ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Source: sonews | By Sub Editor | Published on 17th July 2017, 11:47 PM | Coastal News | Don't Miss |

ಭಟ್ಕಳ: ವಿದ್ಯಾರ್ಥಿಗಳು  ವಿದ್ಯಾರ್ಥಿ ಜೀವನದಲ್ಲಿ ಕೇವಲ ಹೆಚ್ಚಿನ ಅಂಕಗಳನ್ನು ಗಳಿಸುವುದೊಂದೇ ಗುರಿಯನ್ನಾಗಿಸಿಕೊಳ್ಳದೇ ಜೀವನದಲ್ಲಿ ಬದುಕಲು ಬೇಕಾಗುವ ಕಲೆಯನ್ನು ಕಲಿಯಬೇಕಿದೆ ಎಂದು ಕುಂಟವಾಣಿ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ  ಎಸ್. ಎಮ್. ಹೆಗಡೆ ಹೇಳಿದರು. 
ಅವರು ದಿ. ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮತ್ತು ದ್ವೀತೀಯ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾಥಿಗಳನ್ನು ಅಭಿನಂದಿಸುವ ’ಸಮಾಗಮ’  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 
ಮನುಷ್ಯನಿಗೆ ಬದುಕಲು ಅತೀ ಅವಶ್ಯಕವಾಗಿ ಬೇಕಾಗಿರುವುದು ಒಳ್ಳೇಯ ಮಾತು ಮತ್ತು ಹೊಂದಾಣಿಯ ಸ್ವಭಾವ. ಒಳ್ಳೆಯ ಮಾತು ಎಲ್ಲರ ಸ್ನೇಹ ಸಂಪಾದಿಸಲು ಸಹಕಾರಿಯಾದರೆ ಹೊಂದಾಣಿಕೆಯ ಸ್ವಭಾವ ಎಲ್ಲರೊಂದಿಗೆ ಬೆರೆತು ಗುರಿ ಮುಟ್ಟಲು ಸಹಾಯ ಮಾಡುತ್ತದೆ ಎಂದೂ ಹೇಳಿದ ಅವರು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಇವುಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 
ದ್ವಿತಿಯ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತ ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆ ಒಂದೊಂದು ಗಿಡವನ್ನು ನೀಡಿ ಪರಿಸರ ಪ್ರಜ್ಞೆಯನ್ನು ಕಾಲೇಜಿನ ವತಿಯಿಂದ ಪ್ರದರ್ಶಿಸಲಾಯಿತು. 
ಕಾರ್ಯಕ್ರಮದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ  ಡಾ. ಸುರೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು.  ಪ್ರಾಂಶುಪಾಲ  ವೀರೇಂದ್ರ ಶ್ಯಾನಭಾಗ ಮತ್ತು ಶೈಕ್ಷಣಿಕ ಸಲಹೆಗಾರ ಬಿ.ಆರ್.ಕೆ.ಮೂರ್ತಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀಕ್ಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಮೇಘನಾ ಸ್ವಾಗತಿಸಿದರು, ಮಹಾಮಾಯಿ ನಿರೂಪಿಸಿದರು,  ಗೌರವ ವಂದಿಸಿದರು. ನಂತರ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನು ಮೆಚ್ಚಿಸುವಲ್ಲಿ ಯಶಸ್ವೀಯಾಯಿತು. 

Read These Next

ರಸ್ತೆ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ...

ಅಣಬೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆ ಯಿಂದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ 

ಮುಂಡಗೋಡ : ಪೌಷ್ಟಿಕಾಂಶದ ಪಡೆದು ಸದೃಡರಾಗಿ  ಹಾಗೂ ಅರ್ಥಿಕವಾಗಿ ಬಲಗೊಳ್ಳಲು ಅಣಬೆ ಬೇಸಾಯಕ್ಕೆ ಒತ್ತು ನೀಡುವಂತೆ ತೋಟಗಾರಿಕಾ ...