ಭಟ್ಕಳ: ರೋಹಿಂಗ್ಯ ಮುಸ್ಲಿಮರ ರಕ್ಷಣೆಗೆ ಆಗ್ರಹಿಸಿ ಎಸ್.ಡಿ.ಪಿ‌ಐ ಪ್ರತಿಭಟನೆ

Source: sonews | By Sub Editor | Published on 13th September 2017, 7:46 PM | Coastal News | State News | Don't Miss |

ಭಟ್ಕಳ: ಮ್ಯಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಮರ ರಕ್ಷಣೆ ಮಾಡಬೇಕು, ಅಲ್ಲಿ ನ್ಯಾಯಾ ಮತ್ತು ಶಾಂತಿಯನ್ನು ಸ್ಥಾಪಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಮನವಿಪತ್ರವನ್ನು ಅರ್ಪಿಸಿದರು. 
ಮ್ಯಾನ್ಮಾರ್ ನಲ್ಲಿ ಬುದ್ಧಿಸ್ಟರ ಸರ್ಕಾರ ಮುಸ್ಲಿಮರ ಮೇಲೆ ಅತ್ಯಾಚಾರ ಮಾಡುತ್ತಿದೆ. ಅವರನ್ನು ದೇಶದಿಂದ ಹೊರಹಾಕುವ ಮೂಲಕ ಇದು ಅಂತರಾಷ್ಟ್ರೀಯ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಮನವಿಪತ್ರದಲ್ಲಿ ಆರೋಪಿಸಲಾಗಿದೆ. 
ರೋಹಿಂಗ್ಯನ್ನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು, ಅವರನ್ನು ಮಾನವರಂತೆ ಕಾಣಬೇಕು, ಯು.ಎನ್.ಒ ಮಧ್ಯಸ್ಥಿಕೆ ವಹಿಸುವುದರ ಮೂಲಕ ಅಲ್ಲಿ ಶಾಂತಿಸ್ಥಾಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತುರ್ಕಿ ಅಧ್ಯಕ್ಷ ತಯ್ಯಬ್ ಉರ್ದೋಗಾನ್ ರ ಕ್ರಮವನ್ನು ಸ್ವಾಗತಿಸಿದ ಎಸ್.ಡಿ.ಪಿ.ಐ ಭಾರತ ಸರ್ಕಾರವು ಸಹ ರೋಹಿಂಗ್ಯ ಮುಸ್ಲಿಮರ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆಯನ್ನು ವಹಿಸಬೇಕೆಂದು ಮನವಿಯಲ್ಲಿ ತಿಳಿಸಿದೆ. 
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮುಖಂಡರಾದ ಝಹಿರ್ ಆಹಮದ್ ಶೇಖ್, ಯೂಸೂಫ್ ಮುಲ್ಲಾ, ಸರ್ಫರಾಝ್ ಖಾನ್, ಅಝೀಮ್ ಮುಂತಾದವರು ಉಪಸ್ಥಿತರಿದ್ದರು. 

Read These Next

ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಇದ್ದು ಇಲ್ಲದಂತಾಗಿರುವ 108 ತುರ್ತು ಆರೋಗ್ಯ ಕವಚ (ಆಂಬ್ಯುಲೆನ್ಸ್)

ಭಟ್ಕಳ:ವಿಶ್ವ ಪ್ರಸಿದ್ದವಾದ ಮುರ್ಡೇಶ್ವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆಕಸ್ಮಿಕವಾಗಿ ...

25 ವರ್ಷಗಳ ಹಳೆಯ ಭೂ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್'ಗೆ ಕೋರ್ಟ್ ಆದೇಶ

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೂ ಭೂ ಸಂಕಟ ಎದುರಾಗಿದ್ದು, 25 ವರ್ಷಗಳ ಹಳೆಯ ಪ್ರಕರಣಕ್ಕೆ ...