕಾರಿಗಳು ಜಿಲ್ಲಾಧಿಕಾರಿಯ ಅಣತಿಯನ್ನು ನಡೆದುಕೊಂಡಿದ್ದು ಅಧ್ಯಕ್ಷರ ಹಾಗೂ ಸದಸ್ಯರ ಮಾತಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದರು. ನಾವು ಹಳೆಯ ಅಂಗಡಿಕಾರರ ಪರವಾಗಿಯೇ ಇದ್ದೇವೆ. ನಾನು ಕಾರ್ಯಚರಣೆ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಜೊತೆ ವಿನಂತಿಸಿಕೊಂಡರೂ ಅವರು ನನ್ನ ಮನವಿಗೆ ಬೆಲೆ ಕೊಡಲಿಲ್ಲ. ಕೇಳಿದರೆ ನಿಮ್ಮಿಂದ ಆಗಿದಿದ್ದರೆ ನಾನು ಕಾರವಾರದ ಅಧಿಕಾರಿಗಳನ್ನು ಕರೆಯಿಸಿ ಕಾರ್ಯಚರಣೆ ನಡೆಸುತ್ತೇನೆ ಎಂದು ತಿಳಿಸಿದರು. ಆದ್ದರಿಂದ ಜಿಲ್ಲಾಡಳಿತವೆ ಈ ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಸರಿಯಾದ ವಿವರಣೆ ಕೇಳಲು ಕಂದಾಯ ಅಧಿಕಾರಿಗಳು ಇನ್ನೂ ತನಕ ಕರ್ತವ್ಯಕ್ಕೆ ಹಾಜರಾಗದ ಕಾರಣ ಮುಂದಿನ ವಾರ ಇನ್ನೊಂದು ಸಭೆ ಕರೆದು ಅವರಿಂದ ವಿವರಣೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳೋಣಾ ಎಂದು ಸಭೆಗೆ ತಿಳಿಸಿದರು. 

ಪುರಸಭೆಯ ಅಂಗಡಿಗಳಲ್ಲಿ ಹಿಂದೂ-ಮುಸ್ಲಿಮ್ ಎಲ್ಲರೂ ಇದ್ದಾರೆ ನಾವು ಯಾವುದೇ ಒಂದೇ ಜಾತಿ ಅಥವಾ ಧರ್ಮದವರಿಗೆ ಅಂಗಡಿಗಳನ್ನು ನೀಡಿಲ್ಲ. ಇಲ್ಲಿ ಹಿಂದೂ-ಮುಸ್ಲಂ ಎಂದು ಬೇಧವನ್ನುಂಟು ಮಾಡುವುದುರ ಮೂಲಕ ಭಟ್ಕಳದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಹೇಳಿಕೆಗಳು ಸಂಘಪರಿವಾರದ ಮುಖಂಡರು ನೀಡುತ್ತಿರುವುದು ಸರಿಯಲ್ಲ ಎಂದರು.  

ಸದಸ್ಯ ವೆಂಕಟೇಶ ನಾಯ್ಕ ಪುರಸಭೆ ಅಧಿಕಾರಿಗಳು ಅಂಗಡಿ ಮಳಿಗೆ ತೆರವು ಕಾರ್ಯಚರಣೆ ಮಾಡುವ ಬಗ್ಗೆ ಸದಸ್ಯರ ಗಮನಕ್ಕೆ ತಂದಿಲ್ಲ. ಮೇಲಾಧಿಕಾರಿಗಳ ಅಣತಿಯಂತೆ ಸಭೆಯ ಗಮನಕ್ಕೆ ಯಾವುದೇ ಮಾಹಿತಿ ನೀಡದೇ ಬೆಳಿಗ್ಗೆ ೫ ಘಂಟೆಗೆ ಬಂದು ಕಾರ್ಯಚರಣೆ ನಡೆಸಿರುವುದೇ ಈ ಅವಘಡಕ್ಕೆ ಕಾರಣ ಎಂದು ತಿಳಿಸಿದರು. ಕಾರ್ಯಚರಣೆ ನಡೆಸುವ ವೇಳೆ ಅಗ್ನಿಶಾಮಕ ವಾಹನ ವಾಗಲಿ, ಅಂಬುಲೇನ್ಸ ವಾಹನವಾಗಲಿ ಸ್ಥಳದಲ್ಲಿ ಇರಲಿಲ್ಲ. ಸೂಕ್ತ ಮುನ್ನಚ್ಚರಿಕೆ ತೆಗೆದುಕೊಳ್ಳುದೇ ನಡೆಸಿರುವ ಕಾರ್ಯಚರಣೆಯಿಂದ ಒಂದು ಜೀವ ಬಲಿಯಾಗಿದ್ದು ಇದಕ್ಕೆ ಪುರಸಭೆ ಅಧಿಕಾರಿಗಳೆ ನೇರ ಹೊಣೆ ಹೊರತು ಸದಸ್ಯರಲ್ಲ ಎಂದು ತಿಳಿಸಿದರು. 

ಜಿಲ್ಲಾಡಳಿತ ಭಟ್ಕಳದಲ್ಲಿ ಹಿಂದೂ ಮುಸ್ಲಿಂ ಐಕತೆಯನ್ನು ಒಡೆಯುವ ಕೆಲಸ ಮಾಡುತ್ತಿದೆ. ಪುರಸಭೆಯಿಂದ ಹಿಂದೂ ಮುಸ್ಲಿಂ ಎಂಬ ಭಾವನೆ ಇಲ್ಲದೇ ೩ ಬಾರಿ ಹಾಲಿ ಅಂಗಡಿಕಾರರಿಗೆ ಮರುಕರಾರು ಮಾಡಿಕೋಡಬೇಕೆಂದು  ಠರಾವು ಮಾಡಿ ಕಳುಹಿಸಿಕೊಟ್ಟಿದ್ದರೂ, ನಮ್ಮ ಠರಾವಿಗೆ ೬ ತಿಂಗಳ ನಂತರ ಹಿಂಬರಹ ನೀಡಲಾಗುತ್ತದೆ. ಹಾಗಾದರೆ ಪುರಸಭೆ ಸದಸ್ಯರ ಠರಾವಿಗೆ ಇಲ್ಲಿ ಬೆಲೆ ಇಲ್ಲವೇ? ನಮಗೆ ತಿಳಿಸದೆ ಕಾರ್ಯಚರಣೆ ಮಾಡಿರುವ ಅಧಿಕಾರಿಗಳು ಈ ಘಟನೆಯ ಹೊಣೆಯನ್ನು ಅವರೇ ಹೊತ್ತುಕೊಳ್ಳಲಿ ಅವರೇ ಜನತೆಗೆ ಉತ್ತರ ನೀಡಲಿ ಎಂದು ಸಭೆಯಲ್ಲಿ ತಿಳಿಸಿದರು.  ರಾಮಚಂದ್ರ ನಾಯ್ಕ ಬೆಂಕಿ ಹಚ್ಚಿಕೊಂಡ ನಂತರವು ಅಧಿಕಾರಿಗಳು ಅಂಗಡಿಗೆ ಬೀಗ ಹಾಕುವ ಕಾರ್ಯದಲ್ಲಿ ನಿರತರಾಗಿದ್ದು, ಇವರಿಗೆ ಮಾನವಿಯತೆ ಇದೆಯೇ ಎಂದು ಪ್ರಶ್ನಿಸಿದರು. ಸದಸ್ಯ ಸಂದೀಪ ಶೇಟ್, ಫಾಸ್ಕಲ್ ಗೋಮ್ಸ ಹಾಗೂ ಡಾ. ಸಲೀಮ್ ಮಾತನಾಡಿ ಈ ಘಟನೆಯ ಹಿಂದೆ ಜಿಲ್ಲಾ ನಗರಾಭಿವೃದ್ದಿ ಕೋಶದ ಸಹಾಯಕ ಅಭೀಯಂತರ ಆರ್.ಪಿ,ನಾಯ್ಕರ ನೇರ ಕೈವಾಡವಿದ್ದು ಅವರೇ ಇದಕ್ಕೆ ಸಭೆಗೆ ಬಂದು ಉತ್ತರಿಸಬೇಕು ಎಂದು ತಿಳಿಸಿದರು. ಸದಸ್ಯ ಅಲ್ತಾಫ ಖರೂರಿ ಮಾತನಾಡಿ ಅಂಗಡಿ ಕಾರ್ಯಚರಣೆ ಮುಂದೂಡುವಂತೆ ಪುರಸಭೆ ಅಧ್ಯಕ್ಷರು ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡಾಗ ಇದು ನನ್ನ ಆಸ್ತಿ ನೀವು ಇದರಲ್ಲಿ ಹಸ್ತಕ್ಷೇಪ ಮಾಡುವುದು ಬೇಡಾ ನಾನು ಇದನ್ನು ಮಾಡಿಯೇ ತೀರುತ್ತೇನೆ ಎಂದಿದ್ದರು. ಈಗ ನಡೆದ ಎಲ್ಲಾ ಘಟನೆಗೆ ಜಿಲ್ಲಾಧಿಕಾರಿ ಹಾಗು ಮೇಲಾಧಿಕಾರಿಗಳೆ ಕಾರಣ ಎಂದು ತಿಳಿಸಿದರು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...