ರಾಷ್ಟೀಯ ಸೇವಾ ಯೋಜನಾ ಘಟಕ ಮತ್ತು ಇಕೋ ಕ್ಲಬ್ ಘಟಕದ ಉದ್ಘಾಟನೆ

Source: sonews | By Sub Editor | Published on 11th September 2017, 7:55 PM | Coastal News | Don't Miss |

ಭಟ್ಕಳ:  ಸರ್ಕಾರಿ ಪದವಿ ಪೂರ್ವ ಕಾಲೇಜು ಹಡೀನದಲ್ಲಿ ರಾಷ್ಟೀಯ ಸೇವಾ ಯೋಜನಾ ಘಟಕ ಮತ್ತು ಇಕೋ ಕ್ಲಬ್ ಘಟಕದ ಉದ್ಘಾಟನೆಯನ್ನು ಹೆಸ್ಕಾಂ ನಿರ್ದೇಶಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಮಂಜುನಾಥ ನಾಯ್ಕ  ಕರಾವಳಿ ಉದ್ಘಾಟಿಸಿದರು.

ನಂರ ಮಾತನಾಡಿದ  ಅವರು ವಿದ್ಯಾರ್ಥಿಗಳಲ್ಲಿ ಸೇವಾ  ಮನೋಭಾವನೆ  ಬೆಳೆಸುವದರೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು. ಶಿಸ್ತು, ಸಂಯಮ, ಸಹಬಾಳ್ವೆ, ಸಾಮರಸ್ಯ ವಿದ್ಯಾರ್ಥಿ ಜೀವನದಲ್ಲಿ  ಹಾಸುಹೊಕ್ಕಾಗಿರಬೇಕು ಇದು ಎನ್. ಎಸ್.ಎಸ್.ನಿಂದ ಸಾಧ್ಯವಾಗುವುದು ಎಂದರು.

ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ  ಯಲ್ವಡಿಕವೂರ ಗ್ರಾಮ ಪಂಚಾಯತ ಅಧ್ಯಕ್ಷೆ  ಸುಶೀಲ ಎಂ. ನಾಯ್ಕ  ಮಾತನ್ನಾಡಿ ರಾಷ್ಟ್ರೀಯ ಸೇವಾ ಯೋಜನೆ  ವ್ಯಕ್ತಿತ್ವ ವಿಕಾಸ, ನಾಯಕತ್ವದ ಗುಣ, ರಾಷ್ಟ್ರೀಯ ಐಕ್ಯತೆ, ಸೇವಾ ಭಾವನೆ ಬೆಳೆಸಲು ವಿದ್ಯಾರ್ಥಿಗಳಿಗೆ ಸಹಕಾರಿ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗಣೇಶ ಶೇಷಗಿರಿ ಹೆಬ್ಬಾರ, ಗ್ರಾಮ  ಪಂಚಾಯತ್ ಯಲ್ವಡಿಕವೂರ ಇದರ ಉಪಾಧ್ಯಕ್ಷ ಅಬ್ದುಲ್ ರಜಾಕ್,  ಗ್ರಾಮ ಪಂಚಾಯತ್ ಸದಸ್ಯ  ಮಂಜು ಗೊಂಡ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ  ವಸಂತರಾಯ ವಿ. ಗಾಂವಕರ  ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ  ಅವಿದ್ಯಾವಂತ ಮತ್ತು ವಿದ್ಯಾವಂತರ ನಡುವೆ ಸಂಪರ್ಕ ಕಲ್ಪಿಸುವದರ ಮೂಲಕ ನವಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು.

ಯೋಜನಾಧಿಕಾರಿಯಾದ ಮಂಜುನಾಥ ನಾಯ್ಕ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಮತಾ ಸಂಗಡಿಗರು ಪ್ರಾರ್ಥನೆ ಹಾಡಿದರು.  ರಮಾನಂದ ನಾಯ್ಕ ಸ್ವಾಗತಿಸಿದರು. ರಾಷ್ಟೀಯ ಸೇವಾ ಯೋಜನಾ ಗೀತೆಯನ್ನು  ಲತಾ ನಾಯ್ಕ ಮತ್ತು ಸಂಗಡಿಗರು ಹಾಡಿದರು. ರಾಮನಾಥ ನಾಯ್ಕ  ವಂದಿಸಿದರು. ವಿದ್ಯಾರ್ಥಿನಿ ಗೀತಾ  ಟಿ, ನಾಯ್ಕ ನಿರ್ವಹಿಸಿದರು.

Read These Next

ರಸ್ತೆ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ...

ಅಣಬೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆ ಯಿಂದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ 

ಮುಂಡಗೋಡ : ಪೌಷ್ಟಿಕಾಂಶದ ಪಡೆದು ಸದೃಡರಾಗಿ  ಹಾಗೂ ಅರ್ಥಿಕವಾಗಿ ಬಲಗೊಳ್ಳಲು ಅಣಬೆ ಬೇಸಾಯಕ್ಕೆ ಒತ್ತು ನೀಡುವಂತೆ ತೋಟಗಾರಿಕಾ ...