ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಟ್ಕಳದ ಯುವಕ

Source: sonews | By sub editor | Published on 11th November 2017, 12:42 AM | Coastal News | Sports News | Special Report | Don't Miss |

ಭಟ್ಕಳ: ಆರ್ಟ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಂಚಿದ ಭಟ್ಕಳದ ಯುವಕ, ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರಹೊಮ್ಮಿದ ವಿನು ಮಾನಕಾಮೆ, ಅತ್ಯಂತ ಚುರುಕಿನ ಯುವಕ ವಿನಾಯಕ ಮಾರುತಿ ಶೇಟ್ ಈತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಡಾನ್ಸ್, ನಾಟಕ, ಫೋಟೋಗ್ರಫಿಯಲ್ಲಿ ಹಾಗೂ ಕಿರುಚಿತ್ರ ತಯಾರಿಕೆಯಲ್ಲಿಯೂ ಕೂಡಾ ಆಸಕ್ತಿ ಹೊಂದಿದವನಾಗಿದ್ದಾನೆ.


ಆರ್ಟ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಇವರು ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಎರ್ಪಡಿಸಿದ್ದ ಅಡಿಶನ್‍ನಲ್ಲಿ 300 ಜನ ಸಹ ಸ್ಪರ್ಧಿಗಳಲ್ಲಿ ಭಾಗವಹಿಸಿದ್ದ ಈತ ಅಂತಿಮವಾಗಿ 23ರಲ್ಲಿ ಓರ್ವನಾಗಿ ಹೊರ ಹೊಮ್ಮಿ ಸ್ಪರ್ಧೇಯ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾನೆ. ಅಕ್ಟೋಬರ್‍ನಲ್ಲಿ ಮಂಗಳೂರಿನ ರಿವರ್‍ಡೇಯಲ್ಲಿ ನಡೆದ ಮಿಸ್ಟರ್ ಎಂಡ್ ಮಿಸ್ ಗ್ರಾಂಡ್ ಸೌತ್ ಇಂಡಿಯಾ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರ ಹೊಮ್ಮುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರ, ಗೋವಾಗಳಿಂದ ಸ್ಪರ್ಧಿಗಳು ಆಗಮಿಸಿದ್ದು ಅವರೆಲ್ಲನ್ನು ಹಿಂದಿಕ್ಕಿದ ವಿನು ಮಾನಕಾಮೆ ಕರ್ನಾಟಕ ಕೆಟಗರಿಯಿಂದ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ.
ಸ್ಪರ್ಧೆಯ ನಂತರ ನಗದು ಸೇರಿದಂತೆ ಪ್ರಶಸ್ತಿ ಪತ್ರವನ್ನು ವಿತರಿಸಿದ್ದು, ಈತ ಓರ್ವ ಭರವಸೆಯ ಯುವಕನಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾನೆ.
ಸ್ಪರ್ಧೇಯಲ್ಲಿ ಕರ್ನಾಟಕದಿಂದ ಒಟ್ಟೂ 5 ಜನರಲ್ಲಿ ಮೊದಲಿಗನಾದ ಈತನಿಗೆ ಟಾಲೆಂಟ್ ರೌಂಡ್‍ನಲ್ಲಿ ಈತ ಬಿಡಿಸಿದ ಕರಾವಳಿಯ ಚಿತ್ರ ಎಲ್ಲರ ಗಮನ ಸೆಳೆದಿದ್ದರೆ, ಈತನ ಹಾಡು, ಡಾನ್ಸ್ ಕೂಡಾ ಗಮನ ಸೆಳೆದಿರುವುದು ಅಂತಿಮವಾಗಿ ವಿಜಯಿಯಾಗಲು ಕಾರಣವಾಗಿದೆ. ಜೊತೆಗೆ ಸ್ಫರ್ಧೇಯಲ್ಲಿ ಮುಖ್ಯವಾಗಿ ಟ್ರೇಡೀಶನಲ್ ರೌಂಡ್, ಪಾರ್ಟಿವೇರ್ ರೌಂಡ್, ಫ್ರೀವೇರ್ ಸೇರಿದಂತೆ ವಿವಿಧ ರೌಂಡ್ಸ್‍ಗಳಲ್ಲಿ ಕೂಡಾ ಈತ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ.
ಕರ್ನಾಟಕದಿಂದ ಮೈಸೂರು, ಮಂಡ್ಯ, ಬೆಂಗಳೂರುನಿಂದ ಬಂದಿದ್ದ ಸ್ಪರ್ಧಿಗಳಲ್ಲಿ ಈತ ಉತ್ತರ ಕನ್ನಡದವನಾಗಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಭಟ್ಕಳದ ಸೋನಾರಕೇರಿಯ ಮಾರುತಿ ಎಂ.ಶೇಟ್ ಹಾಗೂ ಪ್ರೇಮಾ ಇವರ ಪುತ್ರನಾಗಿರುವ ಈತ ಇಲ್ಲಿನ ದೈವಜ್ಞ ಬ್ರಾಹ್ಮಣ ಸಮಾಜದ ಸಕ್ರಿಯ ಕಾರ್ಯಕರ್ತನೂ ಆಗಿದ್ದಾನೆ.
ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮೋಡೆಲಿಂಗ್, ಡಾನ್ಸ್, ಹಾಡು, ನಾಟಕ, ಪ್ರಕೃತಿಯಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಈತ ನಂತರದ ತನ್ನ ಶಾಲಾ ದಿನಗಳಲ್ಲಿ ಕೂಡಾ ಅವುಗಳನ್ನು ಮುಂದುವರಿಸಿಕೊಂಡು ಹೋಗಿದ್ದು ಆಸಕ್ತಿಯ ಹಿಂದೆ ಬಿದ್ದು ಒಂದು ಹಂತ ಯಶಸ್ಸು ಪಡೆದಿದ್ದಾನೆ.

ಕೃಪೆ:http://euttarakannada.in

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...

ಫಿಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಸ್ವೀಡನ್: 60 ವಷರ್ಗಳ ಬಳಿಕ ಮೊದಲ ಪಂದ್ಯ ಗೆದ್ದ ಸ್ವೀಡನ್

ಮಾಸ್ಕೋ: ಫಿಫಾ ವಿಶ್ವಕಪ್ 2018ರ 'ಎಫ್' ಗುಂಪಿನ ಸೌತ್ ಕೊರಿಯಾ ಹಾಗೂ ಸ್ವೀಡನ್ ತಂಡಗಳ ನಡುವಣ ಪಂದ್ಯದಲ್ಲಿ ಸ್ವೀಡನ್ 1-0 ಅಂತರದ ಜಯಗಳಿಸಿ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...