ಬೆಂಗ್ರೆಯಲ್ಲಿ  ಗಾರ್ಮೆಂಟ್ಸ್ ಮೆಕಿಂಗ್ ತರಬೇತಿ ಉದ್ಘಾಟನೆ

Source: sonews | By Staff Correspondent | Published on 19th July 2017, 6:51 PM | Coastal News | Don't Miss |


ಭಟ್ಕಳ: ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೆಶ್ವರ ಇವರ ವತಿಯಿಂದ   ೬ ತಿಂಗಳ ಉಚಿತ ಗಾರ್ಮೆಂಟ್ಸ್ ಮೆಕಿಂಗ್ ತರಬೇತಿಯನ್ನು   ಬೆಂಗ್ರೆಯಲ್ಲಿ ಉದ್ಘಾಟಿಸಲಾಯಿತು, 
ಉದ್ಘಾಟನೆಯನ್ನು  ನೆರವೇರಿಸಿ ಮಾತನಾಡಿದ  ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ವಿ.ಹೆಗಡೆ, ಬದಲಾಗುತ್ತಿರುವ ಕಾಲಮಾನದಲ್ಲಿ ಆಧುನಿಕ ಜ್ಞಾನ ವೃದ್ಧಿಸಿಕೊಳ್ಳುವುದರೊಂದಿಗೆ ಸೂಕ್ತ ಉದ್ಯೋಗವನ್ನು  ಪಡೆಯುವ ಸವಾಲು ಇಂದಿನ ಮಹಿಳಾ ಅಭ್ಯರ್ಥಿಗಳ ಮುಂದಿದೆ. ಸೂಕ್ತ ತರಬೇತಿ ಪಡೆದುಕೊಂಡವರಿಗೆ ಹೆಚ್ಚು ಅನುಕೂಲವಿದೆ ಎಂದು ತಿಳಿಸಿದರು. 
ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಎನ್.ಎಸ್ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಚಾರ್ಯರು ಮತ್ತು ಸಂಯೋಜಾನಾಧಿಕಾರಿ ಕೆ.ಮರಿಸ್ವಾಮಿ,  ಸಂಸ್ಥೆಯು ಹೆಚ್ಚು ಉದ್ಯೋಗಾವಕಾಶ  ಇರುವ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಂಡಿದ್ದು ಸೂಕ್ತ ತರಬೇತಿ ನೀಡುವ ಕೆಲಸ ಮಾಡುತ್ತಿದೆ. ಹೊಲಿಗೆ ತರಬೇತಿಯನ್ನು  ಪಡೆದುಕೊಂಡ ಮಹಿಳೆಯರು ಔದ್ಯೋಗಿಕ ಜೀವನಕ್ಕೆ ಮುನ್ನಡಿ ಬರೆಯಬೇಕೇಂದು ತಿಳಿಸಿದರು. 

ಮುಖ್ಯ ಅಥಿತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ವ್ಯವಸ್ಥಾಪಕ ಜ್ಯೋತಿ ಬಾಳ ಮಾತನಾಡಿ, ಸ್ವ ಉದ್ಯೋಗ ಮಾಡಬಯಸುವ ಮಹಿಳೆಯರಿಗೆ ನಮ್ಮ ಬ್ಯಾಂಕ್‌ನಿಂದ  ಸದಾಕಾಲ ಸಾಲ ಸೌಲಭ್ಯದ ನೆರವು ನೀಡಲಾಗುವುದು ಎಂದು ತಿಳಿಸಿದರು. 
ವೇದಿಕೆಯಲ್ಲಿ ಬೇಂಗ್ರೆ ಗ್ರಾಮ ಪಂಚಾಯಿತ ಸದಸ್ಯೆ ಮಂಜಮ್ಮ ನಾಯ್ಕ ,ಕೆ.ಡಿ.ಡಿ.ಸಿ ಸಂಸ್ಥೆಯ ಫೇಲಿಕ್ಸ್ ಫರ್ನಾಂಡಿಸ್,   ಆದರ್ಶ ಮಹಾಸಂಘದ ಅಧ್ಯಕ್ಷೆ  ಭಾರತಿ ನಾಯ್ಕ ಹಾಗೂ ಹೊಲಿಗೆ ಶಿಕ್ಷಕಿ ಜಯಂತಿ ನಾಯ್ಕ ಉಪಸ್ಥಿತರಿದ್ದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...