ಕೃಷಿ  ಸ್ವ-ಉದ್ಯೋಗ ವಿಚಾರ ಸಂಕೀರ್ಣ

Source: sonews | By Staff Correspondent | Published on 18th September 2017, 11:46 PM | Coastal News | Don't Miss |

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ/ಭಟ್ಕಳ ವತಿಯಿಂದ ಹೆರ್ತಾರದ ಶ್ರೀ ಸಾರ್ವಜನಿಕ  ಗಣೇಶೋತ್ಸವ ಸಭಾಭವನದಲ್ಲಿ ಕೃಷಿ  ಸ್ವ-ಉದ್ಯೋಗ ವಿಚಾರ ಸಂಕೀರ್ಣ ಕಾರ್ಯಕ್ರಮ ನಡೆಯಿತು. 
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪದ್ಮಯ್ಯ ಮೊಗೇರ  ಆಧುನಿಕ ಯುಗದಲ್ಲಿ ಕೃಷಿಗೆ ಜಾಸ್ತಿ ಒತ್ತು ಕೊಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕೆಲಸ ಶ್ಲಾಘನೀಯ ಎಂದರು. 
ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ ಅಧ್ಯಕ್ಷ ನಾರಾಯಣ ದುಗಪ್ಪ ಹೊಳಮಕ್ಕಿ ವಹಿಸಿದ್ದರು. 
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಎಸ್.ಎ.ಡಿ.ಎಚ್. ತೋಟಗಾರಿಕೆ ಅಧಿಕಾರಿ ಕುಮಾರಿ ಶ್ವೇತ ಎಮ್. ಕರ್ಕಿ ಅವರು ಲಾಭದಾಯಕ ಕೃಷಿಯ  ಬಗ್ಗೆ ಮಾಹಿತಿ ನೀಡಿದರು, 
ಹೆಬಳೆಯ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿರುವ ಲಕ್ಷ್ಮೀ ವೆಂಕಟರಮಣ ನಾಯ್ಕ ಇವರು ತಮ್ಮ ಸ್ವ ಅನುಭವಗಳನ್ನು ಬಿಚ್ಚಿಟ್ಟರು.  
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಎಮ್.ಎಸ್. ಈಶ್ವರ ಮಾತನಾಡಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯು  ಕೃಷಿ ಹಾಗೂ ಸ್ವ-ಉದ್ಯೋಗಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು .ಕೃಷಿ ಕುರಿತು ಇದ್ದ ಕೃಷಿಯಲ್ಲಿಯೇ ಆಧುನಿಕ ರೀತಿಯ ಕೃಷಿ ಪದ್ದತಿಯನ್ನು  ಅಳವಡಿಸಿಕೊಂಡರೆ ಉತ್ತಮ ಲಾಭಾ ಪಡೆಯಲು ಸಾಧ್ಯವಾಗುವುದು ಅದಕ್ಕೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಕೆಲಸ  ಮಾಡುತ್ತಿದ್ದು ಪ್ರತಿಯೋರ್ವರೂ ಕೂಡಾ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.  
ಮುಖ್ಯ ಅಥಿತಿಗಳಾಗಿ ಪ್ರಕಾಶ ದೇವಪ್ಪ ನಾಯ್ಕ, ಕೃಷ್ಣ ಮೊಗೇರ, ಕುಪ್ಪ ನಾಯ್ಕ, ಲೋಕೇಶ ನಾಯ್ಕ ಉಪಸ್ಥಿತರಿದ್ದರು. 
ಸೇವಾ ಪ್ರತಿನಿಧಿ ಈಶ್ವರ ಮೊಗೇರ ಸ್ವಾಗತಿಸಿದರು. ಹೆಬಳೆ ವಲಯದ ಮೇಲ್ವಿಚಾರಕ ನಾಗೇಶ ಎನ್.,  ನಿರೂಪಿಸಿದರು.  ಕೃಷಿ ಮೇಲ್ವಿಚಾರಕ ವಿಜಯ ವಂದಿಸಿದರು
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...