ಭಟ್ಕಳದಲ್ಲಿ ವಿಕಲಚೇತನರ ಮತದಾನ ಜಾಗೃತಿ ಕಾರ್ಯಕ್ರಮ

Source: sonews | By Staff Correspondent | Published on 21st March 2018, 11:55 PM | Coastal News |

ಭಟ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರಕನ್ನಡ, ಭಟ್ಕಳ ತಾಲೂಕಾಡಳಿತ, ತಾಲೂಕು ಪಂಚಾಯತ ಭಟ್ಕಳ, ಭಟ್ಕಳ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಇವರ ಆಶ್ರಯದಲ್ಲಿ ತಾಲೂಕು ವಿಕಲಚೇತನರ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಮಂಗಳವಾರ ನಡೆಯಿತು.
 

ಭಟ್ಕಳ ಸಹಾಯಕ ಆಯುಕ್ತ ಮಂಜುನಾಥ ಇಲ್ಲಿನ ಸಂಶುದ್ಧೀನ್ ಸರ್ಕಲ್‍ನಲ್ಲಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತ್ರಿಚಕ್ರ ವಾಹನದ ಮೂಲಕ ವಿಕಲಚೇತನರ ಜಾಥಾ ಶ್ರೀ ಗುರುಸುಧೀಂದ್ರ ಕಾಲೇಜಿನವರೆಗೆ ಸಾಗಿ ಮುಕ್ತಾಯ ಕಂಡಿತು. ನಂತರ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಕಾಲೇಜು ಕೊಠಡಿಯಲ್ಲಿ ನಡೆದ ಕವನ ವಾಚನ, ರಂಗೋಲಿ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಕಲಚೇತನರು ಉತ್ಸಾಹದಿಂದ ಪಾಲ್ಗೊಂಡರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಬಿಇಓ ಎಮ್.ಆರ್.ಮುಂಜಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಯಲ್ಲಮ್ಮ, ಭಟ್ಕಳ ಶಿಶುಅಭಿವೃದ್ಧಿ ಯೋಜನೆ ಅಧಿಕಾರಿ ಸುಶೀಲಾ, ಆರೋಗ್ಯಾಧಿಕಾರಿ ಈರಯ್ಯ ದೇವಾಡಿಗ ಮೊದಲಾದವರು ಭಾಗವಹಿಸಿದ್ದರು.
 

Read These Next