ರೂರಲ್ ಐಟಿ ಕ್ವಿಝ್; ಶಮ್ಸ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Source: sonews | By Sub Editor | Published on 11th October 2017, 6:10 PM | Coastal News | State News | Don't Miss |

ಭಟ್ಕಳ: ಟಾಟಾ ಕನ್ಸಲ್ಟೆನ್ಸಿ ಪ್ರಾಯೋಜಕತ್ವದಲ್ಲಿ ಧಾರವಾಡದ ಡಾ.ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಮಂಗಳವಾರ ನಡೆದ ಬೆಳಗಾವಿ ವಿಭಾಗೀಯ ಮಟ್ಟದ ರೂರಲ್ ಐಟಿ ಕ್ವಿಝ್ ಸ್ಪರ್ಧೆಯಲ್ಲಿ ಭಟ್ಕಳದ ನ್ಯೂಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ರಾಜ್ಯಮಟ್ಟದ ರೂರಲ್ ಐ.ಟಿ. ಕ್ವಿಝ್ ಸ್ಪರ್ಧೆಗೆ ಆರ್ಹತೆಯನ್ನು ಪಡೆದುಕೊಂಡಿದ್ದಾರೆ. 
ಅ.೧೩ರಂದು ತುಮಕೂರಿನಲ್ಲಿ ಜರಗುವ ಐಟಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಅಮಾನುಲ್ಲಾ ದೊಣ್ಣ, ಫರ‍್ಹಾನ್ ಅಕ್ರಮಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಬೆಳಗಾವಿ ವಿಭಾಗದ ೫೫೫ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು  ೬ ತಂಡಗಳು ಅಂತಿಮ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದವು. ಅದರಲ್ಲಿ ಭಟ್ಕಳದ ಆನಂದಾಶ್ರಮ ಪಿಯು ಕಾಲೇಜ್, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನ್ಯೂ ಶಮ್ಸ್ ಸ್ಕೂಲ್ ನ ತಂಡಗಳೂ ಆರ್ಹತೆಯನ್ನು ಪಡೆದುಕೊಂಡಿದ್ದು ಅಂತಿಮಾ ಸುತ್ತಿನಲ್ಲಿ ಆನಂದಾಶ್ರಮ ಪಿಯು ಕಾಲೇಜ್ ಹಾಗೂ ನ್ಯೂ ಶಮ್ಸ್ ಸ್ಕೂಲ್ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ. 

Read These Next

ಕಾರವಾರ: ವಿದ್ಯಾಸಿರಿ  ಯೋಜನೆಗಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ ಅರ್ಜಿ ಆಹ್ವಾನ

ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರಕದೆ ಇರುವ ಹಾಗೂ ಮೆರಿಟ್ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿ   ತಿಂಗಳು ರೂ. 1500 ರಂತೆ ಶೈಕ್ಷಣಿಕ ...

ಮುಂಡಗೋಡ: ದಾಸ್ತಾನಿಟ್ಟ ಗೋಧಿಯಲ್ಲಿ ಹುಳುಗಳು-ಬಹಿರಂಗ ಪಡಿಸಿದ ಬಿಜೆಪಿ ಮುಖಂಡರು

ಮಾರ್ಕೇಟಿಂಗ್ ಸೊಸೈಟಿಯ ಗೋದಾಮಿನಲ್ಲಿ 8-10 ತಿಂಗಳಿಂದ ಶೇಖರಣೆ ಮಾಡಿದ್ದರಿಂದ ಬಡವರ ಪಡಿತರ ವಿತರಣೆಗೆ ಬಂದ ಗೋಧಿಯಲ್ಲಿ ಹುಳು-ಹುಪ್ಪಡಿ ...

ಶಿಡ್ಲಘಟ್ಟ:ರಾಜ್ಯದಲ್ಲಿ ಮಹಿಳೆಯರು ಶೈಕ್ಷಣಿಕ,ಸಾಮಾಜಿಕ,ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಲು ಮುನಿಯಪ್ಪ ಕರೆ

ಶಿಡ್ಲಘಟ್ಟ ತಾಲೂಕು ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಳ್ಳೂರು ಗ್ರಾಮದ ವನಿತಾಶ್ರೀನಿವಾಸ್‍ಗೆ ...