ಪಕ್ಷವನ್ನು ತರುವಲ್ಲಿ ವಿಸ್ತಾರಕರ ಪಾತ್ರ ಮಹತ್ವದ್ದಾಗಿದೆ-ಎಂ.ಜಿ.ನಾಯ್ಕ

Source: sonews | By Sub Editor | Published on 17th July 2017, 7:06 PM | Coastal News | Don't Miss |

ಭಟ್ಕಳ: ಅಮಿತ್ ಶಾ ರ ವಿಶಾಲ ದೂರದೃಷ್ಟಿಯ ಪರಿಣಾಮ ಬಿಜಪಿ ಪಕ್ಷದಲ್ಲಿ ವಿಸ್ತಾರಕ ಹುದ್ದೆ ಸೃಷ್ಟಿಯಾಗಿದ್ದು ಇವರಿಂದಲೇ ಪಕ್ಷ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿದೆ. ಈಗ ನಮ್ಮ ರಾಜ್ಯದಲ್ಲೂ ಪ್ರತಿ ಬೂತ್ ಹಾಗೂ ಗ್ರಾಮ ಮಟ್ಟದಲ್ಲಿ ವಿಸ್ತಾರಕರನ್ನು ನೇಮಿಸುವುದರ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಚುಕ್ಕಾಣಿ ಹಿಡಿಯುವಂತೆ ಮಾಡಲಾಗುವುದು ಈ ನಿಟ್ಟಿನಲ್ಲಿ ವಿಸ್ತಾರಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಉತ್ತರಕನ್ನಡ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಎಂ.ಜಿ.ನಾಯ್ಕ ಹೇಳಿದರು. 
ಅವರು ತಾಲುಕಿನ ಪಕ್ಷದ ಮುಠ್ಠಳ್ಳಿ-ಮೂಢಭಟ್ಕಳ ಬೂತ ಕಮಿಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.  
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರವರು ವಿಸ್ತಾರಕ ಎಂಬ ಯೋಜನೆಯನ್ನು ದೇಶಾದ್ಯಂತ ಪರಿಚಯಿಸಿದ್ದು, ಈ ಮೂಲಕ ಈಗಾಗಲೇ ನಡೆದಿರುವ ಚುನಾವಣೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಪಕ್ಷ ಗೆದ್ದಿದೆ. ಈಗ ಕರ್ನಾಟಕದಲ್ಲಿಯೂ ವಿಸ್ತಾರಕ ಯೋಜನೆಯನ್ನು ಚುನಾವಣೆಯ ದೃಷ್ಟಿಕೋನದಲ್ಲಿ ಅಳವಡಿಸಿದ್ದು, ಎರಡು ತಿಂಗಳಿನಿಂದ ಕಾರ್ಯಚಾಲನೆಯಲ್ಲಿದೆ. ರಾಜ್ಯದ ಎಲ್ಲಾ ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಯ ಉದ್ದೇಶ ಈ ವಿಸ್ತಾರಕರದ್ದಾಗಿದೆ ಎಂದರು. 
ಮೂಢಭಟ್ಕಳ-ಮುಠ್ಠಳ್ಳಿ ಬೂತ್ ಮಟ್ಟದ ವಿಸ್ತಾರಕರಾಗಿ ಆಯ್ಕೆಯಾದ  ಶಿವಾನಿ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ  ಬಿಜೆಪಿ ಈಗಾಗಲೇ ಅಧಿಕಾರದಲ್ಲಿದ್ದು ಮುಂದಿನ ಚುನಾವಣೆಯಲ್ಲಿ  ಕರ್ನಾಟಕದಲ್ಲಿ ಅಧಿಕಾರ ಹಿಡಿಯಲಿದೆ ಈ ನಿಟ್ಟಿನಲ್ಲಿ ಈಗಿಂದಲೆ ಪಕ್ಷವನ್ನು ಸಂಘಟಿಸಬೇಕಾಗಿದೆ ಎಂದರು. 
ಪಕ್ಷಕ್ಕೆ ಸೇವೆ ಸಲ್ಲಸಿದ ೧೩ ಮಂದಿ ಹಿರಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಗುರುತಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. 
ಈ ಸಂದರ್ಭದಲ್ಲಿ ಮುಠ್ಠಳ್ಳಿ ಬೂತ್ ಮಟ್ಟದ ಅಧ್ಯಕ್ಷ ವೆಂಕಟರಮಣ ನಾಯ್ಕ, ಜಗದೀಶ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ನಾಯ್ಕ, ಬೇಬಿ ನಾಯ್ಕ, ವೆಂಕಟೇಶ ನಾಯ್ಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. (ಫೋಟೊ: ೧೭-ಬಿಕೆ‌ಎಲ್-೦೧-ಬಿಜೆಪಿ)


 

Read These Next

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...