ಭಟ್ಕಳ: ನಮಗೆ ದ್ವೇಷ ಬೇಡ,ಸಾಮರಸ್ಯ ಬೇಕಾಗಿದೆ-ವೀರೇಂದ್ರ ಶಾನಭಾಗ

Source: sonews | By Sub Editor | Published on 5th December 2017, 6:56 PM | Coastal News | Don't Miss |

ಭಟ್ಕಳ: ನಮ್ಮಲ್ಲಿ ದಿನೆ ದಿನೆ ಅಶಾಂತಿ ವಾತವರಣ ಸೃಷ್ಟಿಯಾಗುತ್ತಿದ್ದು, ಕ್ಷುಲ್ಲಕ ಕಾರಣಗಳಿಗಾಗಿ ಪರಪಸ್ಪರ ಹೊಡೆಡಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ನಮಗೆ ದ್ವೇಷ ಬೇಡ ಶಾಂತಿ ಬೇಕು ಎಂದು ಪ್ರತಿಷ್ಟಿತ ಭಟ್ಕಳ ಎಜ್ಯಕೇಶನ್ ಟ್ರಸ್ಟ್ ನ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ವಿ.ಶಾನಭಾಗ ಹೇಳಿದರು. 
ಅವರು ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಮಾನವತೆಯ ವಕ್ತಾರ’ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಪರಸ್ಪರರ ಹೃದಯಗಳು ಬೆಸೆಯುವಂತಹ ಎಲ್ಲರನ್ನೂ ಅರ್ಥ ಮಾಡಿಕೊಳ್ಳುವ ಸಮಾಜ ಉತ್ತಮ ಸಮಾಜ ಆಗಬಲ್ಲದು ರಾಜಕೀಯ ಕಾರಣಗಳೇ ನಮ್ಮಲ್ಲಿ ಅಶಾಂತಿಯನ್ನುಂಟು ಮಾಡುತ್ತಿದ್ದು ವಿದ್ಯಾರ್ಥಿಗಳು ಇಂತಹ ವಿಚಾರಗಳಿಂದ ದೂರವಿರಬೇಕೆಂದು ಕರೆ ನೀಡಿದರು.
ಉಪನ್ಯಾಸ ನೀಡಿದ ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞÂ, ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳು ಒಂದಕ್ಕೊಂದು ಪರಸ್ಪರ ಸಹಕರಿಸುತ್ತಿವೆ, ಸಮಾಜದ ಎಲ್ಲ ವರ್ಗಗಳು ಪರಸ್ಪರರನ್ನು ಅರಿತು ಸಹಕಾರದಿಂದ ಬದುಕಬೇಕು. ಸಹಕಾರವೇ ಪ್ರಕೃತಿಯ ನಿಯಮವಾಗಿದೆ. ನಮ್ಮಲ್ಲಿರುವ  ನಕರಾತ್ಮಕ ಗುಣಗಳ ದೂರಮಾಡಬೇಕು. ಪರಸ್ಪರರನ್ನು ಸಂಶಯ ದೃಷ್ಟಿಕೋನದಿಂದ ನೋಡದೆ ಸಮಾಜದ ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದ ಅವರು ಆಧುನಿಕ ಜಗತ್ತಿನ ಘೋಷಣೆ ‘ಮಾನವೀಯತೆ’ ಆಗಬೇಕು ಎಂದರು. ಪ್ರವಾದಿ ಮುಹಮ್ಮದ್‍ರು ತಮ್ಮ ಜೀವಿತಾವಧಿಯಲ್ಲಿ ಯಾರನ್ನೂ ದ್ವೇಷಸಲಿಲ್ಲ. ತಮ್ಮ ಶತ್ರುಗಳನ್ನೂ ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದರು ಮಾನವೀಯ ಮೌಲ್ಯಗಳೇ ಅವರ ಬದುಕಿನ ಗುರಿಯಾಗಿದ್ದವು ಎಂದರು. 
ಇತಿಹಾಸ ಉಪನ್ಯಾಸಕಿ ಶಾಮಲಾ ಕಾಮತ್ ಮಾತನಾಡಿ, ಪ್ರವಾದಿ ಮುಹಮ್ಮದ್ ರ ಜೀವನ, ಅವರು ನಡೆದುಬಂದ ದಾರಿ ಬಗ್ಗೆ ಬೆಳಕು ಚೆಲ್ಲಿದರು. 
ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಧನ್ಯವಾದ ಸಮರ್ಪಿಸಿದರು. 
ಉಪನ್ಯಾಸಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. 
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್ ವೇದಿಕೆಯಲ್ಲಿ ಉಪಸ್ಥಿತಿದ್ದರು. 
 

Read These Next

ಉತ್ತರ ಕನ್ನಡ ಜಿಲ್ಲಾ ದೇವಡಿಗ sಸಮಾಜ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಭಟ್ಕಳ :  ದೇವಡಿಗ ಸಮಾಜದಲ್ಲಿ ಪ್ರತಿಭಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯವಾಗಿದೆ. ...

ಮುರುಡೇಶ್ವರದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ  ಜಿಲ್ಲಾ ಪಂಚಾಯತ ಸಿಎಸ್ ಮಹ್ಮದ್ ರೋಷನ್ ಚಾಲನೆ

ಭಟ್ಕಳ: ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಭಟ್ಕಳ, ಗ್ರಾಪಂ ಮಾವಳ್ಳಿ 1 ಹಾಗೂ ಮಾವಳ್ಳಿ2ರ ಸಹಭಾಗಿತ್ವದಲ್ಲಿ ಸ್ವಚ್ಛ ...

ಉತ್ತರ ಕನ್ನಡ ಜಿಲ್ಲಾ ದೇವಡಿಗ sಸಮಾಜ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಭಟ್ಕಳ :  ದೇವಡಿಗ ಸಮಾಜದಲ್ಲಿ ಪ್ರತಿಭಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯವಾಗಿದೆ. ...