ಮುರ್ಡೇಶ್ವರ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ಪ್ರಥಮ ವರ್ಷದ ಪ್ರಾರಂಭೋತ್ಸವ

Source: sonews | By Sub Editor | Published on 18th July 2017, 12:03 AM | Coastal News | Don't Miss |

ಭಟ್ಕಳ: ಮುರ್ಡೆಶ್ವರದ ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ಮೊದಲನೆ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಸಮಾರಂಭ ವಿದ್ಯಾರ್ಥಿ ಮತ್ತು ಪಾಲಕರ ಸಮ್ಮುಖದಲ್ಲಿ ಪಾಲಿಟೆಕ್ನಿಕ್ ಅಡಿಟೋರಿಯಮ್ ಹಾಲ್ ನಲ್ಲಿ ಜರಗಿತು. 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊನ್ನಾವರದ ಉದ್ಯಮಿ ಜೀವೋತ್ತಮ ನಾಯಕ,  ವಿದ್ಯಾರ್ಥಿಗಳು ಪ್ರಾಕೃತಿಕ ಸುಂದರ ತಾಣವಾಗಿರುವ ಮುರ್ಡೇಶ್ವರದಲ್ಲಿ ಪಾಲಿಟೆಕ್ನಿಕ್ ಕಾಲೇಜಿಗೆ ಬಂದಿರುವಿರಿ, ಪರಿಶ್ರಮದಿಂದ ಓದಿ, ಜೀವನದಲ್ಲಿ ಯಶಸ್ಸನ್ನು ಗಳಿಸಿ,  ಈ ಸಂಸ್ಥೆಗೆ ಮತ್ತು ತಮ್ಮ  ಪಾಲಕರಿಗೆ ಹೆಸರು ತನ್ನಿ ಎಂದು ಹರಸಿದರು. 
ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಸಂತೋಷ ಆರ್.ಎ  ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆ ಬೆಳೆದು ಬಂದ ಬಗ್ಗೆ, ಸಂಸ್ಥೆಯಲ್ಲಿ  ಸಿಗುವ ಸೌಲಭ್ಯಗಳ ಬಗ್ಗೆ, ಪಾಲಕರು ಮತ್ತು ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ವಿವರವಾಗಿ ತಿಳಿಸಿದರು.
ಪಾಲಿಟೆಕ್ನಿಕ್ ಉಪ ಪ್ರಾಚಾರ್ಯ ಕೆ. ಮರಿಸ್ವಾಮಿ ಮಾತನಾಡಿ, ಪಾಲಕರು ವಿದ್ಯಾರ್ಥಿಗಳು ಕೇಳಿದ್ದಷ್ಟು ಹಣ, ಬೇಡಿದ ಮೊಬೈಲು, ಬೈಕು ನೀಡಿದರೆ ವಿದ್ಯಾರ್ಥಿ ಜೀವನ ಬಂಗಾರ ಮಯವಾಗದೇ ತುಕ್ಕು ಹಿಡಿದ ಕಬ್ಬಿಣವಾಗಲು ಪಾಲಕರೆ ಕಾರಣವಾಗುತ್ತಾರೆ.   ಪಾಲಕರು  ತಮ್ಮ ವಿದ್ಯಾರ್ಥಿಗಳನ್ನು  ನಮ್ಮ ಸಂಸ್ಥೆಗೆ ಸೇರಿಸಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯುವುದಿಲ್ಲ.  ಪಾಲಕರು  ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಭಾಗ ಮುಖ್ಯಸ್ಥರನ್ನು, ಉಪನ್ಯಾಸಕರನ್ನು ಆಗಾಗ ಬಂದು ಬೇಟಿಯಾಗಿ  ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ  ತಮ್ಮ ಮಕ್ಕಳ  ಪ್ರಗತಿಯ ಬಗ್ಗೆ ಗಮನವಿಟ್ಟಾಗ, ವಿದ್ಯಾರ್ಥಿ ಹಾದಿ ತಪ್ಪದೇ ಯಶಸ್ವಿಯಾಗಿ ಗುರಿ ತಲುಪಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆರ್. ಎನ್.ಎಸ್.  ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ವಿ.ಹೆಗಡೆ ಮಾತನಾಡಿ, ಡಿಪ್ಲೋಮಾ ವಿದ್ಯಾರ್ಥಿಗಳು ಇಲ್ಲಿ ೩ ವರ್ಷ ಕಷ್ಟ ಪಟ್ಟರೆ ೩೦ ವರ್ಷಗಳ ಕಾಲ ಸುಖ ಜೀವನ ಅನುಭವಿಸುವಿರಿ, ಒಂದು ವೇಳೆ  ೩ ವರ್ಷ ಹಾಯಾಗಿದ್ದರೆ  ೩೦ ವರ್ಷ ಕಷ್ಟಪಡಬೇಕಾಗುತ್ತದೆ. ಶ್ರಮಪಟ್ಟು ವಿದ್ಯಾರ್ಥಿಗಳು ಓದಬೇಕೆಂದು ತಿಳಿಸಿದರು. ಎಲೆಕ್ಟ್ರೀಕಲ್ ವಿಭಾಗ ಮುಖ್ಯಸ್ಥರಾದ  ಸಾಹಿದತ್ತ  ಸ್ವಾಗತಿಸಿದರು, ದಿನೇಶ ಆಚಾರ‍್ಯ  ವಂದಿಸಿದರು. 

Read These Next

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...