ಸಾಹಿಲ್‍ಆನ್ ಲೈನ್ ಜಾಲತಾಣದ ಪ್ರಧಾನ ಸಂಪಾದಕ ಇನಾಯತುಲ್ಲಾ ಗವಾಯಿಗೆ ಅಜ್ಜೀಬಳ ಪ್ರಶಸ್ತಿ

Source: sonews | By Staff Correspondent | Published on 30th June 2018, 6:18 PM | Coastal News | Don't Miss |

ಭಟ್ಕಳ: ತಮ್ಮ 15ನೇ ವಯಸ್ಸಿನಿಂದಲೆ ಆನ್‍ಲೈನ್ ಜಾಲಾತಾಣದಲ್ಲಿ ತೊಡಗಿಸಿಕೊಂಡಿರುವ ಭಟ್ಕಳದ ಸಾಹಿಲ್‍ಆನ್‍ಲೈನ್ ಸುದ್ದಿ ಜಾಲಾತಾಣದ ಪ್ರಧಾನ ಸಂಪಾದಕ ಹಾಗೂ ನಿದೇರ್ಶಕ ಇನಾಯತುಲ್ಲಾ ಗವಾಯಿ ಯವರಿಗೆ ಉತ್ತರಕನ್ನಡ ಜಿಲ್ಲಾ ಕಾರ್ಯಕನಿರತ ಪತ್ರಕರ್ತ ಸಂಘ ನೀಡುವ ಪ್ರತಿಷ್ಟಿತ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಾರೆ. 

ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸಂಘದ  ಜಿಲ್ಲಾಧ್ಯಕ್ಷ ಸುಭ್ರಾಯ ಭಟ್ ಬಕ್ಕಳ ತಿಳಿಸಿದ್ದಾರೆ. 

ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಈ ಬಾರಿಯ ಶ್ಯಾಮರಾವ್ ಪ್ರಶಸ್ತಿಯನ್ನು ಗೋಕರ್ಣದ ಹಿರಿಯ ಪತ್ರಕರ್ತ ಶ್ರೀಧರ ಅಡಿಗೆ ಹಾಗೂ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಭಟ್ಕಳದ ಪತ್ರಕರ್ತ ಇನಾಯತ್ ಗವಾಯಿ, ಜೊಯಿಡಾದ ಪತ್ರಕರ್ತ ಪಾಂಡುರಂಗ ಪಾಟೀಲರಿಗೆ ನೀಡಲು ನಿರ್ಧರಿಸಿದ್ದು ಜು.15ರಂದು ಗೋಕರ್ಣದಲ್ಲಿ ಜರಗುವು ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಖಜಾಂಚಿ ಸಂಧ್ಯಾ ಹೆಗಡೆ, ರಾಜ್ಯ ಸಮಿತಿ ಸzಸ್ಯ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿಗಳಾದ  ಅನಂತ ದೇಸಾಯಿ,ಸುಮಂಗಲಾ ಹೊನ್ನೆಕೊಪ್ಪ, ರಾಘವೇಂದ್ರ ಹೆಬ್ಬಾರ, ಜಿಲ್ಲಾ ಸಮಿತಿ ಸದಸ್ಯರಾದ  ಕೃಷ್ಣಮೂರ್ತಿ ಹೆಬ್ಬಾರ, ಬಸವರಾಜ ಪಾಟೀಲ,ರಾಘವೇಂದ್ರ ಬೆಟ್ಟಕೊಪ್ಪ, ಗುರು ಅಡಿ, ಮಂಜುನಾಥ ಸಾಯಿಮನೆ,ಮುಂಡಗೋಡದ ತಾ.ಅಧ್ಯಕ್ಷ ನಜೀರ ತಾಡಪತ್ರಿ, ಸದಸ್ಯರಾದ ಫಯಾಜ ಮುಲ್ಲಾ, ಎಂ.ಜಿ.ಉಪಾಧ್ಯ, ರವಿ ಸೂರಿ, ಗಜಾನನ ನಾಯ್ಕ,ಇತರರು ಸಭೆಯಲ್ಲಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...