ಭಟ್ಕಳ: ಫೆ.11ರಂದು ಸರ್ ಸೈಯ್ಯದ್ ಆಹ್ಮದ್ ಖಾನ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಮುಷಾಯಿರಾ

Source: sonews | By sub editor | Published on 9th February 2018, 6:55 PM | Coastal News | State News | Don't Miss |

ಭಟ್ಕಳ: ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪಕ ಶೈಕ್ಷಣಿಕ ಮಾರ್ಗದರ್ಶಕ ಸರ್ ಸೈಯ್ಯದ್ ಆಹ್ಮದ್ ಖಾನ್ ರ 200ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಉರ್ದು ಅಕಾಡೆಮಿ, ಅಂಜುಮನ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಫೆ.11 ರಂದು ಬೆಳಿಗ್ಗೆ 9.30ಗಂಟೆಗೆ ‘ಸರ್ ಸೈಯ್ಯದ್ ರ ಸಾಹಿತ್ಯಿಕ ಮತ್ತು ಶೈಕ್ಷಣಿಕ ಸೇವೆ’ ಎಂಬ ವಿಷದಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದು ಸೆಮಿನಾರ್ ಸಂಚಾಲಕ ಪ್ರೋ.ಅಬ್ದುಲ್ ರವೂಫ್ ಸವಣೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಡಾ.ಸೈಯ್ಯದ್ ಅಬ್ದುಲ್ ಕಾದಿರ್ ಸರಗಿರೋ ಉದ್ಘಾಟಿಸುತ್ತಿದ್ದು ಪಾಟ್ನ(ಬಿಹಾರ್)ವಿ.ವಿ ಉರ್ದು ವಿಭಾಗದ ಮುಖ್ಯಸ್ಥ ಡಾ.ಜಾವಿದ್ ಪ್ರಮುಖ ಉಪನ್ಯಾಸವನ್ನು ನೀಡಲಿರುವುದು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ ಅಬ್ದುಲ್ ರಹ್ಮಾನ್ ಬಾತಿನ್ ವಹಿಸುವರು. 
ಕೇರಳದ ಕಾಳಿ ಸಂಸ್ಕೃತ ವಿ.ವಿ. ಕೃಷ್ಣ ಕ.ನಕುಲ್ ಸೇರಿಂದತೆ ಮುಂಬೈ, ಕಲಬುರ್ಗಿ, ಬೆಂಗಳೂರು ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಪ್ರಬಂಧಗಳನ್ನು ಮಂಡಿಸಲಿದ್ದಾರೆ. 
ರಾತ್ರಿ 9ಗಂಟೆಗೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ಮೈದಾನದಲ್ಲಿ ಉರ್ದು ಮುಷಾಯಿರಾ ನಡೆಯಲಿದ್ದು ಬೆಂಗಳೂರಿನ ಖ್ಯಾತ ಉರ್ದು ಕವಿ ರಿಯಾಝ್ ಆಹ್ಮದ್ ಖುಮಾರ್ ನಿರೂಪಣೆಯನ್ನು ಮಾಡಲಿದ್ದಾರೆ. ಮುಷಾಯಿರಾದಲ್ಲಿ ರಾಜಸ್ಥಾನದ ಕವಿ ಯೂಸೂಫ್ ರಾಝ್, ಸಿರಾಜ್ ಸೋಲಾಪುರಿ, ಅಸ್ಲಂ ಬನಾರಸಿ ಸೇರಿದಂತೆ ಸ್ಥಳೀಯ ಕವಿಗಳು ಭಾಗವಹಿಸಲಿದ್ದಾರೆ. 
 

Read These Next

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...