ಭಟ್ಕಳ ತಾಲೂಕ ಮಟ್ಟದ ಪದವಿ ಪೂರ್ವ  ಕ್ರೀಡಾಕೂಟ; ಬೀನಾ ವೈದ್ಯ ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸಿ

Source: sonews | By sub editor | Published on 31st August 2018, 6:26 PM | Coastal News | Don't Miss |

ಭಟ್ಕಳ: ಅಂಜುಮಾನ್ ಮಹಿಳಾ ಪದವಿ ಪೂರ್ವ ಕಾಲೇಜು, ಭಟ್ಕಳದಲ್ಲಿ ನಡೆದ ತಾಲೂಕಾ ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಬೀನಾ ವೈದ್ಯ ಪದವಿ ಪೂರ್ವ ಕಾಲೇಜ ಮುರ್ಡೇಶ್ವರ ಸತತ 5ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆಯಿತು.

ಈ ಕ್ರೀಡಾಕೂಟದಲ್ಲಿ ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ಯುವರಾಜ ಎಲ್.ಮೊಗೇರ 5000ಮೀ, 3000ಮೀ, 1500 ಮೀ ಓಟ ಮತ್ತು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಯಕ್ತಿಕ ವೀರಾಗ್ರಣಿಯಾಗಿ ಹೊರಹೊಮ್ಮಿರುತ್ತಾನೆ. ಬಾಲಕಿಯರ ವಿಭಾಗದಲ್ಲಿ ಕುಮಾರಿ ಅಶ್ವಿನಿ ನಾಯ್ಕ 3000ಮೀ, 1500ಮೀ, 800 ಮೀ ಓಟ ಮತ್ತು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಯಕ್ತಿಕ ವೀರಾಗ್ರಣಿಯಾಗಿ ಹೊರಹೊಮ್ಮಿರುತ್ತಾಳೆ. 
        
ಬಾಲಕರ ವಿಭಾಗದ 5000 ಮೀಟರ್ ನಡಿಗೆ  ಸ್ಪರ್ಧೆಯಲ್ಲಿ ಅಜಿತ್ ಮೊಗೇರ್ ಪ್ರಥಮ ಸ್ಥಾನವನ್ನು, ಶೈಜಾದ ಕಟಪಾಡಿ ತ್ರಿವಿಧ ಜಿಗಿತ ದಲ್ಲಿ ದ್ವಿತೀಯ ಸ್ಥಾನವನ್ನು ಮತ್ತು ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನವನ್ನು, ಭರತ್ ನಾಯ್ಕ 5000 ಮೀಟರ್ ನಡಿಗೆಯಲ್ಲಿ ದ್ವಿತೀಯ ಸ್ಥಾನವನ್ನು ಮತ್ತು 800 ಮೀಟರ್ ಓಟದಲ್ಲಿ ತೃತೀಯ ಸ್ಥಾನವನ್ನು, ದೇವೇಂದ್ರ ಖಾರ್ವಿ 3000 ಮೀಟರ್ ಓಟದಲ್ಲ್ಲಿ ತೃತೀಯ ಸ್ಥಾನವನ್ನು, ಮಹಮ್ಮದ್ ತನ್ಸಿಫ್ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನವನ್ನು, ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ್ಲ ನಾಗರಾಜ ಎಂ. ವೈದ್ಯ  ಪ್ರಥಮ ಸ್ಥಾನವನ್ನು, ಅಂಕಿತ್ ಪೈ  ದ್ವಿತೀಯ ಸ್ಥಾನವನ್ನು ಹಾಗೂ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮಹಮ್ಮದ್ ತನ್ಸಿಫ್, ದೇವೇಂದ್ರ ಖಾರ್ವಿ ತೃತೀಯ ಮತ್ತು ಚತುರ್ಥ ಸ್ಥಾನವನ್ನು,  ಫರ್ದಿನ್  ಚಕ್ರ ಎಸೆತ, ಗುಂಡು ಎಸೆತ ಸ್ಪರ್ಧೆಗಳಲ್ಲಿ  ದ್ವಿತೀಯ ಸ್ಥಾನವನ್ನು, ಹ್ಯಾಮರ್ ಥ್ರೋದಲ್ಲಿ ತೃತಿಯ ಸ್ಥಾನವನ್ನು ಗಳಿಸಿರುತ್ತಾನೆ.

ಬಾಲಕಿಯರ ವಿಭಾಗದ ಹ್ಯಾಮರ್ ಥ್ರೋ ದಲ್ಲಿ ದಿವ್ಯ ಗೌಡ ಪ್ರಥಮ ಸ್ಥಾನವನ್ನು, ಯಶೋದಾ ಮೊಗೇರ್ ಉದ್ದ ಜಿಗಿತ, 400 ಮೀಟರ್ ಓಟ, ಹ್ಯಾಮರ್ ಥ್ರೋ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು, ಸಹನಾ ಮೊಗೇರ 3000ಮೀ, 1500ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ಮಹಿಮಾ ನಾಯ್ಕ 500 ಮೀಟರ್ ಓಟ, 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಪ್ರತೀಕ್ಷಾ ನಾಯ್ಕ 500 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು, ನಿಖಿತಾ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನವನ್ನು, ನಯನ ಎಂ. ಭರ್ಚಿ ಏಸೆತ ಮತ್ತು 100 ಮೀಟರ್ ಓಟದ ಸ್ಪರ್ಧೆಯಲ್ಲಿ  ತೃತೀಯ ಸ್ಥಾನವನ್ನು, ನಯನ ಜಿ. 200 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತಿಯ ಸ್ಥಾನವನ್ನು, ಸಹನಾ ಮೊಗೇರ ಪೋಲ್ ವಾಲ್ಟ್‍ನಲ್ಲಿ  ಪ್ರಥಮ, ಪ್ರತೀಕ್ಷಾ ನಾಯ್ಕ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಬಾಲಕಿಯರ 4x100 ಮೀಟರ್ ರಿಲೆಯಲ್ಲಿ ರಕ್ಷಿತಾ ಮೊಗೇರ್ ತಂಡವು ದ್ವಿತೀಯ ಸ್ಥಾನವನ್ನು , 4x400 ಮೀಟರ್ ರಿಲೆಯಲ್ಲಿ ಅಶ್ವಿನಿ ನಾಯ್ಕ ತಂಡವು ಪ್ರಥಮ ಸ್ಥಾನವನ್ನು, ಪಡೆದಿರುತ್ತದೆ.

ವಿಜೇತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ, ನಿರ್ದೇಶಕಿ ಪುಷ್ಪಲತಾ ಎಮ್.ಎಸ್, ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಮಹಾಲೆ, ಉಪಪಾಂಶುಪಾಲರಾದ ಮಹೇಶ ಹೆಗಡೆ, ಶೈಕ್ಷಣಿಕ ಸಲಹೆಗಾರರಾದ ನಯೀಮ್ ಗೋರಿ ಮತ್ತು ದೈಹಿಕ  ಶಿಕ್ಷಕರಾದ ಕೃಷ್ಣಪ್ಪ ನಾಯ್ಕ ಹಾಗೂ ಉಪನ್ಯಾಸಕ ವೃಂದವು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...