ಹೆಬಳೆ ಪಂಚಾಯತ್ ವ್ಯಾಪ್ತಿ ಅಭಿವೃದ್ಧಿಗೆ 150ಕೋಟಿ ಅನುದಾನ ಮಂಜೂರಿ-ಮಾಂಕಾಳ್

Source: sonews | By Staff Correspondent | Published on 14th January 2018, 7:51 PM | Coastal News | Don't Miss |

ಭಟ್ಕಳ: ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿಗಾಗಿ ಸರ್ಕಾರಿಂದ ಸುಮಾರು 150ಕೋ.ರೂ ಅನುದಾನ ಮಂಜೂರಿಯಾಗಿದೆ ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳ್ ಎಸ್.ವೈದ್ಯ ಹೇಳಿದರು. 
ಅವರು ಭಾನುವಾರ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ತಂಗಿನಗುಂಡಿ ತಿಲಕ ಯುವಕ ಮಂಡಳ ಹಾಗೂ ಸಿಂಚನ ಯುವತಿ ಮಂಡಳದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. 
ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸುಮಾರು 150 ಕೋಟಿ ರೂಪಾಯಿಯನ್ನು ಮಂಜೂರಿ ಮಾಡಿದ್ದೇನೆ. ಅದರಲ್ಲಿ 90% ತೆಂಗಿನಗುಂಡಿಗೆ ಪ್ರದೇಶಕ್ಕೆ ಬಳಕೆಯಾಗಿದೆ. ಇದಕ್ಕೆ ಕಾರಣ ಈ ಊರಿನ ಮುಖಂಡರು ಯುವಕರು ನನಗೆ ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಕೆಲಸ ಆಗಲು ಊರಿನ ಮುಖಂಡರ ಹಾಗೂ ಯುಕರ ಪರಿಶ್ರಮವೇ ಕಾರಣ ಎಂದ ಇಲ್ಲಿನ ಯುವಕರು ಕ್ರಿಯಾಶೀಲರಾಗಿದ್ದು ಸಮಾಜ ಹಾಗೂ ಗ್ರಾಮಕ್ಕೆ ಅವರಿಂದ ಸಾಕಷ್ಟು ಪ್ರಯೋಜನಗಳು ಆಗಲಿದೆ ಎಂದರು. 
ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆÀ್ಷಜಯಶ್ರೀ ಮೊಗೇರ ಮಾತನಾಡಿ ನನ್ನ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ನಾನು ಮಾಡಿದ್ದೇನೆ. ಶಾಸಕರು ಕೂಡ ನಮಗೆ ಸಹಕಾರ ಮಾಡಿದ್ದಾರೆ. ಇಲ್ಲಿನ ಪ್ರೌಢ ಶಾಲೆಗೆ ಜಾಗ ಕೂಡ ಮಂಜೂರಿ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಊರಿನ ಯುವಕ ಮಂಡಳದ ವತಿಯಿಂದ ಶಾಸಕ ಮಂಕಾಳ ವೈದ್ಯ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರನ್ನು ಸನ್ಮಾನಿಸಲಾಯಿತು.
ಹೆಬಳೆ ಪಂಚಾಯತ್ ಅಧ್ಯಕ್ಷ ಎನ್.ಡಿ.ಮೋಗೇರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...