ಭಲ್ಲೆ ಎಸೆತದಲ್ಲಿ ಫರ್ಜಾದ್ ಆಹ್ಮದ್ ಜಿಲ್ಲಾಮಟ್ಟಕ್ಕೆ ಆಯ್ಕೆ

Source: sonews | By Sub Editor | Published on 13th September 2017, 7:22 PM | Coastal News | Don't Miss |

ಭಟ್ಕಳ: ಇಲ್ಲಿನ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಫರ್ಜಾದ್ ಆಹ್ಮದ್ ಭಲ್ಲೆ ಎಸೆತ(ಜಾವೆಲಿನ್ ಥ್ರೋ)ದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಾಧ್ಯಾಪಕ ಎಂ.ಆರ್. ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ತಾಲೂಕಿನ ಸರ್ಕಾರಿ ಪ್ರೌಢಶಾಲೆ ಬೆಳಕೆ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲ ಕ್ರೀಡಾಕೂಟದಲ್ಲಿ ನಡೆದ ಭಲ್ಲೆ ಎಸೆತ ಸ್ಪರ್ಧೆಯಲ್ಲಿ ೪೮ಮೀಟರ್ ದೂರ ಎಸೆಯುವುದರ ಮೂಲಕ ಪ್ರಥಮ ಸ್ಥಾನಗಳಿಸಿ  ಸಾಧನೆ ಮಾಡಿದ್ದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಚೆಸ್ ಸ್ಪರ್ಧೆಯಲ್ಲಿ ಅಬ್ದುಲ್ ಲತೀಫ್ ಶೇಖ್ ಎಂಬ ವಿದ್ಯಾರ್ಥಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾನೆ. ಮುಸ್ತಫೀಝ್ ಮಟ್ಟಾ ಹ್ಯಾಮರ್ ಎಸೆತದಲ್ಲಿ ತಾಲೂಕುಮಟ್ಟದಲ್ಲಿ ತೃತೀಯ ಸ್ಥಾನಗಳಿಸಿಕೊಂಡಿದ್ದಾನೆ.  ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ನಾಯ್ಕರನ್ನು ಅಭಿನಂದಿಸಿದ ಅವರು ಸದರಿ ವಿದ್ಯಾರ್ಥಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಅಭಿನಂದಿಸಿದ್ದಾರೆ. 
 

Read These Next

ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಇದ್ದು ಇಲ್ಲದಂತಾಗಿರುವ 108 ತುರ್ತು ಆರೋಗ್ಯ ಕವಚ (ಆಂಬ್ಯುಲೆನ್ಸ್)

ಭಟ್ಕಳ:ವಿಶ್ವ ಪ್ರಸಿದ್ದವಾದ ಮುರ್ಡೇಶ್ವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆಕಸ್ಮಿಕವಾಗಿ ...