ಶಿಕ್ಷಕರಿಗಾಗಿ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆ

Source: sonews | By Staff Correspondent | Published on 6th December 2018, 5:51 PM | Coastal News | Don't Miss |

ಭಟ್ಕಳ:  ಶಿಕ್ಷಕರ ಸಹಪಠ್ಯ ಚಟುವಟಿಕೆಗಳು ಶಿಕ್ಷಣವನ್ನು ಮತ್ತಷ್ಟು ಬಲಶಾಲಿಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ನೋಡಲ್  ಅಧಿಕಾರಿ ಲತಾ ನಾಯ್ಕ ಹೇಳಿದರು.
  
ಅವರು ಮಂಗಳವಾರ ಇಲ್ಲಿನ ಆನಂದಾಶ್ರಮ ಅಂಗ್ಲ ಮಾದ್ಯಮ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಾರ್ಯಾಲಯ, ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನಡೆದ  ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಕರಿಗಾಗಿ ಎರ್ಪಡಿಸಿದ್ದ ಸ್ಪರ್ಧೆಗಳು ಅವರ ಜ್ಞಾನವನ್ನು ವಿಕಶನ ಮಾಡುವದರ ಜೊತೆಗೆ ಮಕ್ಕಳಲ್ಲಿಯೂ ಉತ್ತಮ ಕಲಿಕೆ, ಗುಣಾತ್ಮಕ ಶಿಕ್ಷಣ ನೀಡಲು ಸಾದ್ಯ. ಶಿಕ್ಷಣದ ಜ್ಞಾನ ಮತ್ತು ಗುಣಮಟ್ಟವನ್ನು ವೃದ್ಧಿಸಲು ಸಹಕಾರಿ ಎಂದರು. ಕ್ಷೇತ್ರ ಶಿಕ್ಷಾಣಾಧಿಕಾರಿ ಎಂ.ಆರ್. ಮುಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ದೈಹಿಕ ಶಿಕ್ಷಣ ಪರೀವೀಕ್ಷಕ ಬಿ.ಇ.ಒ ಕಚೇರಿಯ ಶ್ರೀಕಾಂತ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಜಂಬರಮಠ, ಮಾದ್ಯಮಿಕ ಶಾಲಾ ನೌಕರರ ಸಂಘದ ಸಂದೇಶ ಉಳ್ಳಾಕಾಶಿ, ಶಿಕ್ಷಣ ಸಂಯೋಜಕ ಆರ್.ಎಸ್ ಗೊಂಡ, ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಜಿ.ಹೆಗಡೆ, ಸಿಸ್ಟರ್ ಸರೀತಾ ಥೋರಸ್ ಇದ್ದರು. 
    
ಮುಂಡಳ್ಳಿ ಸ.ಪ್ರೌಢಶಾಲೆಯ ಶಿಕ್ಷಕಿ ಮಂಜುಳಾ ಶಿರೂರಕರ ಪ್ರಾರ್ಥನೆ, ತಾಲೂಕಾ ನೊಡೆಲ್ ಅಧಿಕಾರಿ ಶಂಕರ ಎನ್ ಉಪರ್ಗಿಮನೆ ಸ್ವಾಗತ, ಕೋಣಾರ ವಲಯದ ಶಿಕ್ಷಣ ಸಂಯೋಜಕ ಎಸ್.ಪಿ.ಭಟ್ ವಂದಿಸಿದರು. ಶಿಕ್ಷಕರಾದ ಮಂಜುಳಾ ಶಿರೂರಕರ ಹಾಗೂ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕರ ವಿವರ:  2018-19ನೇ ಸಾಲಿನ ಪ್ರಾಥಮಿಕ ಶಾಲಾ ವಿಭಾಗದ ಸಹಪಠ್ಯ ಚಟುವಟಿಕೆಗಳಾದ ಜಾನಪದ ಸ್ಪರ್ಧೆಯಲ್ಲಿ ಭಟ್ಕಳ ಶಿರಾಣಕೇರಿ ಸ.ಹಿ.ಪ್ರಾ.ಶಾಲೆಯ ಹೇಮಾ ನಾಯ್ಕ, ಆಶುಭಾಷಣ ಸ್ಪರ್ಧೆಯಲ್ಲಿ ಭಟ್ಕಳ ಕೋಡ್ಸುಳ ಸ.ಹಿ.ಪ್ರಾ.ಶಾಲೆಯ ಪರಮೇಶ್ವರ ನಾಯ್ಕ, ಪ್ರಭಂದ ಸ್ಪರ್ಧೆಯಲ್ಲಿ ಭಟ್ಕಳ ನೂಝ ಸ.ಹಿ.ಪ್ರಾ.ಶಾಲೆಯ ಸೀಮಾ ನಾಯ್ಕ, ಸ್ಥಳದಲ್ಲೆ ಪಾಠೋಪಕರಣಗಳ ತಯಾರಿಕೆ ಸ್ಪರ್ಧೆಯಲ್ಲಿ ಹೊನ್ನಾವರ ಕೆಕ್ಕಾರ-2 ಸ.ಹಿ.ಪ್ರಾ. ಶಾಲೆಯ ಸುಖಾಯಿನಿ ಎಸ್ ಭಟ್, ಸ್ಥಳದಲ್ಲೆ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಕಾರವಾರ ಮಲ್ಲಾಪುರದ ಸ.ಹಿ.ಪ್ರಾ. ಶಾಲೆಯ ಶಶಿಕಾಂತ ಅಂಕೋಲೆಕರ, ರಸಪ್ರಶ್ನೆ ಸ್ಪರ್ಧೆಯಲ್ಲಿ ಹೊನ್ನಾವರ ಸ.ಹಿ.ಪ್ರಾ.ಶಾಲೆಯಬಿ.ಎನ್ ಹೆಗಡೆ, ರಸಪ್ರಶ್ನೆ ವಿಜ್ಞಾನ ವಿಭಾಗದಲ್ಲಿ ಭಟ್ಕಳ ಗಾಂಧಿನಗರ ಶಾಲೆಯ ಹೇಮಾವತಿ ಎಸ್ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ.
    
ಪ್ರೌಢಶಾಲಾ ವಿಭಾಗದ ಜಾನಪದ ಗೀತೆಯಲ್ಲಿ ಕುಮಟಾ ಊರಕೇರಿಯ ಸರ್ಕಾರಿ ಪ್ರೌಢಶಾಲೆಯ ರಾಘವೇಂದ್ರ ಎಂ. ನಾಯ್ಕ, ಆಶುಭಾಷಣ ಸ್ಪರ್ಧೆಯಲ್ಲಿ ಭಟ್ಕಳ ಮುರ್ಡೇಶ್ವರದ ಜನತಾ ವಿದ್ಯಾಲಯದ ಮಹೇಶ ಬಿ. ಹನಬರಟ್ಟಿ, ಪ್ರಭಂದ ಸ್ಪರ್ಧೆಯಲ್ಲಿ ಕಾರವಾರ ಚೆಂಡಿಯಾದ ದಿ.ಪಿ.ಎನ್. ಪ್ರೌಢಶಾಲೆಯ ಗಣಪತಿ ಎ. ಗೌಡ, ಸ್ಥಳದಲ್ಲೆ ಪಾಠೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ಭಟ್ಕಳ ಕೋಡ್ಸಾಲನ ಸರ್ಕಾರಿ ಪ್ರೌಢಶಾಲೆ  ತುಕಾರಾಮ ಎನ್ ತಾಡುಕಟ್ಟಿ, ಸ್ಥಳದಲ್ಲೆ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಭಟ್ಕಳ ಮುಂಡಳ್ಳಿಯ ಸರ್ಕಾರಿ ಪ್ರೌಢಶಾಲೆಯ ಚನ್ನವೀರಪ್ಪ ಹೊಸಮನಿ, ರಸಪ್ರಶ್ನೆ(ಸಾಮಾನ್ಯ ಜ್ಞಾನ)ದಲ್ಲಿ ಭಟ್ಕಳ ಕುಂಟವಾಣಿ ಸರ್ಕಾರಿ ಪ್ರೌಢ ಶಾಲೆಯ ಸವಿತಾ ನಾಯ್ಕ, ರಸಪ್ರಶ್ನೆ ವಿಜ್ಞಾನ ವಿಭಾಗದಲ್ಲಿ ಹೊನ್ನಾವರ ಖರ್ವಾ ಸಿದ್ದಿವಿನಾಯಕ ಪ್ರೌಢಶಾಲೆಯ ಷಣ್ಮುಖ ಎಲ್ ನಾಯ್ಕ ಪ್ರಥಮ ಬಹುಮಾನಗಳನ್ನು ಪಡೆದಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...