ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ

Source: sonews | By sub editor | Published on 16th July 2018, 5:05 PM | Coastal News | Don't Miss |

ಜಾತಿ ಧರ್ಮ ಎನ್ನುವ ಬೇಧಭಾವವಿಲ್ಲದೆ ಇಂದಿನ “ಸಮಾಗಮ” ಎನ್ನುವ ಕಾರ್ಯಕ್ರಮದ  ಮೂಲಕ ಒಂದಾದ ಪ್ರÀಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ, ಈ ಕಾರ್ಯಕ್ರಮ ಶೈಕ್ಷಣಿಕ ಏಳ್ಗೆಯಲ್ಲಿ ಸಹಕಾರಿಯಾಗಲಿ ಎಂದು ಭಟ್ಕಳ  ಎಜ್ಯುಕೇಶನ್  ಟ್ರಸ್ಟ್‍ನ  ಅಧ್ಯಕ್ಷ  ಡಾ. ಸುರೇಶ ನಾಯಕ್ ಹೇಳಿದರು.

ಅವರು ದಿ. ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾಥಿಗಳಿಗೆ ಅಭಿನಂದಿಸುವ ‘ ಸಮಾಗಮ’ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 
            
ಮುಖ್ಯ ಅತಿಥಿಗಳಾದ ದುರ್ಗಾಪರಮೇಶ್ವರಿ ಫ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ. ಬಿ. ಮಡಿವಾಳ ಮತ್ತು ಸರಕಾರಿ ಫ್ರೌಢಶಾಲೆ, ಬಂದರನ ಮುಖ್ಯಾಧ್ಯಾಪಕ ವಿನಾಯಕ ಜಿ. ಅವಧಾನಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಶಿಸ್ತು, ಸಮಯ ಪಾಲನೆ, ನಿರಂತರ ಅಧ್ಯಯನ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಮತ್ತು ಮೊಬೈಲ್ ನ ನಿಯಮಿತ ಬಳಕೆಯಿಂದ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಹೇಳಿದರು.

ದ್ವಿತಿಯ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ದ್ವಿತೀಯ ಪಿಯುಸಿಯಲ್ಲಿ 100 ಪ್ರತಿಶತ ಫಲಿತಾಂಶ ದಾಖಲಿಸಿದ ಮಹಾವಿದ್ಯಾಲಯದ ಉಪನ್ಯಾಸಕರುಗಳನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಮತ್ತು ಶೈಕ್ಷಣಿಕ ಸಲಹೆಗಾರ ಬಿ.ಆರ್.ಕೆ.ಮೂರ್ತಿ ಮತ್ತು ಹಳೆ ವಿದ್ಯಾರ್ಥಿ ಅಕ್ಷಯ ಕೊಲ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಅಕ್ಷತಾ ಸ್ವಾಗತಿಸಿದರು, ದಿವ್ಯಾ ಪ್ರಭು ನಿರೂಪಿಸಿದರು ಮತ್ತು ಐಶ್ವರ್ಯ  ವಂದಿಸಿದರು. ನಂತರ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...