ಪರರಾಜ್ಯದ ಮೀನುಗಾರರಿಂದ ಅನಧಿಕೃತ ಮೀನುಗಾರಿಕೆಗೆ ಸ್ಥಳಿಯರ ವಿರೋಧ; ಜಿಲ್ಲಾಧಿಕಾರಿಗೆ ಮನವಿ

Source: sonews | By Sub Editor | Published on 13th January 2018, 12:35 AM | Coastal News |

ಭಟ್ಕಳ: ಇಲ್ಲಿನ ಜಾಲಿ ಸಮುದ್ರ ತೀರದಲ್ಲಿ ಅನಧೀಕೃತವಾಗಿ ತಮಿಳುನಾಡು ಮತ್ತು ಕೇರಳ ಮೀನುಗಾರರು ನಡೆಸುತ್ತಿರುವ ಮೀನುಗಾರಿಕೆ ದಂದೆಯನ್ನು ಶಾಶ್ವತವಾಗಿ ಬಂದ್ ಮಾಡಬೇಕೆಂದು ಆಗ್ರಹಿಸಿ ಗುರುವಾರದಂದು ಇಲ್ಲಿನ ಜಾಲಿ ಭಾಗದ ಮೀನುಗಾರರು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಿದರು.

ಮನವಿಯಲ್ಲಿ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಸಮುದ್ರ ತೀರದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯ ಮೀನುಗಾರರು ತಮ್ಮ ರಾಜ್ಯದಲ್ಲಿ ನೋಂದಣಿ ಇರದ ಮೀನುಗಾರಿಕೆ ದೋಣಿಗಳನ್ನು ತಂದು ಅನಧೀಕೃತವಾಗಿ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದಾರೆ. ಈ ದಂಧೆಗೆ ಸ್ಥಳಿಯ ರಾಜಕಾರಣಿಗಳು ಸಾಥ್ ನೀಡುತ್ತಿದ್ದು, ಇವರಿಗೆ ಇಲ್ಲಿ ಈ ಅನಧೀಕೃತವಾದ ದಂದೆಯನ್ನು ರಾಜಾರೋಶವಾಗಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆಂಬ ಆರೋಪ ಮೀನುಗಾರರದ್ದಾಗಿದೆ.

ತಮಿಳುನಾಡು ಮತ್ತು ಕೇರಳ ರಾಜ್ಯದ ಮೀನುಗಾರರು ರಾತ್ರಿ ಹಗಲು ಎನ್ನದೇ ರಸ್ತೆಯಲ್ಲಿ ತಿರುಗಾಡುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಮೀನುಗಾರ ಮಹಿಳೆಯರಿಗೆ ಕಿರುಕುಳ ಆಗುತ್ತಿದೆ. ಅನಧೀಕೃತ ದೋಣಿಗಳಿಗೆ ಸ್ಥಳಿಯ ಪಡಿತರ ಅಂಗಡಿಗಳಿಂದ ಸೀಮೇಎಣ್ನೆ ಪೂರೈಕೆ ನಿರಾಳವಾಗಿ ಆಗುತ್ತಿದೆ. ಹಾಘೂ ಬೊಂಡಾಸದಂತಹ ಮೀನು ಹಿಡಿಯಲು ಸರಕಾರ ನಿರ್ಬಂಧ ಹೇರಿದ್ದರು ಕೂಡ ಇವರು ಹಣದ ಆಸೆಗೆ ಮೀನುಗಳನ್ನು ಹಿಡಿಯುತ್ತಿದ್ದಾರೆಂದು ಆರೋಪಿಸಿದ್ದಾರೆ. ಹಾಗೂ ಇಲ್ಲಿನ ಸ್ಥಳಿಯ ಮೀನುಗಾರರ ಬಲೆಯ ಮೇಲೆ ದೋಣಿಯನ್ನು ಓಡಿಸಿ ಬಲೆಯನ್ನು ನಾಶ ಮಾಡುತ್ತಿದ್ದಾರೆ. ತಮ್ಮದೇ ಸರ್ವಾಧಿಕಾರ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದು ಸ್ಥಳಿಯ ಮೀನುಗಾರರಿಗೆ ನಷ್ಟ ಆಗುತ್ತಿದೆ.

ಹೀಗಾಗಿ ಈ ಅನಧೀಕೃತ ರೀತಿಯಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯದ ಮೀನುಗಾರರ ದೋಣಿಯನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.

ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕ ಎಲ್. ಎ. ಭಟ್ಟ ಮನವಿಯನ್ನು ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ರಾಮ ನಾಂರಾಯಣ ಖಾರ್ವಿ, ರಾಮಾ ಎನ್. ಮೋಗೇರ, ಮಹೇಶ ಕೆ. ಮೋಗೇರ, ಕೃಷ್ಣ ಎನ್. ಖಾರ್ವಿ, ಈಶ್ವರ ಮೋಗೇರ, ಹರೀಶ ಎಲ್. ನಾಯ್ಕ, ಶ್ರೀಧರ ಎನ್. ನಾಯ್ಕ, ಮೋಹನ ಎಮ್. ನಾಯ್ಕ, ಪುಂಡಲೀಕ ಮೋಗೇರ, ಗಣಪತಿ ನಾಯ್ಕ ಸೇರಿದಂತೆ ಇನ್ನುಳಿದ ಮೀನುಗಾರರು ಸಾರ್ವಜನಿಕರು ಇದ್ದರು.  

Read These Next

ಭಟ್ಕಳ :ಮೊದಲ ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ:ಪರಿಹಾರಕ್ಕೆ ಸುನೀಲ್ ನಾಯ್ಕ ಸೂಚನೆ

ಭಟ್ಕಳ : ಮುಂದಿನ ಕೆಡಿಪಿ ಸಭೆಯಲ್ಲಿ ಆಯಾ ಇಲಾಖೆಯ ಪ್ರಥಮ  ಧಿಕಾರಿಗಳೇ ಸಭೆಗೆ ಹಾಜರಾಗಬೇಕೆಂದು ಶಾಸಕ ಸುನೀಲ್ ನಾಯ್ಕ ಸಭೆಯಲ್ಲಿ ಠರಾವು ...

ಭಟ್ಕಳ:ಕೆ.ಪಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ ಅವರು ಸೂಕ್ತ- “ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಪೌಂಡೇಶನ್ 

ಭಟ್ಕಳ: “ನಾಗರಿಕ ಸೇವೆಗಳು ಗಗನ ಕುಸುಮವಲ್ಲ (ರಿ) ಬೆಂಗಳೂರು ಇದರ ವತಿಯಿಂದ ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನವನ್ನು ರಾಜ್ಯಸಭಾ ...