ಹೈವೆ ಪೆಟ್ರೋಲಿಂಗ್ ವಾಹನಕ್ಕೆ ಸಾದಿಕ್ ಮಟ್ಟಾ ಹಸಿರು ನಿಶಾನೆ

Source: S O News service | By Staff Correspondent | Published on 21st February 2017, 11:57 PM | Coastal News | Don't Miss |

ಭಟ್ಕಳ: ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ರಸ್ತೆ ಅಪಘಾತವಾದಾಗ ತುರ್ತು ಸಹಾಯಕ್ಕೆ ಬರುವ ಹೈವೆ ಪೆಟ್ರೋಲಿಂಗ್ ವಾಹನವನ್ನು ಭಟ್ಕಳ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ವಾಹನಕ್ಕೆ ಹಸಿರುವ ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿದ ಸಾದಿಕ್ ಮಟ್ಟಾ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಅಪಘಾತ ಹಾಗೂ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಸುಧಾರಣ ಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಅಪರಾಧ ತಡೆಗಟ್ಟುವ ಬಗ್ಗೆ ಹಾಗೂ ರಸ್ತೆ ಅಪಘಾತ ಸೇರಿದಂತೆ ಇನ್ನಿತರ ತುರ್ತು ಸಂದರ್ಭದಲ್ಲಿ ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲಾ ಪೋಲೀಸ್ ಇಲಾಖೆಯಿಂದ ಭಟ್ಕಳ ಹೊನ್ನಾವರ. ಕುಮಟಾ ತಾಲೂಕಾ ಪೋಲೀಸ್ ಇಲಾಖೆಗೆ ಹೈವೆ ಪೆಟ್ರೋಲಿಂಗ್ ವಾಹನವನ್ನು ನೀಡಲಾಗಿದೆ.  

ಜಿಲ್ಲಾ ಪೋಲೀಸ್ ಇಲಾಖೆಯಿಂದ ಹಗಲು ರಾತ್ರಿ ತಾಲೂಕಿನಾದ್ಯಂತ  ದಿನದ 24 ಗಂಟೆಯೂ ಈ ವಾಹನ ಕಾರ್ಯಪ್ರವೃತ್ತಗೊಳ್ಳಲಿದ್ದು,  ಯಾವುದೇ ಸ್ಥಳದಲ್ಲಿದ್ದರೂ ಜಿಲ್ಲಾ ನಿಯಂತ್ರಣ ಕೊಠಡಿಯ ಹತೋಟಿಯಲ್ಲಿರುತ್ತದೆ. ಇವುಗಳ ಮೇಲುಸ್ತುವಾರಿಯನ್ನು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ನಿರ್ವಹಿಸಲಿದ್ದು, ಚಾಲಕ ಸೇರಿದಂತೆ ಆಯಾ ಸರಹದ್ದಿನ ಸಹಾಯಕ ಪೊಲೀಸ್‌ ಉಪನಿರೀಕ್ಷಕರು (ಎಎಸ್‌ಐ), ಸಿಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸಿಬಂದಿ ವಾಹನದ ಕಾರ್ಯನಿರ್ವಹಣೆಗೆ ತಕ್ಕಂತೆ ತರಬೇತಿ ಹೊಂದಿದವರಾಗಿರುತ್ತಾರೆ.

ವಾಹನದ ವಿಶೇಷತೆ: ಆಧುನಿಕವಾಗಿ ರೂಪುಗೊಂಡಿರುವ  ಇನ್ನೋವಾ ಗಸ್ತು ವಾಹನದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕೆಮರಾ, 180 ಡಿಗ್ರಿಯಲ್ಲಿ ಸುತ್ತುವ ಗರಿಷ್ಠ ಸಾಮರ್ಥ್ಯದ ಟಾಪ್‌ ಸರ್ಚ್‌ಲೈಟ್‌, ಬಹುಶಬ್ದ ಒಳಗೊಂಡಿರುವ ಮೂರು ಬಣ್ಣದ ಟಾಪ್‌ ಬಾರ್‌ ಲೈಟ್‌, ವಾಹನದೊಳಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗಾಯಾಳುಗಳನ್ನು ಕರೆದೊಯ್ಯಲು ಫೋಲ್ಡಿಂಗ್‌ ಸ್ಟ್ರೆಚರ್‌, ಪವರ್‌ ಬ್ಯಾಕ್‌ಅಪ್‌ ಇನ್‌ವರ್ಟರ್‌, ಜಿಪಿಆರ್‌ಎಸ್‌ ಜಿಪಿಎಸ್‌ ಹಾಗೂ ವಯರ್‌ಲೆಸ್‌ ವ್ಯವಸ್ಥೆ ಹೊಂದಿದೆ.

ಈ ಸಂಧರ್ಭದಲ್ಲಿ ಡಿವೈಎಸ್ ಪಿ. ಕೆ.ಎ.ಶಿವಕುಮಾರ್, ಸಿ.ಪಿ.ಐ. ಸುರೇಶ ನಾಯಕ್, ಪಿಎಸೈ ಹೆಚ್.ಕುಡಗುಂಟಿ, ಪಿಎಸೈ ಪರಮೇಶ್ವರಪ್ಪ, ನವೀನ್ ಬೋರಕರ್. ಹೊನ್ನಾವರ ಸಿ.ಪಿ.ಐ.ಕುಮಾರ್ ಸ್ವಾಮಿ. ಪುರಸಭಾ ಮುಖ್ಯ ಅಧಿಕಾರಿ ರಮೇಶ್.ಶಾಂತಾರಾಮ ಸೇರಿದಂತೆ ಪೋಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.

 


 

 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...