ಜು.೩೦ ರಂದು ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Source: sonews | By Staff Correspondent | Published on 27th July 2017, 9:47 PM | Coastal News | Don't Miss |

ಭಟ್ಕಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೇಕೋಡಿ, ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ಅಳ್ವೇಕೋಡಿ, ಶ್ರೀ ದುರ್ಗಾಪರಮೇಶ್ವರ ಮಾರಿ ಜಾತ್ರಾ ಸಮಿತಿ ಅಳ್ವೇಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜು.೩೦ರಂದು ರವಿವಾರ ಬೆಳಿಗ್ಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ಶಿಬಿರದಲ್ಲಿ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಕಿವಿ, ಮೂಗು, ಗಂಟಲು, ಎಲುವು ಮತ್ತು ಕೀಲು ತಪಾಸಣೆ, ಸ್ತ್ರೀರೋಗ ವಿಭಾಗ, ಕಣ್ಣು ತಪಾಸಣೆ ಇತ್ಯಾಗಿ ವಿಭಾಗದ ನುರಿತ ವೈದ್ಯರು ಭಾಗವಹಿಸುವುದಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆಯಬೇಕು ಎಂದೂ ವಿನಂತಿಸಲಾಗಿದೆ. 
ಕೆ.ಎಂ.ಸಿ. ಮೆಡಿಕಲ್ ಕಾಲೇಜ್ ಆಸ್ಪತ್ರೆ ಅತ್ತಾವರ, ಮಂಗಳೂರಿನಿಂದ ನುರಿತ ವೈದ್ಯರ ತಂಡ ಭಾಗವಹಿಸುವುದಿದ್ದು ವಿಶೇಷ ಚಿಕಿತ್ಸೆ ಅಗತ್ಯವಿದ್ದವರಿಗೆ ಕೆ.ಎಂ.ಸಿ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಮತ್ತು ಸರ್ಜರಿ ಸೌಲಭ್ಯವನ್ನು ಪಡೆಯಲು ಹಸಿರು ಕಾರ್ಡ ನೀಡಲಾಗುವುದು ಎಂದೂ ತಿಳಿಸಲಾಗಿದೆ. 
ಅದೇ ದಿನ ಕೆ.ಎಂ.ಸಿ. ದಂತ ಮಹಾವಿದ್ಯಾಲಯದಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಎರ್ಪಡಿಸಿದ್ದು ಬಾಯಿ ಮತ್ತು ಹಲ್ಲಿನ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ಹಳುಕು ಹಲ್ಲುಗಳಿಗೆ  ಸಿಮೆಂಟ್ ತುಂಬಿಸುವುದು, ಹಾಳಾದ ಹಲ್ಲುಗಳನ್ನು ಕೀಳುವುದು, ಮಕ್ಕಳಿಗಾಗಿ ವಿಶೇಷ ತಪಾಸಣೆ ತಜ್ಞ ವೈದ್ಯರಿಂದ ಮಾಡಲಾಗುವುದು ಎಂದೂ ತಿಳಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...