ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಿಂದ ಸಿಹಿ ವಿತರಣೆ

Source: sonews | By Staff Correspondent | Published on 20th November 2018, 4:06 PM | Coastal News | Don't Miss |

ಭಟ್ಕಳ: ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ) ರ ಜೀವನ ಮತ್ತು ಸಂದೇಶವನ್ನು ಅರಿಯಲು ಮತ್ತು ಹಿಂದೂ ಮುಸ್ಲಿಮರಲ್ಲಿ ಪರಸ್ಪರ ಸೌಹಾರ್ದತೆಯನ್ನುಂಟು ಮಾಡಲು ಆಯೋಜಿಸಿರುವ ರಾಜ್ಯವ್ಯಾಪಿ ಸೀರತ್ ಅಭಿಯಾನದ ಅಂಗವಾಗಿ ‘ಮೀಲಾದುನ್ನಬಿ’ ದಿನವಾಗಿರುವ ಮಂಗಳವಾರದಂದು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ವತಿಯಿಂದ ಪರಿಚಯ ಪುಸ್ತಿಕೆ ಮತ್ತು ಸಿಹಿಯನ್ನು ವಿತರಿಸಲಾಯಿತು. 

ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ‘ಲೋಕನಾಯಕ ಪ್ರವಾದಿ ಮುಹಮ್ಮದ್(ಸ)  ’ಎಂಬ ಪುಸ್ತಿಕೆ ವಿತರಣಾ ಕಾರ್ಯಕ್ರಮವು ಗಿತ್ರಿಫ್ ರಿದಾ ಮಾನ್ವಿಯ ಕುರ್‍ಆನ್ ಪಠಣದೊಂದಿಗೆ  ಉದ್ಘಾಟನೆಗೊಂಡಿತು. 

ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಚಾಲಕ ಮೌಲಾನ ಎಸ್.ಎಂ. ಸೈಯ್ಯದ್ ಝುಬೇರ್ ನಾವು ಪ್ರತಿಯೊಬ್ಬರು ಪ್ರೀತಿ ಪ್ರೇಮದಿಂದ ಬದುಕುವಂತಾಗಬೇಕು ಎಂಬ ಸಂದೇಶವನ್ನು ಪ್ರವಾದಿ ಮುಹಮ್ಮದ್(ಸ) ಸಾರಿದ್ದರು. ಅವರು ಮಾನವ ಕುಲಕ್ಕೆ ಕರುಣೆಯಾಗಿದ್ದರು. ಗಾಳಿ,ಬೆಳಕು ಹೇಗೆ ಎಲ್ಲರಿಗಾಗಿದೆಯೂ ಪ್ರವಾದಿ ಸಂದೇಶವು ಕೂಡು ಎಲ್ಲ ಸಮುದಾಯದವರಿಗಾಗಿದೆ ಎಂದ ಅವರು ಪ್ರೀತಿಯ, ಮಾನವೀಯ, ಸೌಹಾರ್ದದ ಸಂದೇಶಗಳನ್ನು ನಾವೆಲ್ಲರು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು. 

ಪತ್ರಕರ್ತ ಎಂ.ಆರ್.ಮಾನ್ವಿ  ಮಾತನಾಡಿ, ಒಬ್ಬರು ಇನ್ನೊಬ್ಬರನ್ನು ತಿಳಿಯುವ ಮತ್ತು ತಿಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಾಗ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆಯುಂಟಾಗುತ್ತದೆ. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಆಯೋಜಿಸಿರುವ ಈ ಅಭಿಯಾನದ ಮೂಲಕ ಜಗತ್ಪ್ರಸಿದ್ಧ ದಾರ್ಶನಿಕ ಪ್ರವಾದಿ ಮುಹಮ್ಮದ್ ರನ್ನು ಸುಲಭವಾಗಿ ಅರಿಯುವಂತಾಗುತ್ತದೆ. ನಾವು ಒಬ್ಬರು ಇನ್ನೊಬ್ಬರನ್ನು ಸಹಿಸಿಕೊಳ್ಳುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು, ಧರ್ಮ ನಮಗೆ ಇದನ್ನೆ ಕಲಿಸಿಕೊಡುತ್ತದೆ ಎಂದರು. 

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಮೌಲಾನ ಯಾಸಿರ್ ನದ್ವಿ ಬರ್ಮಾವರ್, ಖಮರುದ್ದೀನ್ ಮಷಾಯಿಕ್, ಶೌಕತ್ ಖತೀಬ್, ಅಬ್ದುಲ್ ಜಬ್ಬಾರ್ ಅಸದಿ, ಸೈಫುಲ್ಲಾ ಅಕ್ರಮಿ, ಸನಾವುಲ್ಲಾ ಅಸದಿ, ಸಲಾಹುದ್ದೀನ್ ಎಸ್.ಕೆ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು. ಜಾಮಿಯಾ ಇಸ್ಲಾಮಿಯಾ ಪ್ರಾಧ್ಯಾಪಕ ಮೌಲಾನ ಇಕ್ಬಾಲ್ ನದ್ವಿ ನಾಯ್ತೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...