ಭಟ್ಕಳ: ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Source: S O News service | By Staff Correspondent | Published on 20th February 2017, 7:29 PM | Coastal News |

ಭಟ್ಕಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದ ಪರಮಾವಧಿಯನ್ನು ಮೀರಿದ್ದು ಇದರ ನಾಯಕರು ಅಕ್ರಮ ಆಸ್ತಿಪಾಸ್ತಿಯನ್ನು ಗಳಿಸುವಲ್ಲಿ ತಲ್ಲೀನರಾಗಿದ್ದಾರೆ ಜನವಿರೋಧಿ ಭ್ರಷ್ಟ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಭಟ್ಕಳತ ತಾಲೂಕು ಬಿಜೆಪಿ ಘಟಕ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. 
ರಾಜ್ಯದಲ್ಲಿ ಜಾರಿಗೆ ತಂದಿರುವ ಬಡಜನರ ಅಂತಿಮ ಸಂಸ್ಕಾರಕ್ಕಾಗಿ ನೀಡುವ ರೂ ೫೦೦೦/-ಗಳ ಯೋಜನೆಯಿಂದ ಹಿಡಿದು ಎಲ್ಲಾ ಯೋಜನೆಗಳು ಹಳ್ಳಾ ಹಿಡಿದಿವೆ. ಮರಳು ಮಾಫಿಯಾ ನಡೆಸುತ್ತಿರುವ ಸರಕಾರ ರಾಜ್ಯದಲ್ಲಿ ಮರಳು ಕೃತಕ ಅಭಾವವನ್ನು ಸೃಷ್ಟಿಸಿ ಬಡವರು ಮನೆಕಟ್ಟಿಕೊಳ್ಳಲು ಅಸಾಧ್ಯವಾಗಿದೆ. ಸರಕಾರದ ಯಾವುದೇ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಲು ಸಾದ್ಯವಾಗುತ್ತಿಲ್ಲ.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳು ಘೋಷಣೆಯಾಗಿದ್ದು ಯಾವುದೇ ವಿಷೇಶ ಅನುದಾನ ಹರಿದು ಬರುತ್ತಿಲ್ಲ. ಬಡ ಜನರಿಗೆ ಕೂಲಿ ಕೆಲಸವಿಲ್ಲದೆ ಗುಳೆ ಹೊರಟಿದ್ದಾರೆ. ರಾಜ್ಯದಲ್ಲಿ ತೆರೆದಿರುವ ಬೆರಳೆಣೆಕೆ ಗೋ ಶಾಲೆಗಳಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದಿರುವುದರಿಂದ ಗೋವುಗಳು ಸಾಯುತ್ತಾ ಸಾಗಿವೆ. ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ನಿಗದಿ ಪಡಿಸಿರುವ ವಿಶೇಷ ಘಟಕ ಯೋಜನೆ ಮೊತ್ತ ಸಂಪೂರ್ಣವಾಗಿ ಖರ್ಚುಮಾಡದೆ, ದಲಿತರಿಗೆ ಮುಖ್ಯವಾಹಿನಿಗೆ ಬರಲು ಅಡ್ಡಿಪಡಿಸಿದ್ದಾರೆ. ಕೆರೆ ಕಟ್ಟಿಗಳನ್ನು ಹೂಳೆತ್ತಿ ನೀರು ತುಂಬಿಸುವ ಕೆಲಸ ಮಾಡದಿದ್ದರಿಂದ ಈಗ ರಾಜ್ಯದಲ್ಲಿ ಜಲಕ್ಷಾಮವನ್ನು ಜನರು ಎದುರಿಸಬೇಕಾಗಿದೆ. ಕಾಂಗ್ರೇಸ ಸರ್ಕಾರಕ್ಕೆ ಯಾವುದೇ ಮುಂದಾಲೋಚನೆ ಇಲ್ಲ. ರಾಜ್ಯದ ಜನ ದನಕರುಗಳು ನೀರು ಆಹಾರವಿಲ್ಲದೆ ನಲುಗಿಹೊಗಿದ್ದಾರೆ. ಇಂತಹ ಭೃಷ್ಟ ಜನವಿರೋಧಿ ಕಾಂಗ್ರೇಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ್ ನಾಯ್ಕ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...