ಹಾಲಿ ಕಾರ್ಯನಿರ್ವಸುತ್ತಿರುವ ಗಣಕಯಂತ್ರ ನಿರ್ವಾಹಕರಿಗೆ ಆಧ್ಯತೆ ನೀಡುವಂತೆ ಆಗ್ರಹ

Source: sonews | By sub editor | Published on 14th November 2017, 11:29 PM | Coastal News | Don't Miss |

ಭಟ್ಕಳ: ಗ್ರಾಮ ಪಂಚಾಯತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರ ನಿರ್ವಾಹಕರನ್ನೆ ಆಧ್ಯತೆ ನೀಡಿ ನೇಮಕಾತಿಗೆ ಸುತ್ತೋಲೆಯಲ್ಲಿ ತಿದ್ದುಪಡಿ ತಂದು ನೇಮಕಾತಿ ಮಾಡಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಅಧಿಕಾರಿ ಹಾಗೂ ನೌಕರರ ಸಂಘ ಶಾಸಕ ಮಾಂಕಾಳ್ ವೈದ್ಯ ಹಾಗೂ  ತಾಲೂಕ ಪಂಚಾಯತ ಕಾರ್ಯನಿರ್ವಾಣಾಧಿಕಾರಿಗಳ ಮೂಲಕ ಸರ್ಕಾರವನ್ನು ಆಗ್ರಹಿಸಲಾಯಿತು. 


ಸಂಘದ ಸಹಕಾರ್ಯದರ್ಶಿ ಯೋಗೇಶ ನಾಯ್ಕರವರ ನೇತೃತ್ವದಲ್ಲಿ ಮುರ್ಡೇಶ್ವರದ ಶಾಸಕರ ನಿವಾಸದಲ್ಲಿ ಶಾಸಕ ಮಂಕಾಳು ವೈದ್ಯರವರಿಗೆ ಮನವಿ ನೀಡಲಾಯಿತು ಶಾಸಕರು ಗ್ರಾಮ ಪಂಚಾಯತದಲ್ಲಿ ಹಾಲಿ ಕಾರ್ಯನನಿರ್ವಹಿಸುತ್ತಿರುವ ಗಣಕ ಯಂತ್ರ ನಿರ್ವಾಹಕರ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರದ ಗಮನ ಸೆಳೆದು ನ್ಯಾಯದೊರಕಿಸಲು ಪ್ರಯತ್ನಿಸುವದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಅಧಿಕಾರಿ ಹಾಗೂ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ವ್ಯವಸ್ಥಾಪಕರಾದ ಸುದೀರ ಗಾಂವಕರರಿಗೆ ಮನವಿ ನೀಡಲಾಯಿತು. 
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಹೇಶ ವಿ. ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ಪೂಜಾರಿ, ಸದಸ್ಯರಾದ ನಾಗರಾಜ ಬಿ. ಜಿ, ರಾಮಚಂದ್ರ, ಶಾರದಾ, ಯೋಗೇಶ, ಚಂದ್ರಶೇಖರ ಗೊಂಡ, ಯೋಗೇಶ ನಾಯ್ಕ, ಮಮತಾ ನಾಯ್ಕ ಮತ್ತಿತರು ಉಪಸ್ಥಿತರಿದ್ದರು. 

Read These Next

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...