ಉ.ಕ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜರಗಿದ ಎನ್.ಎ.ಎಸ್ ಪರೀಕ್ಷೆ;  2948 ವಿದ್ಯಾರ್ಥಿಗಳು ಹಾಜರು

Source: sonews | By Staff Correspondent | Published on 5th February 2018, 10:40 PM | Coastal News | State News | National News | Don't Miss |

ಭಟ್ಕಳ: ಇಂದು ರಾಷ್ಟ್ರಾಧ್ಯಂತ ಏಕ ಕಾಲದಲ್ಲಿ ಜರಗಿದ ರಾಷ್ಟ್ರೀಯ ಸಾಧನ ಸಮೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಐದು ತಾಲೂಕುಗಳಿಂದ 2948 ವಿದ್ಯಾರ್ಥಿಗಳು ಭಾಗವಹಿಸಿದ್ದು ಯಾವುದೇ ಗೊಂದಲಗಳಿಗೆ ಆಸ್ಪದೆ ನೀಡದೆ ಅಚ್ಚುಕಟ್ಟಾಗಿ ಪರೀಕ್ಷೆಗಳು ಜರಗಿದವು.

ಕಾರವಾರ ಶೈಕ್ಷಣಿಕ ಜಿಲ್ಲೆಯ 22 ಸಾರ್ಕರಿ ಶಾಲೆಗಳು, 38 ಅನುದಾನಿತ ಶಾಲೆ ಹಾಗೂ 20 ಅನುದಾನ ರಹಿತ ಶಾಲೆಗಳಿಂದ 1483 ವಿದ್ಯಾರ್ಥಿನೀಯರು ಹಾಗೂ 1465 ವಿದ್ಯಾರ್ಥಿಗಳು ಸಮೀಕ್ಷೆಗೊಳಪಟ್ಟಿದ್ದಾರೆ ಎಂದು ಜಿಲ್ಲಾ ನೊಡೆಲ್ ಅಧಿಕಾರಿ ಶ್ರೀಕಾಂತ್ ಹೆಗಡೆ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

ಭಟ್ಕಳ ತಾಲೂಕಿನ 21 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಂದ 385 ವಿದ್ಯಾರ್ಥಿಗಳು, 399ವಿದ್ಯಾರ್ಥಿನೀಯರು ಸೇರಿದಂತೆ ಒಟ್ಟು 808 ವಿದ್ಯಾರ್ಥಿಗಳು ಈ ಸಮೀಕ್ಷೆಗೆ ಒಳಪಟ್ಟರು. 

ಅಂಕೋಲಾ ತಾಲೂಕಿನಲ್ಲಿ 14 ಪ್ರೌಢಶಾಲೆಗಳು, ಭಟ್ಕಳ 21, ಹೊನ್ನಾವರ 20, ಕಾರವಾರ 21, ಕುಮಟಾ ತಾಲೂಕಿನ 4 ಆಯ್ದ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 80 ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ಇಂದು ಸಾಧನ ಸಮೀಕ್ಷೆಯ ಪರೀಕ್ಷೆಗಳು ನಡೆದವು. ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಯುವಂತಾಗಲು ಪ್ರತಿಯೊಂದು ಶಾಲೆಗೆ ಇಬ್ಬರು ಕ್ಷೇತ್ರ ಪರಿವೀಕ್ಷರಂತೆ ಒಟ್ಟು 160 ಕ್ಷೇತ್ರ ಪರಿವೀಕ್ಷಕರನ್ನು ನೇಮಿಸುತ್ತಿದ್ದು ಆಯಾ ಶಾಲೆಯ ಪ್ರೌಢಶಾಲೆಯ ಮುಖ್ಯಾಧ್ಯಾಪಕರನ್ನು ಒಳಗೊಂಡಂತೆ ಕ್ಷೇತ್ರ ಪರಿವೀಕ್ಷಕರಿಗಿಗೆ ವ್ಯಾಪಕ ತರಬೇತಿಯನ್ನು ನೀಡಲಾಗಿತ್ತು. 

ರಾಷ್ಟ್ರೀಯ ಸಾಧನೆ ಸಮೀಕ್ಷೆಯು (NAS) ಭಾರತದ ಎಲ್ಲಾ ಜಿಲ್ಲೆಗಳ ಆಯ್ದ ಶಾಲೆಗಳ ಸಮೀಕ್ಷೆಯ ಮೂಲಕ ಸರ್ಕಾರಿ, ಸರ್ಕಾರಿ ಅನುಧಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಣ ವ್ಯವಸ್ಥೆಯ ಸ್ಥಿತಿಯನ್ನು ಅರ್ಥೈಸಿಕೊಳ್ಳುವ ಗುರಿಯನ್ನು ಹೊಂದಿದೆ. NAS ನ ಶೋಧನೆಗಳನ್ನು ಶೈಕ್ಷಣಿಕ ನೀತಿ, ಯೋಜನೆ ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಕಗಳು ಸುಧಾರಣೆಗೆ ಒಳಹರಿವುಗಳಾಗಿ ಬಳಸಲಾಗುತ್ತದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (RMSA) ಎಸ್.ಎಸ್.ಎ. ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಜಾರಿಗೆ ತಂದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಪ್ರೌಢ ಶಿಕ್ಷಣದ ನಂತರ ವಿದ್ಯಾರ್ಥಿಗಳು ಉನ್ನತ ಮಟ್ಟದ ಜ್ಞಾನ ಮತ್ತು ಕೌಶಲವನ್ನು ಪಡೆಯಲು ನೆರವಾಗಿದೆ. ಆದ್ದರಿಂದ ಪ್ರೌಢಶಾಲಾ ಹಂತದಲ್ಲಿ ಕಾಲಾನುಕ್ರಮವಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡುವುದು ಅಪೇಕ್ಷಣೀಯವಾಗಿದೆ. ದೇಶದಲ್ಲಿ ಸುಮಾರು 30 ರಾಷ್ಟ್ರೀಯ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳಿದ್ದು, ಅವುಗಳು ಹತ್ತನೇ ತರಗತಿಗೆ ನಿಯಮಿತವಾಗಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಉತ್ತೀರ್ಣ-ಅನುತ್ತೀರ್ಣ ಎಂಬ ಎರಡು ಮಾನದಂಡಗಳನ್ನು ನೀಡುತ್ತಿವೆ. ರಾಜ್ಯಮಟ್ಟದ ಮೌಲ್ಯಾಂಕನದ ಮೂಲಕ ಶೈಕ್ಷಣಿಕ ಮಂಡಳಿಗಳಿಗೆ ರಾಜ್ಯಾದ್ಯಂತ ಇರುವ ಕಲಿಕೆಯ ಮಟ್ಟವನ್ನು ಅಧ್ಯಯನ ಮಾಡಲು, ಶಿಕ್ಷಣದ ಗುಣಮಟ್ಟವನ್ನು ಅರಿಯಲು ಮತ್ತು ಅದನ್ನು ಉತ್ತಮ ಪಡಿಸಲು ಸಾಧ್ಯವಾಗುತ್ತದೆ. 

ರಾಷ್ಟ್ರೀಯ ಸಾಧಾನಾ ಸಮೀಕ್ಷೆ National Achievement Survey (NAS) Class X (Cycle-2) : ಈ ಹಿನ್ನೆಲೆಯಲ್ಲಿ NCERT ಯು 2015ರಲ್ಲಿ ಮೊದಲ ಸುತ್ತಿನ NAS ನ್ನು ಹತ್ತನೇ ತರಗತಿಗೆ ಕೈಗೊಂಡಿತ್ತು . ಸಮೀಕ್ಷೆಯಲ್ಲಿ ಕಂಡುಬಂದ ಫಲಿತಾಂಶಗಳನ್ನು ವ್ಯಾಪಕವಾಗಿ ಸಂಬಂಧಪಟ್ಟ ಮಂಡಳಿಗಳು / ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬಂದಿರುವ ಸುಧಾರಣೆಯನ್ನು ಅವಲೋಕಿಸಿ 2017-18ನೇ ಶೈಕ್ಷಣಿಕ ಸಾಲಿನಲ್ಲಿ MHRD ಎರಡನೇ ಹಂತದ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದಂತೆ, NCERT ಯ ಶೈಕ್ಷಣಿಕ ಸಮೀಕ್ಷಾ ವಿಭಾಗವು 2017-18ರಲ್ಲಿ NAS Class X Cycle-2 ನಡೆಸಲು ನಿರ್ಧರಿಸಿದೆ. ಮೊದಲ ಹಂತದ ಸಮೀಕ್ಷೆಯಲ್ಲಿ ರಾಜ್ಯಗಳನ್ನು ಘಟಕಗಳೆಂದು ಪರಿಗಣಿಸಲಾಗಿತ್ತು. ಆದರೆ ಎರಡನೇ ಹಂತದ ಸಮೀಕ್ಷೆಯಲ್ಲಿ ಜಿಲ್ಲೆಗಳನ್ನು ಘಟಕಗಳಾನ್ನಾಗಿ ಪರಿಗಣಿಸಲಾಗಿದೆ. 

NAS Class X Cycle-2 ರ ಪ್ರಮುಖ ಉದ್ದೇಶಗಳು :-  ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಆಧುನಿಕ ಭಾರತೀಯ ಭಾಷೆ (MIL) ವಿಷಯಗಳಲ್ಲಿನ ಕಲಿಕಾ ಸಾಧನೆಯ ಮಟ್ಟವನ್ನು ಅಧ್ಯಯನ ಮಾಡುವುದು. - ಪ್ರದೇಶ, ಲಿಂಗ, ಸಾಮಾಜಿಕ ಗುಂಪು, ಆಡಳಿತ ಮಂಡಳಿ ಹಾಗೂ ರಾಜ್ಯಪರೀಕ್ಷಾ ಮಂಡಳಿಗಳು ಮುಂತಾದವುಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡುವುದು. - ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರಭಾವ ಬೀರುವ ಮಧ್ಯಂತರ ಅಂಶಗಳಾದ ಕುಟುಂಬದ ಹಿನ್ನಲೆ, ಶಾಲೆ, ಶಿಕ್ಷಕ ವೃಂದ ಮುಂತಾದವುಗಳನ್ನು ಅಧ್ಯಯನ ಮಾಡುವುದು. - Cycle-1 ರಿಂದ Cycle-2 ಗೆ ಎಲ್ಲಾ ವಿಷಯಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಧನೆಗಳನ್ನು ಹೋಲಿಕೆ ಮಾಡುವುದು. 

NAS Class X (Cycle-2) ವ್ಯಾಪ್ತಿ :-  ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ಲಾ ಜಿಲ್ಲೆಗಳನ್ನು ಇದು ಒಳಗೊಂಡಿರುತ್ತದೆ. - ಈ ಸಮೀಕ್ಷೆಗೆ ಎಲ್ಲಾ ರಾಜ್ಯಗಳ ಪರೀಕ್ಷಾ ಮಂಡಳಿಯಿಂದ ಅನುಮೋದನೆ ಪಡೆದಿರುವ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳು, CBSE ಮತ್ತು ICSE ಪಠ್ಯಕ್ರಮದ ವಿದ್ಯಾರ್ಥಿಗಳನ್ನು ರ್ಯಾಂಡಮ್ ಆಯ್ಕೆಯ ಮೂಲಕ ಮೌಲ್ಯಾಂಕನಕ್ಕೆ ಒಳಪಡಿಸಲಾಗುವುದು. -NAS X Cycle-2 ನ ಸಮೀಕ್ಷೆಯು ಐದು ವಿಷಯಗಳನ್ನು ಅಂದರೆ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಒಂದು ಆಧುನಿಕ ಭಾರತೀಯ ಭಾಷೆಯನ್ನು (MIL) ಒಳಗೊಂಡಿದೆ. - ಪ್ರತಿ ರಾಜ್ಯದ ಪ್ರತಿ ಜಿಲ್ಲೆಗಳಿಂದ 80 ಶಾಲೆಗಳು ಹಾಗೂ ಆಯ್ಕೆಯಾದ ಪ್ರತಿ ಶಾಲೆಯಿಂದ ಗರಿಷ್ಠ 45 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಎಂ.ಆರ್.ಮಾನ್ವಿ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...