ಭಟ್ಕಳ: ನರೇಗಾ ಯೋಜನೆ; ಕಾರ್ಮಿಕ ಖಾತೆಗಳಿಗೆ ಆಧಾರ ಜೋಡಣೆ ಕಡ್ಡಾಯ

Source: sonews | By Staff Correspondent | Published on 27th July 2017, 8:11 PM | Coastal News | Don't Miss |

ಭಟ್ಕಳ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನೊಂದಾಯಿತ ಕಾರ್ಮಿಕರು ತಮ್ಮ ಕೂಲಿ ಹಣದ ನೇರ ವರ್ಗಾವಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ಮತ್ತು ಆಧಾರ ಸಂಖ್ಯೆ ಹೊಂದುವದು ಅವಶ್ಯವಿದೆ ಎಂದು ಭಟ್ಕಳ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸಿ.ಟಿ ನಾಯ್ಕ  ತಿಳಿಸಿದರು. 

ನೇರ ಲಾಭ ವರ್ಗಾವಣೆಗಾಗಿ ನರೇಗಾ ಯೋಜನೆಯ ಕಾರ್ಮಿಕರ ಖಾತೆಗಳಿಗೆ ಆಧಾರ ಜೋಡಣಾ ಶಿಭಿರದಲ್ಲಿ ನಾಗರಿಕನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ತಾಲೂಕಿನಲ್ಲಿ ಜುಲೈ ೨೭ ರಿಂದ ೩೧ರ ತನಕ ವೇಳಾ ಪಟ್ಟಿಯಂತೆ ವಿವಿಧ ಗ್ರಾಮ ಪಂಚಾಯತಗಳಲ್ಲಿ ಶಿಬಿರಗಳನ್ನು ಗೊತ್ತು ಪಡಿಸಲಾಗಿದ್ದು, ಸ್ಥಳೀಯವಾಗಿ ಒಂದೆ ಖಾತೆ ತೆರೆಯುವದು ಮತ್ತು ಆಧಾರ ಬಯೋಮೆಟ್ರಿಕ್ ಸೌಲಭ್ಯಕ್ಕಾಗಿ ದಾಖಲಾತಿಗಳು ನಡೆಯುವದನ್ನು ಬಳಸಿಕೊಳ್ಳಬೇಕು ಎಂದರು. 

ಉಪಸ್ಥಿತರಿದ್ದ ಕೋಣಾರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸುಬ್ರಮಣ್ಯ ರಾವ್ ರವರು ಸಾರ್ವಜನಿಕರು ಬದಲಾಗುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ತಮ್ಮ ಶಾಖೆಯಿಂದ ಯಾವುದೇ ಮಾಹಿತಿ ಬಯಸಿದ್ದರೂ ವಿವರವಾಗಿ ನಾನು ನನ್ನ ಸಿಬ್ಬಂದಿಗಳು ನೀಡಲು ಬದ್ದರಿದ್ದೇವೆ ಆ ಮೂಲಕ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಬ್ಯಾಂಕನೊಂದಿಗೆ ಸಹಕರಿಸಲು ಕೋರಿದರು. 

ಪಂಚಾಯತ ಅಬಿವೃದ್ದಿ ಅಧಿಕಾರಿ ಕರಿಯಪ್ಪ ನಾಯ್ಕ  ಶಿಬಿರದ ಉದ್ದೇಶಗಳನ್ನು ವಿವರಿಸಿ ಶಿಬಿರದಲ್ಲಿ ಬ್ಯಾಂಕ್ ಹಾಗೂ ಪಂಚಾಯತನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಸದುಪಯೋಗಕ್ಕೆ ವಿನಂತಿಸಿದರು. 


ವೇದಿಕೆಯಲ್ಲಿ ಉಪಸ್ಥಿತರಿದ್ದ ಲೆಕ್ಕ ಸಹಾಯಕ ವಾಸು ಬಿ, ಗುಮಾಸ್ತ ಈಶ್ವರ ಗೊಂಡ, ಪದ್ಮ ಪ್ರಸಾದ ಜೈನ್, ಚಂದ್ರಶೇಖರ ಗೊಂಡ ಶಿಬಿರದ ಯಶಸ್ಸಿಗೆ ಸಹಕರಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...