ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮಾಂಕಾಳ್ ಅಭ್ಯರ್ಥಿ ಸಿಎಂ ಗ್ರೀನ್ ಸಿಗ್ನಲ್

Source: sonews | By Sub Editor | Published on 6th December 2017, 7:08 PM | Coastal News | Don't Miss |

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗಾಗಿ 1200 ರೂ ಕೋಟಿ ಅನುದಾನ ಪಡೆದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರು ಮಾಂಕಾಳ್ ವೈದ್ಯರೇ ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂಬ ಗ್ರೀನ್ ಸಿಗ್ನಲ್ ಮುಖ್ಯಮಂತ್ರಿಗಳು ಬುಧವಾರ ಭಟ್ಕಳದಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭದಲ್ಲಿ ನೀಡಿದರು. 
ತಮ್ಮ ಉದ್ಘಾಟನಾ ಭಾಷಣದುದ್ದಕ್ಕೂ ಮಾಂಕಾಳ್ ವೈದ್ಯರ ಪ್ರಮಾಣಿಕತೆ, ಕ್ರೀಯಶೀಲತೆಯನ್ನು ಹೊಗಳಿದ ಮುಖ್ಯಮಂತ್ರಿ ಇಂತಹ ವ್ಯಕ್ತಿ ಮುಂದಿ ಚುನಾವಣೆಗೆ ನಿಮಗೆ ಬೇಕಾ ಬೇಡ ಎಂದಾಗ ಸಭೀಕರ ಕರತಾಡನ ಹಾಗೂ ಘೋಷಣೆಗಳಿಂದ ಸ್ವಾಗತಿಸಿದರು. 
ಭಟ್ಕಳದ ಈ ದಿನ ಸುವಾರ್ಣಾಕ್ಷರಗಳಿಂದ ಬರೆದಿಡುವ ದಿನವಾಗಿದ್ದು ಇಷ್ಟೊಂದು ದೊಡ್ಡಪ್ರಮಾಣದ ಅನುದಾನ ಬಹುಷ ಯಾವುದೇ ಶಾಸಕರೂ ತಂದಿಲ್ಲ. ಯಾವಾಗಲೂ ಕ್ಷೇತ್ರದ ಅಭಿವೃದ್ಧಿಯ ಕುರಿತು ಚಿಂತಿಸುವ ಶಾಸಕರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಇಂತಹ ವ್ಯಕ್ತಿಗೆ ನಿಮ್ಮ ಆಶೀರ್ವಾದ ಇರಲಿ ಎಂದು ಹಾರೈಸಿದ ಅವರು ಕಡಿಮೆ ಮಾತು ಹೆಚ್ಚು ದುಡಿಮೆ ಎನ್ನುವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಮಾಂಕಾಳ್ ವೈದ್ಯರು ಪ್ರತಿಬಾರಿಯೂ ಹತ್ತಿಪ್ಪತ್ತು ಅರ್ಜಿಗಳನ್ನು ಹಿಡಿದುಕೊಂಡು ಬರುತ್ತಾರೆ ಇಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಇವರು ಸದಾ ಕ್ಷೇತ್ರದ ಅಭಿವೃದ್ಧಿಯನ್ನು ಬಯಸುವವ ಕೆಲವೇ ಶಾಸಕರಲ್ಲಿ ಮಾಂಕಾಳು ವೈದ್ಯರು ಒಬ್ಬರು ಎಂದು ಮುಖ್ಯಮಂತ್ರಿ ಹೇಳಿದರು. 

ಆಕ್ಷಾಂಕಿಗಳಿಗೆ ತಣೀರು ಬಿಟ್ಟ ಸಿ.ಎಂ: ಭಟ್ಕಳದ ಕಾಂಗ್ರೇಸ್ ಅಭ್ಯರ್ಥಿ ತಾನೆ ಎಂದು ಹೇಳಿಕೊಂಡು ಬೆಂಗಳೂರು ದಿಲ್ಲಿ ಅಲೆಯುತ್ತಿದ್ದ ಟಿಕೇಟ್ ಅಕಾಂಕ್ಷಿಗಳಿಗೆ ಸಿದ್ದರಾಮಯ್ಯನವರ ಈ ಘೋಷಣೆಯಿಂದಾಗಿ ಅವರ ಕನಸುಗಳಿಗೆ ತಣ್ಣೀರೆರಚಿದಂತಾಗಿದೆ. 
 

Read These Next

ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ-ನೂತನ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಬಿ.ಜೆ.ಪಿ. ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ...

ಭಟ್ಕಳ: ಗುಡುಗು ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ. ಘಟನೆಯಲ್ಲಿ ಮನೆಯ 3ಕ್ಕೂ ಅಧಿಕ ಮಂದಿಗೆ ಗಾಯ

ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಹಿತ ಮಳೆಗೆ ಗುರುವಾರದಂದು ತಡರಾತ್ರಿ ಇಲ್ಲಿನ ...

ಕರ್ನಾಟಕದಲ್ಲಿ ಕುಮಾರಪರ್ವ ಆರಂಭ; ೨೫ನೇ ಮುಖ್ಯಮಂತ್ರಿಯಾಗಿ ಎಚ್ಡಿಕೆ; ಉ ಮು.ಮಂ ಡಾ.ಜಿ.ಪರಮೇಶ್ವರ ಪ್ರಮಾಣವಚನ

ಬೆಂಗಳೂರು:ಕಾಂಗ್ರೇಸ್ ಮತ್ತು ಜೆ.ಡಿಎಸ್ ಮೈತ್ರಿಕೋಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಎಚ್.ಡಿ.ಕುಮಾರ್ ಸ್ವಾಮಿ ರಾಜ್ಯದ ೨೫ನೇ ...

ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ-ನೂತನ ಶಾಸಕ ಸುನಿಲ್ ನಾಯ್ಕ

ಭಟ್ಕಳ: ಬಿ.ಜೆ.ಪಿ. ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ...