ಸಹಾಯಕ ಆಯುಕ್ತ, ವೈದ್ಯಾಧಿಕಾರಿಯಿಂದ ಕಿತ್ತೂರು ಚೆನ್ನಮ್ಮಾ ವಸತಿ ಶಾಲೆ ಪರಿಶೀಲನೆ

Source: sonews | By Staff Correspondent | Published on 22nd November 2017, 7:37 PM | Coastal News | State News | Don't Miss |

 ವಿದ್ಯಾರ್ಥಿನೀಯರು ಅಸ್ವಸ್ಥರಾದ ಹಿನ್ನೆಲೆ

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಿತ್ತೂರು ಚೆನ್ನಮ್ಮಾ ವಸತಿ ಶಾಲೆಯಲ್ಲಿ ಮಂಗಳವಾರ ರಾತ್ರಿ ಆರೋಗ್ಯ ಸಮಸ್ಯೆ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಬುಧವಾರ ವಸತಿ ಶಾಲೆಗೆ ಭೇಟಿ ನೀಡಿದ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಗುರುಮೂರ್ತಿ ಭಟ್ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಹಾಯಕ ಆಯುಕ್ತರು ವಿಷಯುಕ್ತ ಆಹಾರದಿಂದಾಗಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಲ್ಲಿನ ಆಹಾರವನ್ನು ಸ್ವತಃ  ತಾನು ಹಾಗೂ ಆರೋಗ್ಯಾಧಿಕಾರಿಗಳು ಮತ್ತು ಪಾಲಕ ಪ್ರತಿನಿಧಿಗಳೊಂದಿಗೆ ಸೇವಿಸಿದ್ದು ಊಟ ರುಚಿಕಟ್ಟಾಗಿದೆ ಮತ್ತು ಶುಚಿಯಾಗಿದೆ ಎಂದು ತಿಳಿಸಿದರು. ಕೆಲ ವಿದ್ಯಾರ್ಥಿನೀಯರು ವೈಯಕ್ತಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರನ್ನು ಸರ್ಕಾರಿ ವೈದ್ಯರಿಂದ ತಪಾಸಣೆಗೊಳಪಡಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗೂ ಇಲ್ಲಿ ನೀಡುತ್ತಿರುವ ಆಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯರೂ ತಿಳಿಸಿದ್ದಾರೆ ಎಂದ ಅವರು ಡಿ.1 ರಿಂದ ಸ್ಟಾಫ್ ನರ್ಸ್ ನೇಮಕ ಮಾಡಿಕೊಳ್ಳಲು ವೈದ್ಯಾಧಿಕಾರಿಗೆ ತಿಳಿಸಿದ್ದು ಅಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಯ ನರ್ಸ್‍ಗಳು ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ ಮಾಡುವರು ಎಂದರು. 
ಈ ಸಂದರ್ಭದಲ್ಲಿ ಮಾತನಾಡಿದ ಪಾಲಕ ಪ್ರತಿನಿಧಿ ನಾಗಯ್ಯ ಗೊಂಡ, ಕಿತ್ತೂರು ಚೆನ್ನಮ್ಮಾ ವಸತಿ ಶಾಲೆಯಲ್ಲಿ ನನ್ನ ಇಬ್ಬರು ಮಕ್ಕಳು ಅಭ್ಯಾಸ ಮಾಡಿದ್ದಾರೆ ಇಲ್ಲಿನ ವಿದ್ಯಾಭ್ಯಾಸ, ಆಹಾರದ ಬಗ್ಗೆ ಎರಡು ಮಾತಿಲ್ಲ, 220 ವಿದ್ಯಾರ್ಥಿನೀಯರು ಇಲ್ಲಿ ಅಭ್ಯಾಸಿಸುತ್ತಿದ್ದು ಕೆಲವೊಬ್ಬರಿಗೆ ವೈಯಕ್ತಿಕ ಆರೋಗ್ಯ ಸಮಸ್ಯೆಯಿದೆ. ಅದನ್ನೇ ಮುಂದಿಟ್ಟುಕೊಂಡು ಕೆಲವರು ಮಾಧ್ಯಮಗಳಿಗೆ ಇಲ್ಲಿ ವಿಷಯುಕ್ತ ಆಹಾರ ನೀಡುತ್ತಿದ್ದಾರೆ ಎಂಬ ಮಾಹಿತಿ ನೀಡಿ ಶಾಲೆಯ ಹೆಸರನ್ನು ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿದರು. 
ಪ್ರಭಾರ ಪ್ರಾಂಶುಪಾಲ ಗಿರೀಶ್.ಎನ್ ಮಾತನಾಡಿ ನಮ್ಮಲ್ಲಿ ತಾಲೂಕಿನ ಎಲ್ಲ ಭಾಗದ ವಿದ್ಯಾರ್ಥಿನೀಯರು ಅಭ್ಯಾಸ ಮಾಡುತ್ತಿದ್ದಾರೆ ಇಲ್ಲಿನ ಎಸ್.ಎಸ್.ಎಲ್.ಸಿ ಫಲಿತಾಂಶವೂ ಉತ್ತಮವಾಗಿದೆ. ಅಲ್ಲದೆ ನಾನು ವಿದ್ಯಾರ್ಥಿಗಳ ಊಟ, ವಸತಿ, ಶುಚಿತ್ವಕ್ಕೆ ಅತ್ಯಂತ ಮಹತ್ವ ನೀಡುತ್ತೇವೆ. ಕೆಲವು ವಿದ್ಯಾರ್ಥಿನೀಯರು ಚರ್ಮ ಕಾಯಿಲೆ, ಹೊಟ್ಟೆನೋವು ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅಂತಹ ವಿದ್ಯಾರ್ಥಿನೀಯರ ಪಾಲಕರಿಗೂ ಮಾಹಿತಿ ನೀಡಿದ್ದೇವೆ. ಮಂಗಳವಾರ ಅಕಸ್ಮಿಕವಾಗಿ ನಾಲ್ಕು ವಿದ್ಯಾರ್ಥಿನೀಯರು ಅಸ್ವಸ್ಥಗೊಂಡಿದ್ದು ಇದು ಅವರು ಕೆಲ ವ್ಯಯಕ್ತಿಕ ಸಮಸ್ಯೆಯಿಂದಾಗಿಯೇ ಹೊರತು ರಾತ್ರಿಯ ಊಟ ಸೇವನೆಯಿಂದಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಿತ್ತೂರು ಚೆನ್ನಮ್ಮಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿನೀಯರೊಂದಿಗೆ ಊಟ ಮಾಡುತ್ತಿರುವ ಸಹಾಯಕ ಆಯುಕ್ತ, ತಾಲೂಕು ವೈದ್ಯಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಪಾಲಕ ಪ್ರತಿನಿಧಿಗಳು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...