ಅತಿಕ್ರಮಣದಾರರಿಗೆ ಅನ್ಯಾಯ-ರಾಮಾ ಮೊಗೇರ್

Source: sonews | By Staff Correspondent | Published on 19th November 2017, 6:57 PM | Coastal News | Don't Miss |

ಭಟ್ಕಳ: ನಮ್ಮ ರಾಜ್ಯಕ್ಕೆ ಹೊರದೇಶದಿಂದ ಬಂದಂತಹ ಟಿಬೇಟಿಯನ್ ಅವರಿಗೆ ಜಿಲ್ಲೆಯ ಮುಂಡಗೋಡಿನಲ್ಲಿ ವಾಸವಿರುವುದಕ್ಕೆ ಅವಕಾಶವಿದೆ. ವಾಸಕ್ಕೆ ಹಕ್ಕು ಪತ್ರ ವಿತರಿಸುವ ಅಧಿಕಾರಿಗಳು ಜಿಲ್ಲೆಯಲ್ಲಿಯೆ ಹುಟ್ಟಿ ಬೆಳೆದ ನಮ್ಮವರಿಗೆ ಮಾತ್ರ ಹಕ್ಕು ಪತ್ರ ವಾಸಕ್ಕೆ ಅವಕಾಶವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಎಂದು ತಾಲೂಕು ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ ಆಕ್ರೋಶ ವ್ಯಕ್ಯಪಡಿಸಿದರು.

ಅವರು ಶನಿವಾರದಂದು ಇಲ್ಲಿನ ಖಾಸಗೀ ಹೋಟೆಲ್‍ನಲ್ಲಿ ಅತಿಕ್ರಮಣದಾರರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು “ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ಅತಿಕ್ರಮಣದಾರರಿಗೆ ಇನ್ನು ತನಕ ನ್ಯಾಯ ಸಿಗದೇ ಇರುವುದು ವಿಷಾದನೀಯವಾಗಿದೆ. ಒಟ್ಟು 10 ಸಾವಿರ ಅರ್ಜಿಯಲ್ಲಿ 2005ರಲ್ಲಿ ವಾಸವಿದ್ದರು ಎಸ್.ಸಿ./ಎಸ್.ಟಿ. ಯವರಿಗೆ ಪಟ್ಟಾ ಕೊಡಬೇಕೆಂದು ಅರಣ್ಯ ಹಕ್ಕು ಕಾನೂನಿನಲ್ಲಿ ಉಲ್ಲೇಖವಿದೆ. ಆದರೆ 2005ರಲ್ಲಿ ದಾಖಲೆಯಿಲ್ಲ ಎಂದು ಉಪವಿಭಾಗೀಯ ಸಮಿತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದು ಅರಣ್ಯ ಹಕ್ಕು ಕಾನೂನಿಗೆ ವ್ಯತಿಕರಿಕ್ತವಾಗಿದ್ದು, ಅರ್ಜಿ ತಿರಸ್ಕರಿಸಿದ ಬಳಿಕ ಅರ್ಜಿಗೆ 90 ದಿನಗಳ ಕಾಲಾವಕಾಶವಿದ್ದು ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದ ಅವರು ಕೆಲವು ಅಮಾಯಕರಿಗೆ ಒಂದು ಎರಡು ಗುಂಟೆ ಜಮೀನು ಇದ್ದರು ಅಂತಹವರು ಜಮೀನು ಹಿಡುವಳಿ ಇದೆ ಎಂದು ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ. ಆದರೆ ಅರಣ್ಯ ಹಕ್ಕು ಸಮಿತಿಯಲ್ಲಿ 2 ಎಕರೆವರೆಗಿನ ಜಮೀನು ಹೊಂದಿದವರಿಗೂ ಅರ್ಜಿ ಪುರಸ್ಕರಿಸಬೇಕೆಂದಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಪರಿಸ್ಕರಿಸದೇ ಸರಕಾರಕ್ಕೆ ತಪ್ಪು ಮಾಹಿತಿ ರವಾನಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೆ ಮುಂದಿನ ದಿನದಲ್ಲಿ ಇದೇ ರೀತಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುವುದನ್ನು ಮುಂದುವರೆಸಿದ್ದಲ್ಲಿ ಸರಕಾರಕ್ಕೆ 10 ರಿಂದ 15 ಸಾವಿರ ಅರಣ್ಯ ಅತಿಕ್ರಮಣದಾರರು ರಸ್ತೆ ತಡೆ ಮಾಡುವುದರ ಮೂಲಕ ಉಗ್ರ ಪ್ರತಿಭಟನೆಯನ್ನು ಮಾಡಲಾಗುತ್ತದೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಎಚ್ಚರಿಕೆಯನ್ನು ತಿಳಿಸಿದರು. 
ಅಧೀಕೃತವಾಗಿ ಸಮಾಜ ಕಲ್ಯಾಣ ಇಲಾಖೆಯವರು ನೀಡಿದ ಮಾಹಿತಿ ಅನುಸಾರ ಪರಿಶಿಷ್ಟ ಪಂಗಡಕ್ಕೆ 925 ಅರ್ಜಿಗಳಲ್ಲಿ ಉಪ ವಿಭಾಗದ ಮಟ್ಟದಲ್ಲಿ 388 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇನ್ನು ಸಮುದಾಯ ಅರಣ್ಯ ಹಕ್ಕು ಅರ್ಜಿಗಳ ಪೈಕಿ 237 ಅರ್ಜಿಗಳಲ್ಲಿ 73 ಅರ್ಜಿಯನ್ನು ಉಪವಿಭಾಗದ ಮಟ್ಟದಲ್ಲಿ ತಿರಸ್ಕರಿಸಲಾಗಿದೆ. ಹಾಗೂ ಇತರೆ ಪಾರಂಪರಿಕ ಅರಣ್ಯ ಹಕ್ಕು ಅರ್ಜಿಗಳ ಪೈಕಿ 7457 ಅರ್ಜಿಗಳಲ್ಲಿ 2621 ಅರ್ಜಿಗಳನ್ನು ಉಪವಿಭಾಗ ಮಟ್ಟದಲ್ಲಿ ತಿರಸ್ಕರಿಸಲಾಗಿದೆ ಎಂದು ತಾಲೂಕು ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ ವಿವರಿಸಿದ್ದಾರೆ. 
ಈ ಸಂಧರ್ಭದಲ್ಲಿ ತಾಲೂಕು ಅತಿಕ್ರಮಣದಾರರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಅಶ್ಪಾಕ್, ಸಿದ್ದಿಕಾ ಮಹಮ್ಮದ್ ರಿಝ್ವಾನ್, ಯಾಕೂಬ್ ಕೋಲಾ, ವಾಸೀ ಅಕ್ಕಿಹೊಳೆ, ಕೆ.ಸುಲೇಮಾನ್, ಪ್ರಕಾಶ ನಾಯ್ಕ, ಸಲೀಂ ಕುಂದನಗುಡಾ ಮತ್ತಿತರರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...