ಭಟ್ಕಳ: ಜಿ.ಎಸ್.ಬಿ ಸಮಾಜದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ

Source: sonews | By Sub Editor | Published on 14th May 2018, 11:23 PM | Coastal News | Don't Miss |

ಭಟ್ಕಳ : ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿಯು ಭಟ್ಕಳ ತಾಲೂಕಾ ಸ್ವಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು. 

ಸಂಪನ್ಮೂಲ ವ್ಯಕ್ತಿಗಳಾದ ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರುನ ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ ಬೆಳ್ಕೆ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ 24 ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು. ಶಿಕ್ಷಣ ಕ್ಷೇತ್ರದಲ್ಲಿರುವ ನೂತನ ವೃತ್ತಿಪರ ಅವಕಶಗಳ ಸಂಪೂರ್ಣ ಮಾಹಿತಿಯನ್ನು ನೀಡಿ  ಎಲ್ಲರ ಪ್ರಶಂಸೆಗೆ ಪಾತ್ರರಾದರು. 

ಉಪನ್ಯಾಸಕಿ ವೀಣಾ ಪೈ ಮಾತನಾಡಿ, ಅಂಕಗಳನ್ನು ಗಳಿಸುವ ಕೌಶಲ್ಯದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸುಸಂಸ್ಕ್ರತರನ್ನಾಗಿಸಿ ಎಂದು ಪಾಲಕರಿಗೆ ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ಕಾಲರಶಿಪ್, ಶಿಕ್ಷಣ ಸಾಲದ ಬಗ್ಗೆ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. 

ಕಾರ್ಯಕ್ರಮದಲ್ಲಿ ನರೇಂದ್ರ ನಾಯಕ, ಮಂಜುನಾಥ ಪ್ರಭು, ನೀತಾ ಕಾಮತ, ನಾಗೇಶ ಪೈ, ಡಾ.ಸವಿತಾ ಕಾಮತ, ಅಧ್ಯಕ್ಷ ಕಿರಣ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಅನಿಲ ಪೈ ಸ್ವಾಗತಿಸಿದರು, ನಾಗೇಶ ಪ್ರಭು ನಿರೂಪಿಸಿದರು, ಶ್ರೀನಾಥ ಪೈ ವಂದಿಸಿದರು.
 

Read These Next

ಭಟ್ಕಳ: ಗುಡುಗು ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ. ಘಟನೆಯಲ್ಲಿ ಮನೆಯ 3ಕ್ಕೂ ಅಧಿಕ ಮಂದಿಗೆ ಗಾಯ

ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಹಿತ ಮಳೆಗೆ ಗುರುವಾರದಂದು ತಡರಾತ್ರಿ ಇಲ್ಲಿನ ...

ಬಸವಣ್ಣ ನನ್ನ ಯಕ್ಕಡಕ್ಕೆ ಸಮ ಎಂದು ಪೋಸ್ಟ್ ಹಾಕಿದ ಕಿಡಿಗೇಡಿ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

ಬೆಂಗಳೂರು: ಕಿಡಿಗೇಡಿಯೊಬ್ಬ ಸಾಮಾಜಿಕ ಹರಿಕಾರ ಬಸವಣ್ಣರ ವಿರುದ್ಧ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿರುವ ಬಗ್ಗೆ ವರದಿಯಾಗಿದೆ.