ಮುರ್ಡೇಶ್ವರ ಲಯನ್ಸ್ ಕ್ಲಬ್  ನಿಂದ  ಸ್ನೇಹಾ ವಿಶೇಷ ಶಾಲೆಗೆ ನೆರವು

Source: sonews | By Staff Correspondent | Published on 10th March 2018, 11:18 PM | Coastal News | Don't Miss |

ಭಟ್ಕಳ:  ಶನಿವಾರ ಸ್ನೇಹಾ ವಿಶೇಷ ಶಾಲೆ ಕೋಗ್ತಿ, ಭಟ್ಕಳ ಇಲ್ಲಿಯ ದಿವ್ಯಾಂಗ ಮಕ್ಕಳಿಗೆ ಲಯನ್ಸ್ ಕ್ಲಬ್ ಮುರ್ಡೇಶ್ವರದವರು,  ದಿವಂಗತ ಲಯನ್ಸ್ ಕ್ಲಬ್ ಮುರ್ಡೇಶ್ವರದ ಸದಸ್ಯರಾದ ಜಗನ್ನಾಥ ಶೆಟ್ಟಿಯವರ ಕುಟುಂಬದ ಸಹಯೋಗದೊಂದಿಗೆ“RELEIVE THE HUNGER”   ತತ್ವದಡಿಯಲ್ಲಿ  ಆಹಾರ ಧಾನ್ಯಗಳಿಗಾಗಿ 10000/- ನಗದನ್ನು ವಿತರಿಸಿದರು.

ಲಯನ್ಸ್‍ನ ಎಲ್ಲಾ ಸದಸ್ಯರು ದಿವ್ಯಾಂಗ ಮಕ್ಕಳಿಗೆ ಸಿಹಿಯನ್ನು ವಿತರಿಸಿ ಅವರೊಂದಿಗೆ ಕೆಲಕಾಲ ಕಳೆದರು. ಲಯನ್ಸ್ ಕ್ಲಬ್‍ನ  ಗೋಪಾಲಕೃಷ್ಣ ಬಿಂದಗಿಯವರು ಉಪಸ್ಥಿತರಿದ್ದರು. ಈ ವೇಳೆ ಲಯನ್ಸ್ ಕ್ಲಬ್ ಮುರ್ಡೇಶ್ವರದ ಸದಸ್ಯರಾದ ಎಮ್.ವಿ ಹೆಗಡೆ, ಡಾ.ವಾದಿರಾಜ್ ಭಟ್, ನಾಗೇಶ ಮಡಿವಾಳ, ಕಿರಣ್ ಮಾನಕಾಮೆ, ಮಂಜುನಾಥ ದೇವಡಿಗ, ಸಿ.ಆರ್ ನಾಯ್ಕ, ಗಜಾನನ ಶೆಟ್ಟಿ, ರಾಮದಾಸ ಶೇಟ್ ಮೊದಲಾದ ಸದಸ್ಯರು ಹಾಜರಿದ್ದು ಸಹಕರಿಸಿದರು. ಲಯನ್ಸ್ ಕ್ಲಬ್ ಮುರ್ಡೇಶ್ವದ “RELEIVE THE HUNGER”    ಸುಬ್ರಾಯ ನಾಯ್ಕರವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸ್ನೇಹ ವಿಶೇಷ ಶಾಲೆಯ ಮುಖ್ಯಾಧ್ಯಾಪಕಿ ಮಾಲತಿ ಉದ್ಯಾವರರವರು ಲಯನ್ಸ್ ಕ್ಲಬ್‍ನ ಸಮಾಜಸೇವೆಗೆ ಹರ್ಷ ವ್ಯಕ್ತಪಡಿಸಿದರು. ಲಯನ್ಸ್ ಕ್ಲಬ್ ಮುರ್ಡೇಶ್ವರ ಇವರು ಕಳೆದ ಐದು ವರ್ಷಗಳಿಂದ ಈ ಶಾಲೆಯ ಕುರಿತು ಮುತುವರ್ಜಿ ವಹಿಸಿ ದೇಣಿಗೆಗಳನ್ನು ನೀಡುತ್ತಿರುವುದನ್ನು ಸ್ಮರಿಸಬಹುದಾಗಿದೆ.

 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...