ಲ್ಯಾಂಪ್ಸ್ ಅಧ್ಯಕ್ಷರಾಗಿ ನಾಗಯ್ಯ ಗೊಂಡ ಆಯ್ಕೆ

Source: sonews | By Sub Editor | Published on 5th December 2017, 6:06 PM | Coastal News | Don't Miss |

ಭಟ್ಕಳ: ಭಟ್ಕಳ ತಾಲೂಕು ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ಧೇಶಗಳ ಸಹಕಾರಿ ಸಂಘ (ಲ್ಯಾಂಪ್ಸ್) ಇದರ ನೂತನ ಅಧ್ಯಕ್ಷರಾಗಿ ನಾಗಯ್ಯ ಮಾಸ್ತಿ ಗೊಂಡ, ಉಪಾಧ್ಯಕ್ಷರಾಗಿ ಗಣಪಯ್ಯ ಮಾಸ್ತಿ ಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
  
ಕಳೆದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯ ಸಂದರ್ಭದಲ್ಲಿ ನಡೆದ ಸದಸ್ಯರ ನಡುವಿನ ಒಪ್ಪಂದದಂತೆ ಎರಡೂವರೆ ವರ್ಷ ಅವಧಿಯ ಅಧಿಕಾರ ಮುಗಿಸಿದ ಅಧ್ಯಕ್ಷ ಬಡಿಯಾ ಸೋಮಯ್ಯ ಗೊಂಡ ಮತ್ತು ಉಪಾಧ್ಯಕ್ಷ ರಮೇಶ ಈರಯ್ಯ ಗೊಂಡ ರಾಜಿನಾಮೆ ಸಲ್ಲಿಸಿದ ನಂತರ ಆ ಸ್ಥಾನ ತೆರವಾಗಿತ್ತು. ಸಹಕಾರಿ ಇಲಾಖೆಯ ಅಧಿಕಾರಿ ಜಿ.ಕೆ.ಭಟ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಲ್ಯಾಂಪ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ಗೊಂಡ ಉಪಸ್ಥಿತರಿದ್ದರು.
 

Read These Next

ರಸ್ತೆ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ...

ಅಣಬೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆ ಯಿಂದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ 

ಮುಂಡಗೋಡ : ಪೌಷ್ಟಿಕಾಂಶದ ಪಡೆದು ಸದೃಡರಾಗಿ  ಹಾಗೂ ಅರ್ಥಿಕವಾಗಿ ಬಲಗೊಳ್ಳಲು ಅಣಬೆ ಬೇಸಾಯಕ್ಕೆ ಒತ್ತು ನೀಡುವಂತೆ ತೋಟಗಾರಿಕಾ ...