ಮಾರ್ಚ 17ಕ್ಕೆ ಜೆ.ಡಿ.ಎಸ್ ಬೃಹತ್ ಸಮಾವೇಶ; ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನ

Source: sonews | By Staff Correspondent | Published on 14th March 2018, 6:45 PM | Coastal News | State News | Don't Miss |

ಭಟ್ಕಳ: ಮಾರ್ಚ 17ರಂದು ಎಚ್.ಡಿ.ಕುಮಾರಸ್ವಾಮಿ ಭಟ್ಕಳಕ್ಕೆ ಭೇಟಿ ನೀಡಲಿದ್ದು ಅಂದು ಮಧ್ಯಾಹ್ನ ಪುರಸಭೆ ಸಮೀಪದ ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಭಟ್ಕಳ ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹೇಳಿದರು.

ಅವರು ಮಂಗಳವಾರ  ಬಂದರ್ ರಸ್ತೆಯಲ್ಲಿರುವ ಜೆ.ಡಿ.ಎಸ್. ಘಟಕದ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ  ಮಾತನಾಡುತ್ತಿದ್ದರು.

‘1983 2013ರ ಚುನಾವಣೆಯಲ್ಲಿ ಜೆಡಿಎಸ್ 2ನೇ ಸ್ಥಾನ ಪಡೆದುಕೊಂಡಿದ್ದು ಜನರಿಗೆ ಜೆಡಿಎಸ್ ಪಕ್ಷದ ಮೇಲೆ ನಂಬಿಕೆ ಇದೆ. ಜೆಡಿಎಸ್ ಪಕ್ಷದ ಯಾವುದೇ ಪ್ರಚಾರ ಮಾಡದೇ ಗೆಲುವು ಖಚಿತವಾಗಿದ್ದು, ಆದರೆ ನಮಗೆ ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ಪಕ್ಷ ಗೆದ್ದು ಯಾವೊಬ್ಬ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಸರಕಾರ ನಡೆಸುವುದಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬುದು ಈಗಾಗಲೇ ಖಚಿತಗೊಂಡಿದೆ. ಹಾಗೆಯೇ ಭಟ್ಕಳದ ಶಾಸಕನಾಗಿ ಜನರು ಇನಾಯತುಲ್ಲಾರನ್ನು ಆಶೀರ್ವದಿಸಲಿದ್ದಾರೆ ಎಂದರು. ಭಟ್ಕಳ ಶಿರಾಲಿಯ ಸಾರದಹೊಳೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯವರನ್ನು ಸ್ವಾಗತಿಸಿ ಅಲ್ಲಿ ಹಳೆ ಕೋಟೆ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಕುಮಾರ ಪರ್ವ ರಥದಲ್ಲಿ ರ್ಯಾಲಿ ಮೂಲಕ ಇಲ್ಲಿನ ಹಳೆ ಬಸ್ ನಿಲ್ದಾಣದ ಸಮೀಪ ಅಂಜುಮಾನ ಮೈದಾನದಲ್ಲಿ ಮಾರ್ಚ 17 ರಂದು 12 ಗಂಟೆಗೆ ಕುಮಾರಸ್ವಾಮಿ ಅವರು ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಮುಖ್ಯವಾಗಿ ಅತಿಕ್ರಮಣ ಹೋರಾಟದ ಬಗ್ಗೆ ಪ್ರಸ್ಥಾಪಿಸಲಿದ್ದೇವೆ. ಜಿ ಲ್ಲೆಯಲ್ಲಿ ಕೈಗಾರಿಕೆಗಳಿಲ್ಲದೇ ನಿರುದ್ಯೋ ಸಮಸ್ಯೆ ಎದುರಾಗುತ್ತಿದ್ದು, ಕೈಗಾರಿಕಾ ಸಚಿವರು ಯಾವುದೇ ಕಾರ್ಯ ಮಾಡುತ್ತಿಲ್ಲ. ಮೊದಲು ಜಿಲ್ಲೆ ಹಾಗು ತಾಲುಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಲಿದ್ದಾರೆ. ಬಳಿಕ ಮಧ್ಯಾಹ್ನ3 ಗಂಟೆಗೆ ತಂಜೀಂ ಸಂಸ್ಥೆಗೆ ಭೇಟಿ ಮಾಡಿ ಅಲ್ಲಿನ ಮುಖಂಡರ ಜೊತೆಗೆ ಚರ್ಚೆ ಹಾಗೂ ಸಭೆ ನಡೆಸಲಿದ್ದಾರೆಂದು ಹೇಳಿದರು.

ಜೆಡಿಎಸ್ ಘಟಕ ಉಪಾಧ್ಯಕ್ಷ ಎಂ.ಡಿ.ನಾಯ್ಕ ‘ಪಕ್ಷವೂ ಹೊಸ ಉತ್ಸಾಹ, ಹೊಸ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಲಿದ್ದೇವೆ. ಕಳೆದ 2013ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸ್ಪರ್ಧೇ ನೀಡಿದ ಪಕ್ಷವೂ ಮುಂಬರು ಚುನಾವಣೆಯಲ್ಲಿ ಇನಾಯತುಲ್ಲಾ ಶಾಬಂದ್ರಿಯವರೇ ಮುಂದಿನ ಭಟ್ಕಳದ ಶಾಸಕರಾಗಿದ್ದಾರೆ. 65% ಭಟ್ಕಳದಲ್ಲಿ ಅಲ್ಪಸಂಖ್ಯಾತರಿದ್ದು, ಬಹುತೇಕ ಚುನಾವಣೆಗೆ ಎಲ್ಲಾ ಸಿದ್ಧತೆಯ ನಡೆಯುತ್ತಿದೆ. ಎಂದು ಹೇಳಿದರು.

ಶಾಸಕ ಮಂಕಾಳರ ವಿರುದ್ಧ ಆರೋಪ
ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಮಂಕಾಳ ವೈದ್ಯರು ಬಹುತೇಕ ಕಾಮಗಾರಿ ಕೆಲಸ ಆಗಿದೆ ಆದರೆ ಸರಕಾರದಿಂದ ಬಂದ ಎಲ್ಲಾ ಅನುದಾನ ಹಾಗೂ ಈ ಹಿಂದೆ ಇದ್ದ ಶಾಸಕರು ಮಾಡಿದ ಕೆಲಸವನ್ನು ತಾವು ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ. ಸರಕಾರದಿಂದ ಯಾರೇ ಶಾಸಕರಾದರು ಒಂದು ಹಂತದ ಅನುದಾನ ಬರಲಿದ್ದು ವಿವಿಧ ಇಲಾಖೆಗೆ ಇಂತಿಷ್ಟು ಅನುದಾನ ಬರಲಿದ್ದು ಅವೆಲ್ಲವೂ ಅವರ ಅಭಿವೃದ್ಧಿಯ ಪ್ಲೆಕ್ಸ, ಬ್ಯಾನರ್ಸಗೆ ಸೇರಿಸಿದ್ದಾರೆ. ಒಂದು ಹಂತಕ್ಕೆ ಕೇಂದ್ರ ಐ.ಆರ್.ಬಿ. ಕಾಮಗಾರಿಯ ಲೆಕ್ಕವನ್ನು ಶಾಸಕ ವೈದ್ಯ ಸೇರಿಸಿದ್ದಾ ಎಂಬ ಅನುಮಾನ ಕಂಡು ಬರುತ್ತಿದೆ ಎಂದು ಭಟ್ಕಳ ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಆರೋಪಿಸಿದರು. 

ಈ ಸಂಧರ್ಭದಲ್ಲಿ ಜೆ.ಡಿ.ಎಸ್ ಪಕ್ಷದ ಪಾಂಡುರಂಗ ನಾಯ್ಕ, ಕೃಷ್ಣಾನಂದ ಪೈ, ಕೃಷ್ಣ ನಾಯ್ಕ, ವೆಂಕಟೇಶ ನಾಯ್ಕ, ಶಂಕರ ನಾಯ್ಕ, ದೇವಯ್ಯ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...