ಸನಾತನ ಸಂಸ್ಥೆಯಿಂದ ದೇವಸ್ಥಾನದ ಸ್ವಚ್ಛತಾ ಕಾರ್ಯ

Source: sonews | By Sub Editor | Published on 13th January 2018, 12:42 AM | Coastal News |

ಭಟ್ಕಳ : ಸನಾತನ ಸಂಸ್ಥೆ ಮಂಗಳೂರು ಭಟ್ಕಳ ಶಾಖೆ ವತಿಯಿಂದ ಇಲ್ಲಿನ ಬಂದರ್ ರಸ್ತೆಯಲ್ಲಿನ ಶ್ರೀ ನಾಗಮಾಸ್ತಿ ದೇವಸ್ಥಾನದ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ದೇವಸ್ಥಾನದ ಒಳಾಂಗಣ, ಆವರಣ, ಮುಂಭಾಗ ಸೇರಿದಂತೆ ಸುತ್ತಮುತ್ತಲು ಸ್ವಚ್ಛತೆಯನ್ನು ಮಾಡಲಾಯಿತು. ಈ ಸಂಧಭದಲ್ಲಿ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯ ಸುಧಾಕರ ಮಹಾಲೆ, ಸನಾತನ ಸಂಸ್ಥೆ ವತಿಯಿಂದ ಪುಂಡಲೀಕ ಪೈ, ದಯಾನಂದ ಪ್ರಭು, ನಾರಾಯಣ ನಾಯ್ಕ, ಶಕುಂತಲಾ ನಾಯ್ಕ, ಗಂಗಾ ಮೋಗೇರ ಮುಂತಾದವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.         

Read These Next