ಭಟ್ಕಳ: ಮಾರಿ ಜಾತ್ರಾ ಹಬ್ಬಕ್ಕೆ ಕ್ಷಣ ಗಣನೆ

Source: sonews | By Staff Correspondent | Published on 18th July 2017, 10:41 PM | Coastal News | Special Report | Don't Miss |

ಭಟ್ಕಳ: ತಾಲೂಕಿನಲ್ಲಿ ನಡೆಯುವ ಪ್ರಸಿದ್ಧ  ಮಾರಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜು.೧೯ ಹಾಗೂ ೨೦ರಂದು ಅತ್ಯಂತ ವಿಜೃಂಬಣೆಯಿಂದ ಜಾತ್ರ ನಡೆಯಲಿದೆ. 
ಮಾರಿ ಜಾತ್ರೆಯನ್ನು  ಸಂಪ್ರದಾಯದಂತೆ ಪ್ರತಿ ವರ್ಷವೂ ನಡೆಸಿಕೊಂಡು ಬರಲಾಗುತ್ತಿದ್ದು ಈಗಾಗಲೇ ಮಾರಿ ಮೂರ್ತಿಯನ್ನು ತಯಾರಿಸುವ ಕಾರ್ಯ ಮುಕ್ತಾಯ ಹಂತದಲ್ಲಿದೆ. ಕಳೆದ ಮಂಗಳವಾರದಂದು ಮಾರಿ ಮೂರ್ತಿ ತಯಾರಿಸಲು ಊರ ಹೊರಗಿನ ಅಮಟೆ ಮರವೊಂದನ್ನು ಆಯ್ಕೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮರವನ್ನು ಕಡಿಯುವ ಶಾಸ್ತ್ರ ನೆರವೇರಿತು. ಮಾರಿ ಮೂರ್ತಿಗೆ ಆಯ್ಕೆಯಾದ ಮರವನ್ನು ಅತ್ಯಂತ ಸಂತಸದಿಂದ ಕುಟುಂಬಿಕರು ಬಿಟ್ಟುಕೊಡುತ್ತಿದ್ದು ಈ ವರ್ಷವೂ ಕೂಡಾ ಮರವನ್ನು ಮಾರಿ ಮೂರ್ತಿ ಮಾಡಲು ಬಿಟ್ಟು ಕೊಡುವ ಪೂರ್ವ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬಿಟ್ಟು ಕೊಡಲಾಯಿತು. 
ಮಾರಿ ಮೂರ್ತಿ ತಯಾರಿಸುವ ಮರವನ್ನು ಶುಕ್ರವಾರದಂದು ಆಚಾರಿಯವರ ಮನೆಗೆ ತಂದು ಮಾರಿ ಮೂರ್ತಿಯನ್ನು ತಯಾರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು ಈ ಸಂದರ್ಭದಲ್ಲಿ  ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿ ಮುಖ್ಯಸ್ಥರು, ಊರಿನ ನಾಗರೀಕರು, ಭಕ್ತರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 
ಮರವನ್ನು ಆಚಾರಿಯವರ ಮನೆಗೆ ತರುತ್ತಲೇ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಉಡಿತುಂಬುವ ಕಾರ್ಯವನ್ನು ನೆರವೇರಿಸಿದರು. 
ಹಲವಾರು ವರ್ಷಗಳಿಂದ ಮಾರಿ ಮೂರ್ತಿಯನ್ನು ಮಣ್ಕುಳಿಯ ಮಾರುತಿ ಆಚಾರಿಯವರ ಮನೆಯವರು ತಯಾರಿಸುತ್ತಿದ್ದು ಅತ್ಯಂತ ಭಕ್ತಿ ಭಾವದಿಂದ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಈ ವರ್ಷವೂ ಕುಡಾ ಮಾರಿ ಮೂರ್ತಿಯನ್ನು ತಯಾರಿಸುವ ಕಾರ್ಯವನ್ನು ಕೈಗೊಂಡಿದ್ದು ಸಂಪೂರ್ಣ ಮೂರ್ತಿಯ ಕೆಲಸವನ್ನು ಪೂರ್ಣಗೊಳಿಸಿ ಬಣ್ಣವನ್ನು ಬಳಿದ ನಂತರ  ವಿಶ್ವಕರ್ಮ ಸಮಾಜದವರಿಂದ ಸುಹಾಸಿನಿ ಪೂಜೆಯನ್ನು ಮಾಡಿ ಮಾರಿ ಮೂರ್ತಿಯನ್ನು ಮಾರಿಜಾತ್ರೆಯಂದು ಬೆಳಗಿನಜಾವ  ಅದ್ದೂರಿ ಮೆರವಣಿಗೆಯ ಮೂಲಕ ಶ್ರೀಮಾರಿಕಾಂಬಾ ದೇವಸ್ಥಾನಕ್ಕೆ ತಂದು ಪ್ರತಿಷ್ಟಾಪಿಸಲಾಗುತ್ತದೆ. 
ಹಿನ್ನೆಲೆ: ಭಟ್ಕಳದಲ್ಲಿ ಹಿಂದಿನಿಂದ ಮಾರಿ ಜಾತ್ರೆಯು ಮಾರಿಕಟ್ಟೆಯಲ್ಲಿದ್ದ ಆಲದ ಮರದ ಬುಡದಲ್ಲಿ ಆಚರಿಸುತ್ತಾ ಬರಲಾಗುತ್ತಿತ್ತು.  ಕಾಲ ಕ್ರಮೇಣ ಬದಲಾವಣೆ ಹೊಂದಿದರೂ ಕೂಡಾ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಮಾರಿ ಜಾತ್ರೆಯನ್ನು ನೂತನ ಮಾರಿಗುಡಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದ್ದು ಧಾರ್ಮಿಕ ಭಕ್ತಿ ಶೃದ್ದೆಗೆ ಪೂರಕವಾಗಿದೆ.
ಮಾರಿ ಜಾತ್ರಗೆ ಮಾರಿಕಾಂಬಾ ದೇವಸ್ಥಾನದಲ್ಲಿ ಇರುವ ಮಾರಿ ಪ್ರತಿಮೆಯ ಎದುರು ಹಿಂದಿನ ಸಂಪ್ರದಾಯದಂತೆ ನೂತನ ಜಾತ್ರಾ ಮೂರ್ತಿಯನ್ನು ಪ್ರತಿಷ್ಟಾಪಿಸಿ ಎರಡು ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ. ಮಾರಿ ಗಂಡ ಎನ್ನುವವ  ಮಾರಿಯ ಮರವನ್ನು ಆಚಾರಿಯ ಮನೆಗೆ ತಲುಪಿಸುವುದರಿಂದ ಹಿಡಿದು ಮಾರಿಯ ಪ್ರತಿಷ್ಟಾಪನೆಯಾಗಿ ವಿಸರ್ಜನೆಯ ತನಕ ವಿವಿಧ ಕಾರ್ಯಗಳನ್ನು ಮಾಡುತ್ತಾ ಬರುತ್ತಾನೆ.
ಮಾರಿಯ ಗಂಡನನ್ನು ಮುಂದೆ ಮಾಡಿಕೊಂಡು ಮಾರಿ ಮೂರ್ತಿ ಆಚಾರಿಯ ಮನೆಯಿಂದ ಭಾರಿ ಮೆರವಣಿಗೆಯಲ್ಲಿ ಮಾರಿಗುಡಿಗೆ  ಬಂದ ನಂತರ ಹಿಂದೆ ಪ್ರತಿಯೊಂದು ಕೆಲಸವನ್ನು ಕೂಡಾ ಒಂದೊಂದು ಸಮಾಜಕ್ಕೆಂದು ಮೀಸಲಿಡಲಾಗಿತ್ತು. ಆದರೆ ಇಂದು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಿರ್ವಹಿಸಲಾಗುತ್ತದೆ, ಯಾವುದೇ ರೀತಿಯಿಂದ ಜಾತೀವಾರು ವಿಂಗಡನೆಯನ್ನು ಮಾಡುವ ಸಂಪ್ರದಾಯ ಮಾರಿಕಾಂಬಾ ವಿಶ್ವಸ್ಥ ಮಂಡಳಿ ಇಟ್ಟುಕೊಂಡು ಬಂದಿಲ್ಲ. ಮಾರಿ ಮೂರ್ತಿಯ ಪ್ರತಿಷ್ಟಾಪನೆ ನಂತರ ಮೊದಲನೇ ದಿನದಂದು ಭಟ್ಕಳ ತಾಲೂಕಿನ ಗ್ರಾಮೀಣ ಭಾಗದವರು ಬಂದು ಪೂಜೆ ಸಲ್ಲಿಸುವುದು ವಾಡಿಕೆ.  ಎರಡನೆ ದಿನ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಭಟ್ಕಳ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪೂಜೆ ಸಲ್ಲಿಸುತ್ತಾರೆ. ಮಧ್ಯಾಹ್ನದ ನಂತರ ನಡೆಯುವ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.  
ಮಾರಿ ಜಾತ್ರೆಯ ಸಂದರ್ಭದಲ್ಲಿ ಮಾರಿಕಾಂಬಾ ದೇವಸ್ಥಾನ ಆಡಳಿ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಕಮಿಟಿಯ ಪ್ರಮುಖರಾದ ಶ್ರೀಧರ ನಾಯ್ಕ ಆಸರಕೇರಿ, ಗುರು ಸಾಣಿಕಟ್ಟಾ, ಶ್ರೀಪಾದ್ ಕಂಚುಗಾರ, ಮಂಜು ನಾಯ್ಕ ಪುರವರ್ಗ, ಈಶ್ವರ ನಾಯ್ಕ, ಮಾರುತಿ ನಾಯ್ಕ ಮಣ್ಕುಳಿ ಸೇರಿದಂತೆ ಗಣ್ಯರು, ಊರಿನ ಧಾರ್ಮಿಕ ಮುಖಂಡರುಗಳು ಭಾಗವಹಿಸಿ ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ಎರಡು ದಿನಗಳ ಮಾರಿ ಜಾತ್ರೆಗೆ ಕೇವಲ ಭಟ್ಕಳ ಮಾತ್ರವಲ್ಲ ಜಿಲ್ಲೆಯ ಮತ್ತು ಅಕ್ಕಪಕ್ಕದ ಜಿಲ್ಲೆಯ ಜನರೂ ಬಂದು ಹರಿಕೆ ಕಾಣಿಕೆ ನೀಡುವುದು ನಡೆದುಕೊಂಡು ಬಂದಿದೆ. 
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...