ಕಬಡ್ಡಿ ಪ್ರೇಮಿಗಳಿಗೆ ರಸದೌತಣ ನೀಡಿದ ಕಬಡ್ಡಿ ಹಬ್ಬ; ಅಳ್ವಾಸ್ ಕಬಡ್ಡಿ ತಂಡಕ್ಕೆ ರಾಜ್ಯಮಟ್ಟದ ಪ್ರಶಸ್ತಿಯ ಗರಿ

Source: sonews | By Staff Correspondent | Published on 22nd January 2018, 6:55 PM | Coastal News | State News | Don't Miss |

* ರೋಚಕ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದ 13 ಸಾವಿರ ಪ್ರೇಕ್ಷಕರು 

ಭಟ್ಕಳ: ಸತತ ಮೂರು ದಿನಗಳ ಕಾಲ ಕಟ್ಟೇವೀರ ಸ್ಪೋಟ್ಸ ಕ್ಲಬ್ ಮುಠ್ಠಳ್ಳಿ, ರಂಜನ ಇಂಡೆನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ನಡೆದ ರಂಜನ ಇಂಡೆನ್-2018 ಪುರುಷರಿಗಾಗಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಪ್ರಥಮ ಸ್ಥಾನವನ್ನು ಮೂಡಬಿದಿರೆಯ ಆಳ್ವಾಸ್ ತಂಡವೂ ತನ್ನ ಮುಡಿಗೇರಿಸಿಕೊಂಡಿತು.
ಒಟ್ಟು 16 ತಂಡಗಳ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಮೊದಲ ಸೆಮಿಫೈನಲ್‍ನಲ್ಲಿ ಕೋಲಾ ಬೆಂಗಳುರು ತಂಡ ಹಾಗೂ ಆಳ್ವಾಸ ತಂಡವೂ ಸೆಣಸಾಡಿ ಆಳ್ವಾಸ ತಂಡ ಜಯಭೇರಿ ಪಡೆದು ಮೊದಲು ಫೈನಲ್‍ಗೇರಿತು. ಬಳಿಕ ಎರಡನೇ ಸೆಮಿಫೈನಲ್‍ನಲ್ಲಿ ಎಮ.ಇ.ಜಿ. ಬೆಂಗಳುರು ಹಾಗೂ ಇಲ್ಲಿನ ಕಟ್ಟೇವೀರ ತಂಡದ ನಡುವೆ ರೋಚಕ ಪಂದ್ಯ ನಡೆದು ಎಮ.ಇ.ಜಿ. ಬೆಂಗಳುರು ಇನ್ನೊಂದು ತಂಡವಾಗಿ ಫೈನಲ್‍ಗೇರಿತು.
ಫೈನಲ್ ಪಂದ್ಯವೂ ಅತ್ಯಂತ ರೋಚಕತೆಯಲ್ಲಿ ನಡೆದು ಕೊನೆಯಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡವೂ ಎಮ್.ಇ.ಜಿ. ಬೆಂಗಳುರು ತಂಡವನ್ನು 30-23 ಅಂಕ ಪಡೆದು 7 ಅಂಕಗಳ ಮುನ್ನಡೆಯೊಂದಿಗೆ ರಾಜ್ಯ ಮಟ್ಟದ ರಂಜನ ಇಂಡೆನ್-2018 ಕಬಡ್ಡಿ ಪಂದ್ಯವನ್ನು ಗೆದ್ದು ಟ್ರೋಪಿ ಜೊತೆಗೆ ಒಂದು ಲಕ್ಷ ಬಹುಮಾನವನ್ನು ಪಡೆದುಕೊಂಡಿತು. 
ಪಂದ್ಯದ ದ್ವಿತೀಯ ಸ್ಥಾನವನ್ನು 50 ಸಾವಿರ ನಗದು ಮತ್ತು ಟ್ರೋಪಿಯೊಂದಿಗೆ ಎಮ್.ಇ.ಜಿ. ಬೆಂಗಳುರು ಪಡೆದುಕೊಂಡರೆ ತೃತೀಯ ಸ್ಥಾನವನ್ನು ಎರಡು ತಂಡಗಳ ಪಾಲಾಗಿದ್ದು ಕೋಲಾ ಬೆಂಗಳುರು ಮತ್ತೂ ಶ್ರೀ ಕಟ್ಟೇವೀರ ಕಬಡ್ಡಿ ತಂಡ ತಲಾ 25 ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನರಾದರು. 
ಪಂದ್ಯದ ಬೆಸ್ಟ ಡಿಪೆಂಡರ್ ಆಗಿ ಆಳ್ವಾಸ ತಂಡದ ಜಸ್ವಂತ ಹೊರಹೊಮ್ಮಿದ್ದು ಟ್ರೋಪಿ ಮತ್ತು ಏರ್ ಕೂಲರ್ ಪಡೆದುಕೊಂಡರು. ಬೆಸ್ಟ ರೈಡರ್ ಆಗಿ ಎಮ್.ಇ.ಜಿ. ಬೆಂಗಳುರು ತಂಡದ ಮಂಜುನಾಥ ಪಡೆದುಕೊಂಡಿದ್ದ ಇವರಿಗೂ ಸಹ ಏರ್ ಕೂಲರ್ ಮತ್ತು ಟ್ರೋಫಿ ನೀಡಲಾಯಿತು. ಹಾಗೂ ಬೆಸ್ಟ ಆಲ್‍ರೌಂಡರ್ ಪಟ್ಟ ಶ್ರೀ ಕಟ್ಟೇವೀರ ಕಬಡ್ಡಿ ತಂಡದ ಆಟಗಾರ ಸಚಿನ್ ಪಡೆದುಕೊಂಡು  32 ಇಂಚಿನ ಎಲ್.ಇ.ಡಿ. ಟಿ.ವಿ ಮತ್ತೂ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. 
ಮೂರು ದಿನದ ಪಂದ್ಯದುದ್ದಕ್ಕೂ ತಾಲೂಕಿನ ಕಬಡ್ಡಿ ಕ್ರೀಡಾಭಿಮಾನಿಗಳು ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದು, 13 ಸಾವಿರ ಪ್ರೇಕ್ಷಕರನನೊಳಗೊಂಡಂತೆ ರೋಚಕ ಯಶಸ್ವಿ ಪಂದ್ಯ ಮುಕ್ತಾಯವಾಯಿತು. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...