ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ರೇಲ್ವೆ ಗೇಟ್ ಅಳವಡಿಸಿದ ಕ್ಯಾಟಲ್ ಗಾರ್ಡ್

Source: sonews | By Sub Editor | Published on 12th August 2017, 5:42 PM | Coastal News | Don't Miss |

ಭಟ್ಕಳ: ಇಲ್ಲಿನ ರೈಲು ನಿಲ್ದಾಣದಲ್ಲಿ ಮುಖ್ಯ ದ್ವಾರಕ್ಕೆ ಅಳವಡಿಸಿದ್ದ ಕ್ಯಾಟಲ್ ಗಾರ್ಡ್ (ಜಾನುವಾರುಗಳು ಒಳ ಹೋಗದಿರಲು ಅಳವಡಿಸುವ ಸರಳು) ಪ್ರಯಾಣಿಕರಿಗೆ ಕಿರುಕುಳವನ್ನುಂಟು ಮಾಡುತ್ತಿದೆ ಎಂದು ಹಲವಾರು ಪ್ರಯಾಣಿಕರು ಮಾಧ್ಯಮಗಳಿಗೆ ದೂರಿದ್ದಾರೆ. 
ಭಟ್ಕಳದ ಕೊಂಕಣ ರೈಲ್ವೆ ನಿಲ್ದಾಣಕ್ಕೆ ತೆರಳುವ ಗೇಟ್ ಬಳಿ ಯಾವುದೇ ಜಾನುವಾರುಗಳು ರೈಲ್ವೆ ನಿಲ್ದಾಣದೊಳಗೆ ಬರಬಾರದು ಎಂಬ ಉದ್ದೇಶದಿಂದ ಎರಡು ಕಡೆಗಳಲ್ಲಿ ಅಳವಡಿಸಲಾದ ಕ್ಯಾಟಲ್ ಗಾರ್ಡ್ ನ ಸರಳುಗಳು ತುಂಡಾಗಿದ್ದು, ೪ ತಿಂಗಳಿನಿಂದ ಈ ಭಾಗದ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಹಾಳಾದ ಕ್ಯಾಟಲ್ ಗಾರ್ಡ ಸರಿಪಡಿಸುವ ಕಾರ್ಯ ಮಾಡದೇ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಾನುವಾರುಗಳು ರೈಲು ನಿಲ್ದಾಣಕ್ಕೆ ಪ್ರವೇಶ ಮಾಡಬಾರದು ಎಂಬ ಉದ್ದೇಶದಿಂದ ಅಳವಡಿಸಲಾಗಿರುವ ಈ ಸರಳುಗಳು ಈಗ ಪ್ರಯಾಣಿಕರ ಪ್ರವೇಶಕ್ಕೆ ತೊಂದರೆ ನೀಡುತ್ತಿವೆ. ನಡೆದುಕೊಂಡು, ದ್ವಿಚಕ್ರ ವಾಹನ ಅಥವಾ ಅಟೋರಿಕ್ಷಾ ದಲ್ಲಿ ಬರುವ ಪ್ರಯಾಣಿಕರಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಬಾಯಿತೆರೆದುಕೊಂಡ ಸರಳುಗಳ ಸಂಧುಗಳಲ್ಲಿ ಬೈಕ್ ಅಥವಾ ಅಟೋ ರಿಕ್ಷಾದ ಚಕ್ರಗಳು ಸಿಲುಕಿಕೊಂಡು ಅವಾಂತವನ್ನು ಸೃಷ್ಟಿಸುತ್ತಿವೆ. 
ನಾಲ್ಕು ತಿಂಗಳಿಂದ  ಕ್ಯಾಟಲ್ ಗಾರ್ಡ ಸಂಪೂರ್ಣ ಹಾಳಾಗಿದ್ದು, ಅಳವಡಿಸಲಾಗಿದ್ದ ಸರಳುಗಳೆಲ್ಲ ತುಂಡಾಗಿ ಆಕಾಶ ಕಾಣುವಂತಾಗಿದೆ. ಇದರಿಂದ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ, ಸ್ಥಳಿಯರಿಗೆ ಸೇರಿದಂತೆ ಮುಖ್ಯವಾಗಿ ಎಲ್ಲಾ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇದರ ಪರಿಣಾಮ ಅದೆಷ್ಟೋ ವಾಹನ ಸವಾರರು ಈ ಕ್ಯಾಟಲ್ ಗಾರ್ಡ ದಾಟುವ ಸಂಧರ್ಭದಲ್ಲಿ ಬಿದ್ದು ಕೈಕಾಲುಗಳೆಲ್ಲ ಗಾಯವಾದ ಉದಾಹರಣೆಗಳಿವೆ. 
ಶುಕ್ರವಾರ ಪ್ರಯಾಣಿಕರನ್ನು ಸಾಗಿಸುವ ಆಟೋ ರಿಕ್ಷಾವೂ ಈ ಕ್ಯಾಟಲ್ ಗಾರ್ಡನಲ್ಲಿ ಬಿದ್ದಿದ್ದು, ಬಳಿಕ ಇಲ್ಲಿನ ಸ್ಥಳಿಯರೆಲ್ಲ ಸೇರಿ ಆಟೋಗೆ ಹಗ್ಗ ಕಟ್ಟಿ ಎಳೆದು ಮೆಲಕ್ಕೆತ್ತಿದ್ದಾರೆ. ಹಾಗೂ ಬೈಕ್ ಸವಾರ ಸಹ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿರುವುದು ಇದೆ. ಈ ಬಗ್ಗೆ ಇಲ್ಲಿನ ಕ್ಯಾಟಲ್ ಗಾರ್ಡನ ಸರಳು ತುಂಡಾಗಿರುವ ಪರಿಣಾಮ ಸಾಕಷ್ಟು ಬಾರಿ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾನಿಯಾದ ಕ್ಯಾಟಲ್ ಗಾರ್ಡ ಸರಿಪಡಿಸುವ ಬಗ್ಗೆ ರೈಲ್ವೆ ಅಧಿಕಾರಿಗಳು ಗಮನ ಹರಿಸದೇ ಸುಮ್ಮನಿರುವದು ಇಲ್ಲಿನ ಆಟೋ ರಿಕ್ಷಾ ಚಾಲಕರು, ಪ್ರಯಾಣಿಕರು ಹಾಗೂ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಸಮಸ್ಯೆ ಇದ್ದರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆ ಸ್ಥಳಿಯ ಆಟೋ ರಿಕ್ಷಾ ಚಾಲಕ ಆನಂದ ನಾಯ್ಕ ಮಾತನಾಡಿದ್ದು, “ ಈಗಾಗಲೇ ಮೌಖಿಕವಾಗಿ ೪ ರಿಂದ ೫ ಬಾರಿ ಮನವಿಯನ್ನು ಮಾಡಿದ್ದು, ಸಮಸ್ಯೆಯೂ ಇನ್ನಷ್ಟು ದೊಡ್ಡದಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರೆ ಅವರು ಬೇಜವಾಬ್ದಾರಿ ಉತ್ತರ ನೀಡಿ ಸ್ಥಳಿಯರ ಬಾಯಿ ಮುಚ್ಚಿಸುತ್ತಾರೆ. ಹಗಲು ರಾತ್ರಿ ತಿರುಗಾಡುವ ಜನರಿಗೆ ಈ ಮಾರ್ಗ ತಲೆನೋವಾಗಿ ಪರಿಣಮಿಸಿದೆ. “ ಎಂದರು.
ಈ ಬಗ್ಗೆ ಮಾಧ್ಯಮದವರು ರೈಲ್ವೆ ಅಧಿಕಾರಿಯನ್ನು ಸಂಪರ್ಕಿಸಿದಾಗ ಸಮಸ್ಯೆಯ ಬಗ್ಗೆ ನಮಗೆ ಅರಿವಿದ್ದು, ಕ್ಯಾಟಲ್ ಗಾರ್ಡನ್ನು  ಸೋಮವಾರದೊಳಗಾಗಿ ಸರಿಪಡಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ. 

Read These Next

ರಸ್ತೆ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ...

ಅಣಬೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆ ಯಿಂದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ 

ಮುಂಡಗೋಡ : ಪೌಷ್ಟಿಕಾಂಶದ ಪಡೆದು ಸದೃಡರಾಗಿ  ಹಾಗೂ ಅರ್ಥಿಕವಾಗಿ ಬಲಗೊಳ್ಳಲು ಅಣಬೆ ಬೇಸಾಯಕ್ಕೆ ಒತ್ತು ನೀಡುವಂತೆ ತೋಟಗಾರಿಕಾ ...