ಮಠಮಾನ್ಯಗಳಿಂದ ಧಾರ್ಮಿಕತೆಯ ಅರಿವು-ಪರ್ತಗಾಳಿ ಶ್ರೀ

Source: S O News service | By Staff Correspondent | Published on 18th January 2017, 11:15 PM | Coastal News | Don't Miss |

ಭಟ್ಕಳ: ಅಳ್ವೇಕೋಡಿ ಶ್ರೀ ಮಾರಿಜಾತ್ರ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು  ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. 

ಧಾರ್ಮಿಕತೆಯ ಅರಿವು ಮೂಡಿಸುವಲ್ಲಿ ಮಠಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಒಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೀಠವು ಮೂರನೇ ವರ್ಷದ ಜಾತ್ರಾ  ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತಸವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವ ಮಂದಿರಗಳು ಸಂಸ್ಕಾರದ ಪ್ರಮುಖ ಕೇಂದ್ರಗಳಾಗಿವೆ.  ಜಿಲ್ಲೆಯಲ್ಲಿ ಇಂದು ಧಾರ್ಮಿಕ ಉತ್ಸವಗಳು, ದೇವ ಮಂದಿಗಳು ಹೆಚ್ಚುತ್ತಿರುವುದು ಜನರು ಹೆಚ್ಚು ಹೆಚ್ಚು ಧಾರ್ಮಿಕತೆಯೆಡೆಗೆ ಬರುತ್ತಿರುವುದಕ್ಕೆ ಸಾಕ್ಷಿಯಾಗಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ರೀಗಳು ಹೇಳಿದರು. 
ಸಮಾಜದಲ್ಲಿ ಒಬ್ಬರನ್ನು ನೋಡಿ ಇನ್ನೊಬ್ಬರು ಕಲಿಯಬೇಕು, ಅಂತಹ ಉದಾಹರಣೆಯಿದ್ದರೆ ಅದು ಅಳ್ವೇಕೋಡಿ ಕ್ಷೇತ್ರಕ್ಕೆ ಸಲ್ಲುತ್ತದೆ. ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರಕ್ಕೆ ಬರುತ್ತಿದ್ದು ಅಂದಿಗೂ ಇಂದಿಗೂ ಬಹಳ ಬೆಳವಣಿಗೆಯಾಗಿದೆ.  ಹಿಂದೆ ಇದ್ದ ಚಿಕ್ಕ ದೇವಸ್ಥಾನ ಇಂದು ಭವ್ಯ ಮಂದಿರವಾಗಿದೆ.  ಅಥಿತಿಗಳಿಗೆ ಉಳಿದುಕೊಳ್ಳಲು ವಾಸ್ಥಾನ, ಕಲ್ಯಾಣ ಮಂಟಪ ಸಹ ಇದ್ದು ಭಜಕ ಭಕ್ತರಿಗೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸುವಲ್ಲಿ ಕ್ಷೇತ್ರ ಯಶಸ್ವೀಯಾಗಿದೆ ಎಂದರು. ಇದಕ್ಕೂ ಪೂರ್ವ ಶ್ರೀಗಳು ಮಾರಿಕಾಂಬೆಯ ದರ್ಶನ ಪಡೆದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಯಶ್ರೀ ಮೊಗೇರ ಉಪಸ್ಥಿತರಿದ್ದು ಮಾತನಾಡಿದರು. ಧಾರ್ಮಿಕ ಸಭೆಯಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಕೆ. ಎಂ. ಕರ್ಕಿ, ಸಿರ್ಸಿ ಮೊಗೇರ ಸಮಾಜದ ಅಧ್ಯಕ್ಷ ಗಣೇಶ ಜೈವಂತ, ಕುಮಟಾದ ಲೆಕ್ಕಪರಿಶೋಧಕ ಜಿ.ಎಸ್. ಕಾಮತ್, ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ ಜಟ್ಗಾ ಮೊಗೇರ, ಶ್ರೀ ಲಕ್ಷ್ಮೀ ಸರಸ್ವತಿ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಮೊಗೇರ, ಪ್ರಮುಖರಾದ ಗೋಪಾಲ ಮೊಗೇರ ಮುಂತಾದವರು ಉಪಸ್ಥಿತರಿದ್ದರು. 
ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಸ್ವಾಗತಿಸಿದರು. ಶ್ರೀ ದೇವಸ್ಥಾನದ ಆಡಳಿತ ಧರ್ಮದರ್ಶಿ ನಾರಾಯಣ ದೈಮನೆ ದೇವಸ್ಥಾನದ ಧರ್ಮದರ್ಶಿಗಳಾದ ರಾಮಾ ನಾಯ್ಕ, ಹನುಮಂತ ನಾಯ್ಕ  ಮುಂತಾದವರು ಉಪಸ್ಥಿತರಿದ್ದರು. 
ಶ್ರೀಗಳ ಸಮ್ಮುಖದಲ್ಲಿ  ಜಯಶ್ರೀ ಮೊಗೇರ, ಕೆ. ಎಂ. ಕರ್ಕಿ,  ಗಣೇಶ ಜೈವಂತ,  ಜಿ.ಎಸ್. ಕಾಮತ್, ಜಟ್ಗಾ ಮೊಗೇರ,  ಭಾಸ್ಕರ ಮೊಗೇರ, ಗೋಪಾಲ ಮೊಗೇರ ಮುಂತಾದವರನ್ನು ಶಾಲು ಹೊದಿಸಿ ಗೌರವಿಸಲಾಯಿತು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...