ನಾಗಯಕ್ಷೆ ಧರ್ಮದೇವಿಗೆ ಚಿನ್ನದ ಆರತಿ ಸಮರ್ಪಣೆ

Source: sonews | By Staff Correspondent | Published on 27th July 2017, 9:45 PM | Coastal News |


ಭಟ್ಕಳ: ನಾಗರ ಪಂಚಮಿಯ ಪ್ರಯುಕ್ತ ಭಟ್ಕಳದ ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದಲ್ಲಿ ಶ್ರೀ ದೇವರಿಗೆ ಚಿನ್ನದ ಆರತಿ ಸಮರ್ಪಣೆ,  ವಿಶೇಷ ಅಲಂಕಾರ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. 
ತಾಲೂಕಿನಲ್ಲಿ ಇಂದು ನಾಗರ ಪಂಚಮಿಯ ಪ್ರಯುಕ್ತ ನಾಗ ಬನಗಳು ಹಾಗೂ ದೇವಾಲಯಕ್ಕೆ ತೆರಳಿ ನಾಗದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿರುವುದು ಸಾಮಾನ್ಯವಾಗಿತ್ತು.  ಅದರಂತೆ  ನಗರದ ಪ್ರಸಿದ್ದ ನಾಗದೇವಾಲಯದಲ್ಲಿ ಒಂದಾದ ಮಣ್ಕುಳಿಯ ಶ್ರೀ ನಾಗಯಕ್ಷೆ ದೇವಸ್ಥಾನದಲ್ಲಿ ಕೂಡಾ ಸಾವಿರಾರು ಭಕ್ತರು ಶ್ರೀ ದೇವರ ದರ್ಶನ ಪಡೆದು ಮಹಾಪೂಜೆ, ಮಂಗಳಾರತಿಯಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು. 
ಬೆಳಿಗ್ಗೆಯಿಂದಲೇ ದೇವಳಕ್ಕೆ ಸಾವಿರಾರು ಭಕ್ತರು ಶ್ರೀ ನಾಗಯಕ್ಷೆಯ  ದರ್ಶನಕ್ಕೆ ಬಂದಿದ್ದು, ಶ್ರೀ ದೇವರ ದರ್ಶನ ಪಡೆದರು. ನಾಗರ ಪಂಚಮಿಯಂದು ವಿಶೇಷವಾಗಿ ಶ್ರೀ ನಾಗಯಕ್ಷೆ ದೇವಿಗೆ ಚಿನ್ನದ ಆರತಿಯನ್ನು ಸಮರ್ಪಿಸಲಾಗಿದ್ದು  ದೇವಸ್ಥಾನಕ್ಕೆ ಬಂದಂತಹ  ಭಕ್ತರೆಲ್ಲಾ ಆರತಿಯನ್ನು ಮುಟ್ಟಿ ತಮ್ಮ ತಮ್ಮ ಸಂಕಲ್ಪವನ್ನು ಈಡೇರಿಸುವಂತೆ ಬೇಡಿಕೊಂಡರು.  
ಪೂಜೆಯ ಸಂಧರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭುರವರು ನಾಗ ದೇವಿಯ ಮೈದರ್ಶನದಲ್ಲಿ ನೆರೆದಿದ್ದ  ದೇವಿಯ ಹಲವಾರು ಭಕ್ತರು  ತಮ್ಮ ತಮ್ಮ ಕಷ್ಟಕಾರ‍್ಪಣ್ಯಗಳನ್ನು ಕೇಳಿ ಪರಿಹಾರದ ದಾರಿ ಪಡೆದುಕೊಂಡರು. ಈ ಹಿಂದೆ ೨೦೦೯ರಲ್ಲಿ ದೇವಿಗೆ ೭ ಕೆ.ಜಿ. ಚಿನ್ನದಲ್ಲಿ ಮಾಡಿದ ಚಿನ್ನದ ಮುಖವಾಡ, ಕವಚಗಳನ್ನು ಸಮರ್ಪಿಸಿದ್ದನ್ನು ಸ್ಮರಿಸಿಕೊಳ್ಳಬಹುದು.  ಈ ವರ್ಷ ದೇವಿಗೆ ಚಿನ್ನದ ಆರತಿಯನ್ನು ಸಮರ್ಪಿಸಿದ್ದು ಮಹಾಪೂಜೆಯ ಸಮಯದಲ್ಲಿ ಚಿನ್ನದ ಆರತಿಯನ್ನು ಬೆಳಗಿರುವುದನ್ನು ಭಕ್ತರು ಕಣ್ತುಂಬಿಕೊಂಡರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...