ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಸ್ಕೂಬಾ ಡೈವ್

Source: sonews | By Staff Correspondent | Published on 14th March 2018, 6:40 PM | Coastal News | State News | Don't Miss |


‘ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಬಿಗ್ ಆಫರ್’

ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯು ಇಲ್ಲಿನ ನೇತ್ರಾಣಿ ದ್ವೀಪದಲ್ಲಿ ವಿಶೇಷವಾಗಿ ಕೇವಲ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸ್ಕೂಬಾ ಡೈವಿಂಗ್ ಅನ್ನು ಆಯೋಜಿಸಿದೆ. ಶಾಲಾ ಮತ್ತು ಕಾಲೇಜು ಮಕ್ಕಳ ರಜೆ ಅವಧಿ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ನುರಿತ ಸ್ಕೂಬಾ ಡೈವರ್ಸ್‍ಗಳು ಮಕ್ಕಳನ್ನು ಸಮುದ್ರದಾಳಕ್ಕೆ ಕರೆದೊಯ್ಯಲಿದ್ದು ಎಲ್ಲಾ ರೀತಿಯ ನುರಿತ ಸಲಕರಣೆಗಳೊಂದಿಗೆ ಯಾವುದೇ ಭಯವಿಲ್ಲದೇ ನೀರಿನೊಳಗಿನ ಹೊಸ ಪ್ರಪಂಚವನ್ನು ನೋಡಿ ವಿದ್ಯಾರ್ಥಿಗಳು ಖುಷಿಪಡಬಹುದು. ಅದು ರಿಯಾಯಿತಿ ದರದಲ್ಲಿ. ಈ ಬಗ್ಗೆ ಸಂಪುರ್ಣ ಮಾಹಿತಿ ಇಲ್ಲಿದೆ ನೋಡಿ. 

ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ದರದಲ್ಲಿ ಮಾರ್ಚ 18 ರಿಂದ ಏಪ್ರಿಲ್ 20 ರ ವರೆಗೆ ಈ ವಿಶೇಷ ಅವಕಾಶವನ್ನು ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಕಲ್ಪಿಸಿದೆ. ಒಂದು ವಿದ್ಯಾರ್ಥಿಗಳಿಗೆ @ 3,500 ಪಡೆಯಲಾಗುವುದು. ಇದು ಕೇವಲ ವಾರದಲ್ಲಿ 6 ದಿನ ಮಾತ್ರ. ರವಿವಾರ ಇರುವುದಿಲ್ಲ.
ಕೆಲವರಿಗೆ ಈಜು ಬರುವುದಿಲ್ಲ ಎನ್ನುವ ಭಯವಿರಬಹುದು. ಆದರೆ ಇಲ್ಲಿ ಈಜು ಬರುವ ಅವಶ್ಯಕತೆ ಇಲ್ಲ. ವಿದೇಶದಿಂದ ನುರಿತ ಮಹಿಳೆಯರು ಸೇರಿ 6 ಜನರ ಈಜುಗಾರ ತಂಡವು ಅವರನ್ನು ಕೆಳಗೆ ಕರೆದುಕೊಂಡು ಹೋಗಿ ಮೇಲೆ ಬರುವವರೆಗೂ ಅವರ ಜೊತೆಯೇ ಇರುತ್ತಾರೆ. ಹೊಸ ಪ್ರಪಂಚವನ್ನು ನೋಡುವ ಅವಕಾಶವನ್ನು ವಿದ್ಯಾರ್ಥಿಗಳಿಗಾಗಿ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯೂ ಮಾಡಿಕೊಟ್ಟಿದೆ. 
ಆಸಕ್ತ ವಿದ್ಯಾರ್ಥಿಗಳು ಮುಂಚಿತವಾಗಿ ನಮ್ಮನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಿ ಮತ್ತು ಮಾಹಿತಿಗಾಗಿ ಕೂಡ ಕರೆಮಾಡಬಹುದು. ಮುಂಗಡವಾಗಿ ಸ್ಕೂಬಾ ಡೈವಿಂಗ್ ಆಫರ್ ಪಡೆದುಕೊಳ್ಳಲು ಬುಕ್ಕಿಂಗಗಾಗಿ 9900431111 ದೂರವಾಣಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅಥವಾ www.netraniadventures.com ನಲ್ಲಿಯೂ ಆನ್ ಲೈನ್ ಬುಕ್ಕಿಂಗ ಮಾಡಬಹುದಾಗಿದೆ. 
 
‘ಮುಂಬರಲಿರುವ ಬೇಸಿಗೆ ರಜಾ ದಿನದ ವಿಶೇಷವಾಗಿ ಶಾಲಾ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಸಮುದ್ರದಾಳಕ್ಕೆ ಕರೆದುಕೊಂಡು ಹೋಗಲಿದ್ದು, 10 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗಾಗಿ ಈ ಸೌಲಭ್ಯ ನೀಡಲಾಗುವುದು. ಸ್ಕೂಬಾ ಡೈವಿಂಗ್‍ಗೆ ವಿದ್ಯಾರ್ಥಿಗಳು ಶಾಲಾ ಅಥವಾ ಕಾಲೇಜಿನ ಐಡಿ ಮತ್ತು ಯಾವುದಾದರೊಂದು ಗುರುತಿನ ಚೀಟಿ ಕಾರ್ಡನ್ನು ಕಡ್ಡಾಯವಾಗಿ ತರಲೇಬೇಕು. ವಿಶೇಷ ರಿಯಾಯಿತಿಯಲ್ಲಿ ಮಕ್ಕಳಿಗೆ ಬೋಟ್ ರೇಟಿಂಗ್, ಸ್ನೋರ್ಕಲಿಂಗ್, ಸ್ಯಾಕ್ಸ, ಇಕ್ವಿಪ್ ಮೆಂಟ್, ಅಂಡರ ವಾಟರ್ ಪೋಟೋಸ್ ಜೊತೆಗೆ ಸರ್ಟಿಫಿಕೇಟ್ ವಿದ್ಯಾರ್ಥಿಗಳಿಗಾಗಿ ನೀಡಲಾಗುವುದು. ಅದೇ ರೀತಿ ಎಲ್ಲಾ ರೀತಿಯ ನುರಿತ ವ್ಯವಸ್ಥೆಯೊಂದಿಗೆ ಮಕ್ಕಳಿಗೆ ಬೇರೆಯದ್ದೇ ಪ್ರಪಂಚ ನೋಡಲು ಸದಾವಕಾಶವಿದೆ. ಎಂದು ಹೇಳಿದರು.

ಒಟ್ಟಿನಲ್ಲಿ ಬೇಸಿಗೆಯ ರಜೆಯನ್ನು ವಿದ್ಯಾರ್ಥಿಗಳು ಸಮುದ್ರದಾಳದಲ್ಲಿ ಮಸ್ತ ಮಜಾ ಮಾಡಲು ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯು ಅವಕಾಶ ಕಲ್ಪಿಸಿಕೊಟ್ಟಿದ್ದು, ಇದರ ಉಪಯೋಗ ಎಲ್ಲರು ಪಡೆದುಕೊಂಡು ರಜೆಯ ಮಜವನ್ನು ಪಡೆದುಕೊಳ್ಳಬೇಕಾಗಿದೆ. -ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಮಾಲಕ ಗಣೇಶ ಹರಿಕಾಂತ


 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...