ಧರ್ಮ ಸಂಸ್ಥಾಪನೆ ಮಠಗಳ ಕರ್ತವ್ಯ- ಕೇಂದ್ರ ಸಚಿವ ಸದಾನಂದ ಗೌಡ

Source: sonews | By Staff Correspondent | Published on 26th November 2017, 1:03 AM | Coastal News | State News | National News | Don't Miss |

ಭಟ್ಕಳ: ಧರ್ಮ ಸಂಸ್ಥಾಪನೆ ಮಾಡುವುದೇ  ಗುರುಗಳ ಹಾಗೂ  ಮಠಗಳ ಕರ್ತವ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು. ಅವರು ಉತ್ತರಭಾರತದ ಹರಿದ್ವಾರದಲ್ಲಿ ರವಿವಾರದಂದು ಬೆಳಿಗ್ಗೆ   ಉಜಿರೆಯ ಶ್ರೀರಾಮ ಕ್ಷೇತ್ರದ ನೂತನ  ಸಾಧನ ಕುಟೀರ ಕಟ್ಟಡದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ದಕ್ಷಿಣಭಾರತದ ಉಡುಪಿಯಲ್ಲಿ ಧರ್ಮಸಂಸತ್ ನಡೆದರೆ ಉತ್ತರಭಾರತದಲ್ಲಿ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ  ಹರಿದ್ವಾರದಲ್ಲಿ ನೂತನ ಸಾಧನಾ ಕುಟೀರದಲ್ಲಿ ಧರ್ಮಸಂಸತ್ ನಡೆದಿದೆ. ಇದೊಂದು ಅಸ್ಮರಣೀಯ ದಿನ  ಎಂದರಲ್ಲದೇ ಒಂದು ಸಮಾಜವು ಯಶಸ್ವಿಯಾಗಿ ಉಳಿಯಬೆಕಾದರೆ ಆ ಸಮಾಜದಲ್ಲಿ  ಸಂಸ್ಕ್ರತಿ, ಸಂಸ್ಕಾರ ಪ್ರೀತಿ ವಿಶ್ವಾಸ ಇದ್ದಾಗಲೇ ಆ ಸಮಾಜದ ಯಶಸ್ವಿಯಾರುವುದು  ಅದರಂತೆ ಸಮಾಜಕ್ಕೆ   ಗುರುಗಳ ಉತ್ತಮ ಮಾರ್ಗದರ್ಶದಿಂದ ಒಂದು ಉತ್ತಮ ಸಮಾಜ ನಿರ್ಮಾಣ ಆಗುವುದರಲ್ಲಿ  ಸಂದೇಹವೆ ಇಲ್ಲ. ಉತ್ತಮ ಸಮಾಜದಿಂದ ಈ ದೇಶವನ್ನು ಸದೃಡವಾಗಿ ಬೆಳೆಯಬಲ್ಲದು. ಶ್ರೀರಾಮ ಕ್ಷೇತ್ರದ ಸ್ವಾಮೀಜಿಗಳ ಬಗ್ಗೆ ನನಗೆ ಅನೋನ್ಯವಾದ ಸಂಭಂದವಿದ್ದು ಇವರು  ಸಮಾಜಕ್ಕೆ ಧರ್ಮದೊಂದಿಗೆ ಶಿಕ್ಷಣವನ್ನು ಉಚಿತವಾಗಿ ನೀಡಿ ಈ ಸಮಾಜ ಸದೃಡವಾಗಿ ಬೆಳೆಯಲು ಕಾರಣೀಕರ್ತರಾಗಿದ್ದಾರೆ. ಇವರ ಕಾರ್ಯಕ್ರಮ   ಇತರರಿಗೆ ಮಾದರಿಯಾಗಿ ಈ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಲಿ   ಸ್ವಾಮೀಜಿಗಳು ಯಾವುದೇ ಕಾರ್ಯ ಮಾಡಿದರೂ ಅದರಲ್ಲಿ  ಶಿಸ್ತು, ಭದ್ದತೆ ಹಾಗೂ ದಕ್ಷತೆ ಇರುತ್ತದೆ ಇವರ ಮಾರ್ಗದರ್ಶನದಿಂದ ಸಮಾಜದಲ್ಲಿ ಧರ್ಮ ಜಾಗೃತಿಯಾಗಿ ಉತ್ತಮ ಸಂಸ್ಕøತಿ ಬೆಳೆಯುವಂತಾಗಲಿ ಎಂದರು  
 . ವೇದಿಕೆಯಲ್ಲಿ ಉಪಸ್ಥಿತರಿದ್ದ   ಹರಿದ್ವಾರದ ಶ್ರೀ ಪ್ರೇಮಾನಂದಜಿ ಮಹಾರಾಜ ಸ್ವಾಮೀಜಿ,   ದೇವಾನಂದ ಸರಸ್ವತಿ  ಸ್ವಾಮೀಜಿ, ಶ್ರೀ ಸೋಮೇಶ್ವರನಂದಜೀ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ  ಭಟ್ಕಳ ಶಾಸಕ ಮಂಕಾಳ ವೈದ್ಯ ಮಾತನಾಡಿ ಧರ್ಮಸ್ಥಳ ಶ್ರೀರಾಮ ಕ್ಷೇತ್ರದಿಂದ ಸಮಾಜದ ಅತ್ಯಂತ ಕೆಳ ವರ್ಗದ ಬಡ ಮಕ್ಕಳೂ ಸಹ  ಶಿಕ್ಷಣವಂತರಾಗಿ ಈ ದೇಶದ ಆಸ್ತಿಯಾಗಲು  ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಕಾರಣೀಕರ್ತರಾಗಿದ್ದಾರೆ. ಅವರ ಎಲ್ಲಾ ಕಾರ್ಯಕ್ಕೂ ನನ್ನ ಸಹಾಯ ಯಾವತ್ತೂ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಕ್ಷೇತ್ರದ ಮಠಾಧೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಮಾತನಾಡಿ ಇಂದು ಮನುಷ್ಯನಲ್ಲಿ ಚಂಚಲತೆ ಅಹಂಕಾರ ಹೆಚ್ಚುತ್ತಿದ್ದು  ಭಗವಂತನಲ್ಲಿ ಇವೆಲ್ಲವನ್ನೂ ಬಿಟ್ಟು ಬಂದಾಗಲೆ ಭಗವಂತ ಆತನನ್ನು  ರಕ್ಷಿಸುತ್ತಾರೆ ಎಂದರಲ್ಲದೇ ಈ ಲೋಕದಲ್ಲಿ ಎಲ್ಲವೂ ಭಗವಂತದ ಇಚ್ಚೆಯಿಂದಲೇ ನಡೆಯುತ್ತಿದೆ. ಎಂದರು.  
 
ವೇದಿಕೆಯಲ್ಲಿ  ಕರ್ನಾಟಕ ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ  ಕಾಳೇಗೌಡ,   ಹರಿದ್ವಾರದ  ಮೇಯರ ಮನೋಜ ಗರ್ಗ,  ಆಶೀಶ್ ಗೌತಮ್, ಪೀತಾಂಬರ ಹರಾಜೆ,  ಉದ್ಯಮಿ  ಸದಾನಂದ ಬಂಗೇರ, ಬಗವತಿ ಪ್ರಸಾದ  ಉಪಸ್ಥಿತರಿದ್ದರು. ಪ್ರಾರಂಭದಲ್ಲಿ  ದೆಹಲಿಯ ಶ್ರೀರಾಮ ನಿರ್ಧಯ ಭಗವತಿ ನಿಕೇತನ ತಂಡವರಿಂದ ಶ್ರೀರಾಮ ಕೀರ್ತನೆ  ನಡೆಯಿತು.
 
ಪ್ರಾರಂಭದಲ್ಲಿ ಶಶಿಕಾಂತ  ದಿಂಗಬರ  ಸ್ವಾಗತಿಸಿದರು. ಗೌರಿಶಂಕರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ,, ಕಾಸ್ಕಾರ್ಡ ಬ್ಯಾಂಕ ಉಪಾಧ್ಯಕ್ಷ ಈಶ್ವರ ನಾಯ್ಕ, ಭಟ್ಕಳ ಶ್ರೀರಾಮ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ  ಶ್ರೀಕ್ಷೇತ್ರಕ್ಕೆ ವಿಶೇಷ ಸೇವೆ ಸಲ್ಲಿಸಿದ  ಹಲವು ಗಣ್ಯರನ್ನು ಸ್ವಾಮೀಜಿಗಳು ಶ್ರೀರಾಮ ಕ್ಷೇತ್ರದ ಪರವಾಗಿ  ಸನ್ಮಾನಿಸಿದರು.   ಉ.ಕ ಜಿಲ್ಲೆ, ಉಡುಪಿ. ಮಂಗಳೂರು, ಸೇರಿದಂತೆ ಹಲವು ರಾಜ್ಯದ ಹಲವು ಜಿಲ್ಲೆಗಳಿಂದ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
  
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...