ಕೆಸರುಗದ್ದೆಯಾಗಿ ಮಾರ್ಪಟ್ಟ ರೇಲ್ವೆನಿಲ್ದಾಣ ರಸ್ತೆ; ಪ್ರಯಾಣಿಕರ ಪರದಾಟ

Source: sonews | By Staff Correspondent | Published on 26th June 2018, 7:47 PM | Coastal News | Don't Miss |

ಭಟ್ಕಳ: ಮೂಢಭಟ್ಕಳದ ಡಾ. ಚಿತ್ತರಂಜನ್ ಸರ್ಕಲ್ ನಿಂದ ಮುಟ್ಟಳ್ಳಿಯಾಗಿ ರೈಲ್ವೇ ನಿಲ್ಧಾಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಗಾಲದ ಆರಂಭದಿಂದಲೂ ಕೆಸರುಗದ್ದೆಯಾಗಿ ಮಾರ್ಪಾಡಾಗಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.   

ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಕೊಂಕಣ ರೈಲ್ವೇ ನಿಗಮದ ಹೆಚ್ಚಿನ ಎಲ್ಲಾ ರೈಲುಗಳಿಗೂ ಕೂಡಾ ನಿಲುಗಡೆಯಿದ್ದು ಭಟ್ಕಳದಿಂದ ಪ್ರಯಾಣಿಸುವವರ ಸಂಖ್ಯೆ ಕೂಡಾ ಸಾಕಷ್ಟು ಇದೆ. ಕಳೆದ ಹಲವಾರು ವರ್ಷಗಳಿಂದ ಡಾ. ಚಿತ್ತರಂಜನ್ ಸರ್ಕಲ್ ಮೂಲಕವಾಗಿ ಮೂಢಭಟ್ಕಳ, ಮುಟ್ಟಳ್ಳಿಯಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಯು ಮುಟ್ಟಳ್ಳಿ ಗ್ರಾಮ ಪಂಚಾಯತ್‍ದಿಂದ ಮುಂದೆ ಸಂಪೂರ್ಣ ಹಾಳಾಗಿದ್ದು ತುರ್ತು ರಿಪೇರಿಯನ್ನು ಸಹ ಕಾಣದೇ ಇರುವುದರಿಂದ ಕೆಸರು ಗದ್ದೆಯಂತಾಗಿದ್ದು ದ್ವಿಚಕ್ರ ವಾಹನ ಸವಾರಿಗರು ಪ್ರಯಾಣಿಸುವುದೇ ದುಸ್ತರವಾಗಿ ಪರಿಣಮಿಸಿದೆ. ರಸ್ತೆ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಹೊಂಡಗಳಿದ್ದು ಮಳೆಗಾಲವಾದ್ದರಿಂದ ಕೆಂಪು ನೀರು ನಿಂತುಕೊಂಡಿರುವುದರಿಂದ ಆಳ ತಿಳಿಯದೇ ದ್ವಿಚಕ್ರ ವಾಹನ ಸವಾರರು ಬೀಳುವ ಪ್ರಸಂಗ ಕೂಡಾ ಎದುರಾಗಿದ್ದು ಹಲವರು ಬಿದ್ದಿರುವ ಘಟನೆ ಕೂಡಾ ನಡೆದಿದೆ. 

ರೈಲ್ವೇ ನಿಲ್ದಾಣ ಎಂದ ಮೇಲೆ ದಿನದ 24 ಗಂಟೆಯೂ ಇಲ್ಲಿ ವಾಹನಗಳ ಓಡಾಟ, ರೈಲುಗಳ ಆಗಮನ ನಿರ್ಗಮನ ಇದ್ದೇ ಇರುತ್ತದೆ.  ಇಲ್ಲಿ ಯಾವುದೇ ಸಮಯದ ಮಿತಿಯಿಲ್ಲದೇ ವಾಹನಗಳು ಹೋಗುವುದು ಬರುವುದು ಮಾಡಲೇಬೇಕಾಗುತ್ತದೆ. ಇಂತಹ ಪ್ರಮುಖ ರಸ್ತೆಯೇ ಇಂದು ಕೆಸರುಗದ್ದೆಯಾಗಿದ್ದು ಹೊಂಡಗಳಿಂದ ತುಂಬಿದ್ದು ಹಗಲಿನಲ್ಲಿಯೇ ವಾಹನ ಸವಾರರು ಸರ್ಕಸ್ ಮಾಡಬೇಕಾಗಿ ಬರುವುದಾದರೆ ಇನ್ನು ರಾತ್ರಿ ಹೊತ್ತು ಹೋಗುವವರ ಪರಿಸ್ಥಿತಿ ಎನಾಗಬೇಡ ಎನ್ನುವುದನ್ನು ಯೋಚಿಸುವುದೂ ಕಷ್ಟಕರವಾಗಿದೆ. 

ಮುಟ್ಟಳ್ಳಿ ಗ್ರಾಮ ಪಂಚಾಯತ್‍ದಿಂದ ರೈಲ್ವೇ ನಿಲ್ದಾಣದ ತನಕ ಸುಮಾರು ಅರ್ಧ ಕಿ.ಮಿ. ವ್ಯಾಪ್ತಿಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ಅಧಿಕಾರಿಗಳು ತಕ್ಷಣ ಇತ್ತಕಡೆ ಗಮನ ಹರಿಸಿ ರಸ್ತೆ ರಿಪೇರಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ನಾಗರೀಕರ ಆಗ್ರಹವಾಗಿದೆ.

* ರೈಲ್ವೇ ನಿಲ್ದಾಣದ ರಸ್ತೆಯು ಸಂಪೂರ್ಣ ಹೊಂಡ ಬಿದ್ದು ಹಾಳಾಗಿದ್ದರೂ ಕೂಡಾ ಇದರ ಮರು ಡಾಂಬರೀಕರಣಕ್ಕಾಗಲೀ, ರಸ್ತೆಯನ್ನು ಎತ್ತರಿಸಿ ರಿಪೇರಿ ಮಾಡಲಿಕ್ಕಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ನಾಗರೀಕರು ದಿನಾಲೂ ತೊಂದರೆ ಅನುಭವಿಸುತ್ತಿದ್ದು ತಕ್ಷಣ ರಸ್ತೆ ರಿಪೇರಿಗೆ ಕ್ರಮ ಕೈಗೊಳ್ಳಬೇಕಾಗಿದ.  

ಶಂಕರ ಶೆಟ್ಟಿ, ಸಮಾಜ ಸೇವಕರು, ಭಟ್ಕಳ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...