ಭಟ್ಕಳ: ರಸ್ತೆ ಅಪಘಾತ; ಓರ್ವ ಸ್ಥಳದಲ್ಲೇ ಸಾವು ಇಬ್ಬರು ಗಂಭೀರ

Source: sonews | By sub editor | Published on 2nd August 2017, 7:48 PM | Coastal News | Incidents | Don't Miss |

ಭಟ್ಕಳ: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಕಾಯ್ಕಿಣಿ ತೆರ‍್ನಮಕ್ಕಿ ಚರ್ಚ ಎದುರಿನ ರಾ.ಹೆ.ಯಲ್ಲಿ ಜರಗಿದೆ. 
ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಶಿರಾಲಿಯ ಕೋಟೆನಾಗಿಲು ನಿವಾಸಿ ಬೈಕ್ ಸವಾರ ಚಂದ್ರಶೇಖರ ಚೌಡು ನಾಯ್ಕ ಎಂದು ಗುರುತಿಸಲಾಗಿದೆ. 
ಭಟ್ಕಳ ಮಂಗಳವಾರದಂದು ರಾತ್ರಿ ಬೈಕುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಗಂಭೀರ ಗಾಯಗೊಂಡು ಭಟ್ಕಳ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಇನ್ನೊಂದು ಬೈಕಿನಲ್ಲಿದ್ದ ಸರ್ಪನಕಟ್ಟೆ ಸನಿಹದ ಬಿಟ್ಟಿಬೀಳುರಿನ ಮಹೇಶ ಮಂಜುನಾಥ ನಾಯ್ಕ ಹಾಗೂ ಅನಂತ ಸುಕ್ರ ನಾಯ್ಕ ಎಂದು ಗುರುರಿಸಲಾಗಿದ್ದು ಇವರರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.  
ಮೃತ ಬೈಕ್ ಸವಾರ ಚಂದ್ರಶೇಖರ ನಾಯ್ಕ ಮುರ್ಡೇಶ್ವರದಿಂದ ಶಿರಾಲಿಗೆ ಬರುತ್ತಿದ್ದಾಗ ಎದುರಿನಿಂದ ಮತ್ತೊಂದು ಬೈಕ್ ನಲ್ಲಿ ಬರುತ್ತಿದ್ದ ಮಹೇಶ, ಅನಂತ್ ಎಂಬುವವರು ಡಿಕ್ಕಿ ಹಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.  
ಡಿಕ್ಕಿಯ ರಭಸಕ್ಕೆ ಚಂದ್ರಶೇಖರನ ತಲೆಗೆ ಮತಿತ್ತರ ಭಾಗಕ್ಕೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಹೇಶ ಮತ್ತು ಅನಂತ್ ಎಂಬುವವರಿಗೆ ಕಾಲು, ಹೊಟ್ಟೆ ಮತ್ತಿತರ ಭಾಗಕ್ಕೆ ತೀವ್ರ ಗಾಯವಾಗಿದೆ. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಕೊಂಡೊಯ್ಯಲಾಯಿತು. ಹೆದ್ದಾರಿಯಲ್ಲೇ ಅಪಘಾತ ಸಂಭವಿಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕು ಕೂಡ ಅಡಚಣೆ ಉಂಟಾಯಿತು. ಈ ಕುರಿತಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Read These Next

ಭಟ್ಕಳಕ್ಕೆ ಆಗಮಿಸಿದ ಗಾಂಧಿ ಸ್ಪಬ್ಧ ಚಿತ್ರಕ್ಕೆ ತಾಲೂಕಾಡಳಿತ ಮತ್ತು ಶಿಕ್ಷಣ ಇಲಾಖೆಯಿಂದ ಸ್ವಾಗತ

ಭಟ್ಕಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ...

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...